ಹುಬ್ಬಳ್ಳಿ: ಬಜರಂಗದಳ ಬ್ಯಾನ್ ಮಾಡಿದರೆ ಹನುಮ ಭಕ್ತರು ನಿಮ್ಮ ಸರ್ಕಾರ ಹಾಗೂ ಪಕ್ಷವನ್ನು ಬೇರು ಸಮೇತ ಕಿತ್ತೊಗೆಯುತ್ತಾರೆ. ದೇಶದ್ರೋಹಿ ಪಿ.ಎಫ್.ಐ ಜೊತೆ ಹೋಲಿಕೆ ಮಾಡಿದರೆ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನವಲಗುಂದ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ ಅವರ ಪರವಾಗಿ ಮತಯಾಚನೆ ಹಾಗೂ ರೋಡ್ ಷೋ ನಂತರದ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ದೇಶದ್ರೋಹಿ ಪಿ.ಎಫ್.ಐ ಬ್ಯಾನ್ ಮಾಡಿದ್ದಾರೆ.‌ ಆದರೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ದೇಶದ ಇತಿಹಾಸ, ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಬೆಳಸುವ ಸಂಘಟನೆಯನ್ನು ಬ್ಯಾನ್ ಮಾಡುವುದಾಗಿ ಘೋಷಿಸಿದ್ದಾರೆ. ಸಂಘಟನೆ ತಂಟೆಗೆ ಹೋದರೆ ಹನುಮ ಭಕ್ತರು ನಿಮ್ಮ ಪಕ್ಷವನ್ನು ಬೇರು ಸಮೇತ ಕಿತ್ತೊಗೆಯುತ್ತಾರೆ ಎಂದ ಸಿಎಂ, ಭಾಷಣದ ಕೊನೆಗೆ ಬಜರಂಗಿ.. ಬಜರಂಗಿ… ಎಂದು ಘೋಷಣೆ ಕೂಗಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಕಾಂಗ್ರೆಸ್ ನವರಿಗೆ ಧಮ್ಮು ತಾಕತ್ತಿದ್ದರೆ ಬಜರಂಗದಳ ಬ್ಯಾನ್ ಮಾಡಲಿ ನೋಡೋಣ. ಡಿ.ಕೆ.ಶಿವಕುಮಾರ ನನ್ನ ನಾಲಿಗೆ ಕತ್ತರಿಸುತ್ತೇನೆ ಎಂದು ಹೇಳಿದ್ದಾರೆ. ಅವರಿಗೆ ಗಂಡಸ್ತನ ಇದ್ದರೆ ಬ್ಲೇಡ್ ತೆಗೆದು ನೋಡಲಿ ಎಂದು ಸವಾಲು ಹಾಕಿದರು. ಕೇಂದ್ರ ಹಾಗೂ ರಾಜ್ಯ ಸರಕಾರ ಮರಾಠ, ಲಿಂಗಾಯತ ಸೇರಿದಂತೆ ಎಲ್ಲಾ ಸಮಾಜಗಳಿಗೆ ಸಾಮಾಜಿಕ ನ್ಯಾಯ ನೀಡಿದ್ದಾರೆ. ಆದರೆ ಈ ಮೀಸಲಾತಿಯನ್ನು ಕಿತ್ತುಹಾಕುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತೀರಾ ಎಂದರು.

error: Content is protected !!