
ಗಂಗಾವತಿ : ಯಾವುದೇ ಆಸೆ ಆಮೀಷಗಳಿಗೆ ಮತ ಮಾರಿಕೊಳ್ಳದೇ, ಹಕ್ಕು ಚಲಾಯಿಸಬೇಕು ಎಂದು ಆರೋಗ್ಯ ಶಿಕ್ಷಣಾಧಿಕಾರಿ ಆಶಾ ಬೇಗಂ ಹೇಳಿದರು.
ನಗರಸಭೆ ಹಾಗೂ ಜಿಲ್ಲಾ ಆಡಳಿತ ತಾಲ್ಲೂಕು ಆಡಳಿತ ಇಲಾಖೆಯ ಎಪಿಎಮ್ಸಿ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೇ10ರಂದು ವಿಧಾನ ಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಶೇ.100 ರಷ್ಟು ಮತದಾನ ಆಗಬೇಕು. ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಒಂದೊಂದು ಮತವು ಮುಖ್ಯವಾಗಿರುತ್ತದೆ. ಯಾರೂ ಕೂಡ ಮತದಾನ ಮಾಡಲು ಹಿಂದೇಟು ಹಾಕಬಾರದು. ಮತದಾನ ಗುರುತಿನ ಚೀಟಿ ಹೊಂದಿದ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಗ್ರಾಮದ ವಿದ್ಯಾವಂತ ಯುವಕರು, ಯುವತಿಯರು ಮತದಾನ ಮಹತ್ವ ಕುರಿತು ಮಾಹಿತಿ ನೀಡಬೇಕು ಎಂದರು.

ನಂತರ ತಾಲೂಕು ಆಶಾ ಮೇಲ್ವಿಚಾರಾದ ಮಂಜುಳಾ ಗುಡ್ಲಾನೂರು ಮಾತನಾಡಿ,ಆಶಾ ಕಾರ್ಯಕರ್ತರು ಹಲವಾರು ಪ್ರಯೋಜನಗಳು ಇವೆ ಎಲ್ಲರೂ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕರಾದ ಹನುಮಂತಿ,ಸರಸ್ವತಿ, ಬಿಂಧು ಆಶಾ ಕಾರ್ಯಕರ್ತೆ ಸಂಘದ ನಗರ ಘಟಕ ಅಧ್ಯಕ್ಷ ವಿಜಯಲಕ್ಷ್ಮಿ ಆಚಾರ್ಯ, ಕಾರ್ಯದರ್ಶಿ ಲಾಲಬಿ,ಆಶಾ ಕಾರ್ಯಕರ್ತರಾದ ಸಂಗೀತ,ಸುಮಾ,ರೇಖಾ,ಜಯಶ್ರೀ, ಸರಸ್ವತಿ, ಶೋಭಾ,ಶರಣಮ್ಮ,ಲಕ್ಷ್ಮಿ ಫೇತ್ತೂರು,ಆಪ್ರೀನ,ಮಹಾದೇವಿ, ರಂಗಮ್ಮ,ಸವಿತ,ಕಾವ್ಯ,ಸೇರಿದಂತೆ ಇತರರು ಇದ್ದರು