
ಕಾರಟಗಿ :ಸಿದ್ದಾಪುರ 9ನೇ ವಾರ್ಡ್ ವ್ಯಾಪ್ತಿಗೆ ಬರುವ ಹರಿಜನ ಓಣಿಯಲ್ಲಿ ಶಿವರಾಜ್ ತಂಗಡಿಗಿಯವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಶಿವರಾಜ್ ತಂಗಡಿಗಿಯವರ ಸಹೋದರ ವೆಂಕಟೇಶ್ ತಂಗಡಗಿ ಹರಿಜನ ಓಣಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಯುವಕರು, ಮಹಿಳೆಯರು, ಹಿರಿಯರು ಬಹಳಷ್ಟು ಸಂಖ್ಯೆಯಲ್ಲಿ ಸೇರುವುದರ ಜೊತೆಗೆ, ಶಿವರಾಜ್ ತಂಗಡಗಿಯವರು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಹರಿಜನ ಓಣಿ ಸೇರಿದಂತೆ ಇಡೀ ಸಿದ್ಧಾಪುರ ಗ್ರಾಮಕ್ಕೆ ಹಾಗೂ ದಲಿತ ಸಮುದಾಯಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ಮಾದಿಗ ಸಮಾಜದ ಏಳಿಗಾಗಿ ಬಹಳಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ಧಾರೆ ಹೀಗಾಗಿ ನಾವು ಮತ್ತು ನಮ್ಮ ಸಮುದಾಯ ಹಾಗೂ ನಮ್ಮ ಸಿದ್ದಾಪುರ ಗ್ರಾಮದ ಸರ್ವ ಜಾತಿ ಜನಾಂಗದವರು ಒಗ್ಗೂಡಿ ಶಿವರಾಜ್ ತಂಗಡಗಿಯವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಹೇಳುತ್ತಾ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಬಿ.ಬಸವರಾಜಪ್ಪ, ಮಾಜಿ ಸದಸ್ಯ ಬಸವರಾಜ್ ನೀರಗಂಟಿ,ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಕಾಶ ಭಾವಿ, ಎ.ಪಿ.ಎಮ್.ಸಿ ಮಾಜಿ ಸದಸ್ಯ ಅಬ್ದುಲ್ ರೌಫ್, ಮುಖಂಡರಾದ ಮಲ್ಲಿಕಾರ್ಜುನಗೌಡ ಹೊಸಮನಿ, ಸಿಂಧನೂರು ನಾಗೇಶ್, ಬೀರಪ್ಪ ತಾವರಗೇರ, ಹನುಮಂತಪ್ಪ ಮ್ಯಾಗೇರಿ, ವಿರುಪಣ್ಣ ಮರುಕುಂಬಿ, ತಿಪ್ಪನಗೌಡ ಮಾಲಿಪಾಟೀಲ್, ಅಕ್ಬರ್ ಮುಲ್ಲಾರ್, ಮರಿಯಪ್ಪ, ಗ್ರಾಮ ಪಂಚಾಯತಿ ಸದಸ್ಯ ಮರಿಯಾ, ದುರ್ಗೇಶ ಪೂಜಾರ್, ಬುಷಪ್ಪ, ಮಹೇಶ್ ಕುಮಾರ್ ಸೇರಿದಂತೆ ಹಲವರು ಇದ್ದರು.