
ಡಾಕ್ಟರ್ ಜಿ ಪರಮೇಶ್ವರ್ ಅವರ ಬೆಳವಣಿಗೆ ಸಹಿಸಲಾಗದೆ ಕಲ್ಲು ಎಸೆದಿರುವ ಕಿಡಿಗೇಡಿ ಗಳನ್ನು ಬಂಧಿಸಲು: ಶಿವರಾಜ್ ಅಗ್ರಹಾರ
ಗಂಗಾವತಿ :ತುಮಕೂರು ತಾಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೈರನಹಳ್ಳಿಯಲ್ಲಿ ಮಾಜಿ ಉಪಮುಖ್ಯಮಂತ್ರಿಯಾದ
ಡಾ. ಜಿ ಪರಮೇಶ್ವರ್ ಅವರು ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಅವರನ್ನು ಮೇಲಕ್ಕೆ ಎತ್ತಿ ಹೂವಿನ ಹಾರ ಹಾಕುವ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಅವರ ಮೇಲೆ ಕಲ್ಲು ಎಸೆದಿರುತ್ತಾರೆ ಕಲ್ಲು ಎಸೆದ ಕಿಟಗೇರಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರನ್ನು ಬಂಧಿಸಬೇಕೆಂದು ಶಿವರಾಜ್ ಛಲವಾದಿ ಕಾಂಗ್ರೆಸ್ ಯುವ ಮುಖಂಡರು ಮತ್ತು ಡಾಕ್ಟರ್ ಜಿ ಪರಮೇಶ್ವರ್ ಅಭಿಮಾನಿ ಬಳಗ ಜಿಲ್ಲಾಧ್ಯಕ್ಷರು ಪತ್ರಿಕೆ ಹೇಳಿಕೆ ಮುಖಾಂತರ ಚುನಾವಣಾ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಬಿಜೆಪಿ ಸರ್ಕಾರವು ಬಂದಾಗಿನಿಂದ ದಲಿತರ ಮೇಲೆ ದೌರ್ಜನ್ಯ ಅತ್ಯಾಚಾರ ಕೊಲೆ ಪ್ರಕರಣ ಇಂತಹ 10 ಹಲವಾರು ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಾ ಬಂದಿದೆ ಈಗ ಡಾ. ಜಿ ಪರಮೇಶ್ವರ್ ಅವರ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅವರ ಪ್ರಚಾರದ ಅಬ್ಬರ ಸಹಿಸದೆ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ನಾಯಕರಲ್ಲಿ ಇವರು ಒಬ್ಬರಾಗಿ ಚಲವಾದಿ ಸಮಾಜದಲ್ಲಿ ಬೆಳಕಿಗೆ ಬಂದಂತೆ ಅಂತಹ ಹಿರಿಯ ನಾಯಕರು ಅವರ ಬೆಳವಣಿಗೆ ಸಹಿಸಲಾರದೆ ಬಿಜೆಪಿಯವರು ಯಾವನೊ ಒಬ್ಬ ವ್ಯಕ್ತಿಯನ್ನು ಬಿಟ್ಟು ಪರಮೇಶ್ವರ್ ಅವರ ಮೇಲೆ ಕಲ್ಲು ಎಸೆದಿರುತ್ತಾರೆ ಇಂತಹ ನೀಚ ಕೃತ್ಯ ಕೆಲಸ ಮಾಡಿರುತ್ತಾರೆ.
ಇಂತಹ ನೀಚ ಕೃತ್ಯ ಕೆಲಸ ಮಾಡುವ ಬಿಜೆಪಿ ಸರ್ಕಾರಕ್ಕೆ ನನ್ನದೊಂದು ಧಿಕ್ಕಾರ ಎಂದು ಪತ್ರಿಕೆಗಳ ಮುಖಾಂತರ ಗಂಟಾ ಗೂಷವಾಗಿ ಧಿಕ್ಕಾರ ಕೂಗಿದ್ದಾರೆ ಇಂತಹ ಬಿಜೆಪಿ ಸರ್ಕಾರಕ್ಕೆ ನಾಚಿಕೆ ಆಗಬೇಕು ಕಾರಣ ಎಸ್ಸಿ ಎಸ್ಟಿ ಗಳು ಮಕ್ಕಳು ಓದುತ್ತಿರುವಂತ ಸ್ಕಾಲರ್ಶಿಪ್ ಅನ್ನು ವಿದ್ಯಾರ್ಥಿಗಳಿಗೆ ಕೊಡದೆ ಅದನ್ನು ಯಾವುದೋ ಒಂದು ಕಾಮಗಾರಿಗೆ ದುರ್ಬಳಕೆ ಮಾಡಿಕೊಂಡಿರುತ್ತಾರೆ.
