ಗಂಗಾವತಿ:ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆಗಾಗಿ ಇಂದು ಹಳ್ಳಿಗಳಿಗೆ ಹೋಗಿ ಮತದಾರರ ಮನೆ ಮನೆಗೆ ಭೇಟಿ ನೀಡಿದಾಗ ಜನರು ತೋರುತ್ತಿರುವ  ಪ್ರೀತಿ ವಿಶ್ವಾಸ ಗಮನಿಸಿದಾಗ ಈ ಬಾರಿಯ  ಚುನಾವಣೆಯಲ್ಲಿ ಭಾರಿ ಪ್ರಮಾಣದ ಅಂತರದಲ್ಲಿ ಕಾಂಗ್ರೆಸ್ ನೂರಕ್ಕೆ ನೂರು ಪರ್ಸೆಂಟ್ ಜಯಭೇರಿ ಬಾರಿಸಲಿದೆ ಎಂದು ಸಿ ಕೆ ಮರಿಸ್ವಾಮಿ ಕಾಂಗ್ರೆಸ್ ಯುವ ಮುಖಂಡರು ಪ್ರಚಾರ ಮಾಡುವ ಸಂದರ್ಭದಲ್ಲಿ ಮಾತನಾಡುತ್ತಾ ಹೇಳಿದರು.

ಕನಕಗಿರಿ  ಪಟ್ಟಣದ ವಿವಿಧ ವಾರ್ಡಗಳ ಮತಯಾಚನೆ ಮಾಡಿ ಮಾತನಾಡುತ್ತಾ  ಪಟ್ಟಣದಲ್ಲಿ ಪಾದಯಾತ್ರೆಯ ಮೂಲಕ ಮನೆ ಮನೆಗೆ ಭೇಟಿ ನೀಡಿದಾಗ ಪ್ರತಿಯೊಬ್ಬರು ಶಿವರಾಜ್ ತಂಗಡಿ ಅವರ ಅಭಿಮಾನಿಗಳು ಪ್ರೀತಿ ವಿಶ್ವಾಸ ನೋಡಿದರೆ ಕಾಂಗ್ರೆಸ್ ಪಕ್ಷವು ಗೆಲುವು ಶತಸಿದ್ಧ ಎನ್ನುವ ಭಾವನೆ ನನ್ನಲ್ಲಿ ಮೂಡಿದೆ.

ದಿನದಿಂದ ದಿನಕ್ಕೆ ಪಾದಯಾತ್ರೆಯಲ್ಲಿ ಜನರ ಸಂಖ್ಯೆ ಹೆಚ್ಚಳವಾಗುತ್ತಿದೆ ಮತ್ತು  ಬಿಜೆಪಿ ಡಬಲ್ ಇಂಜಿನ್ 40% ಸರ್ಕಾರದ ಜನಸಾಮಾನ್ಯರು ಬಳಸುವಂತಹ ದಿನ ಬಳಕೆ ವಸ್ತುಗಳು  ದಿನೇ ದಿನೇ ಬೆಲೆ ಏರಿಕೆ ಹೆಚ್ಚಾಗುತ್ತಿರುವ ಅಂತಹಾ ಸಿಲೆಂಡರ್ ಪೆಟ್ರೋಲ್ ಮತ್ತು ಇನ್ನಿತರ ವಸ್ತುಗಳು ಬೆಲೆ ಏರಿಕೆ ಆಗುತ್ತಿರುವುದನ್ನು ಜನರ ಸಹಿಸದೆ  ಬಿಜೆಪಿ ಭ್ರಷ್ಟ ಸರ್ಕಾರದ ದುರಾಡಳಿತಕ್ಕೆ ಜನಸಾಮಾನ್ಯರು ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳುವ ಸಂಖ್ಯೆ ದಿನದಿನ ಜಾಸ್ತಿ ಆಗುತ್ತಿದೆ.

ಅದೇ ರೀತಿಯಾಗಿ ಇವತ್ತು  ಇಡೀ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಪ್ರೀತಿ ವಿಶ್ವಾಸ ತೋರಿಸುವುದು ನೋಡಿದರೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದೇ ಬರುತ್ತದೆ  ಮತ್ತು ನನಗೆ ತುಂಬಾ ವಿಶ್ವಾಸ ಮೂಡಿಸುತ್ತದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಹೊನ್ನೂರಪ್ಪ ಡಾಣಾಪುರ್ ಮಾರುತಿ ಉಳ್ಳಿಕಾಳ್ ಬಸವರಾಜ್ ಬಸವಣ್ಣ ಕ್ಯಾಂಪ್ ಮಲ್ಲಿಕಾರ್ಜುನ್ ತಂಡಿಹಾಳ ಯಮನೂರು ಬಸವನ ಕ್ಯಾಂಪ್ ಯಮನೂರಪ್ಪ ವಿರುಪಾಕ್ಷಪ್ಪ ಹನುಮಂತ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಭಾಗವಹಿಸಿದರು

error: Content is protected !!