ವಿದ್ಯಾರ್ಥಿ ಮಕ್ಕಳ ಸ್ಕಾಲರ್ಶಿಪ್ ಬಳಸಿಕೊಳ್ಳುತ್ತಾರೆಂದರೆ ಇವರಿಗೆ ನಾಚಿಕೆಯಾಗಬೇಕು ಇವರು ದಲಿತರ ಓಟು ಕೊಡಿ ಎಂದು ಕೇಳಲಿಕ್ಕೆ ಬಿಜೆಪಿಯವರು ನಾಲಾಯಕರು ಒಂದು ವೇಳೆ ನಾವು ಬಿಜೆಪಿಯವರಿಗೆ ಮತ್ತೊಮ್ಮೆ ಮತ ಕೊಟ್ಟು ಗೆಲ್ಲಿಸಿದರೆ ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಆಗುವುದು ಆದಷ್ಟು ಸತ್ಯನೋ ಬಿಜೆಪಿ ಅವರು ಭ್ರಷ್ಟಾಚಾರ ಬಿಜೆಪಿ ಸರ್ಕಾರವನ್ನು ನಾವು ಮತ್ತೆ ಆಡಳಿತ ಮಾಡಲಿಕ್ಕೆ ಬಿಟ್ಟರೆ ನಮ್ಮನ್ನು ಅದೋಗತಿಯಾಗಿ ಮಾಡಿಬಿಡುವುದರಲ್ಲಿ ಎರಡು ಮಾತೇ ಇಲ್ಲ ಎಂಬಂತೆ ಗುಡುಗಿದರು .
ಕಿಡಿಗೇಡಿಗಳು ಪತ್ತೆ ಹಚ್ಚಲು ಪೊಲೀಸ್ ಇಲಾಖೆಯು ಕೂಡ ವಿಫಲವಾಗಿದೆ ಎಂದು ಹೇಳಿದರು ಮತ್ತು ಇನ್ನು ಎರಡು ಮೂರು ದಿನಗಳಲ್ಲಿ ಡಾಕ್ಟರ್ ಜಿ ಪರಮೇಶ್ವರ್ ಅವರ ಮೇಲೆ ಕಲ್ಲು ಎಸೆದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅಂತಹಾ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಚುನಾವಣೆ ಅಧಿಕಾರಿಗಳಿಗೆ ಈ ಪತ್ರಿಕೆ ಮುಕಾಂತರ ಎಚ್ಚರಿಕೆ ನೀಡಿತ್ತೆವೆ ಎಂದು ಹೇಳಿದರು.
ಒಂದು ವೇಳೆ ಅವರನ್ನು ಬಂಧಿಸುತ್ತಿದ್ದಲ್ಲಿ ಮುಂದಿನ ದಿನಗಳಲ್ಲಿ ನೀತಿ ಸಂಹಿತೆ ಜಾರಿಗೆ ಇದ್ದರು ಕೂಡ ಇಡೀ ನಮ್ಮ ಛಲವಾದಿ ಸಮಾಜದಿಂದ ರಾಜ್ಯದಾದ್ಯಂತ ಬೃಹತ್ ಮಟ್ಟದಲ್ಲಿ ಹೋರಾಟ ಮಾಡಲಾಗುದೆಂದು ಪತ್ರಿಕೆ ಮುಖಾಂತರ ಅಧಿಕಾರಿಗಳಿಗೆ ಒತ್ತಾಯಿಸಲಾಗುವುದೆಂದು ಹೇಳಿದರು.