ಬೆಂಗಳೂರು : ಇಂಡಿಯನ್​ಮನಿ ಫ್ರೀಡಂ ಆಯಪ್ ಸಿಇಓ ಆಗಿದ್ದಂತ ಸುಧೀರ್ ಹಾಗೂ ಅವರೊಂದಿಗೆ ರಘು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ವಂಚನೆ ಪ್ರಕರಣದಲ್ಲಿ ಇಂಡಿಯನ್​ಮನಿ ಫ್ರೀಡಂ ಆಯಪ್ ಸಿಇಒ ಬಂಧಿಸಲಾಗಿತ್ತು. ಇಂತಹ ಇಬ್ಬರಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಇಂಡಿಯಾ ಮನಿ ಆಪ್ ಸಿಇಓ ಸುಧೀರ್ ಸೇರಿದಂತೆ ಹಲವರ ವಿರುದ್ಧ 24 ಮಂದಿಯಿಂದ ವಂಚನೆ ದೂರು ದಾಖಲಾಗಿತ್ತು.

ದೂರಿನಲ್ಲಿ ಇಂಡಿಯನ್ಮನಿ ಫ್ರೀಡಂ ಆಯಪ್ ಕಂಪನಿಗೆ ಸೇರಿದ್ದಂತ ಫ್ರೀಡಂ ಆಪ್ ಇನ್ಸ್ಟಾಲ್ ಮಾಡಿಕೊಂಡ್ರೇ, ಮಾಡಿಸಿದ್ರೇ ಹಣ ಗಳಿಸುವಂತೆ ಉದ್ಯೋಗಿಳಿಗೆ ಆಮಿಷ ಒಡ್ಡಿ, ಲಕ್ಷಾಂತರ ಮಂದಿಯಲ್ಲಿ ಆಪ್ ಇನ್ ಸ್ಟಾಲ್ ಮಾಡಿಸಲಾಗಿತ್ತು.

ಆದ್ರೇ ಹೀಗೆ ಆಪ್ ಗಳನ್ನು ಉದ್ಯೋಗಿಗಳು ವಿವಿಧ ಜನರಿಗೆ, ತಮ್ಮ ಸಂಬಂಧಿಕರಿಗೆ ಇನ್ ಸ್ಟಾಲ್ ಮಾಡಿಕೊಳ್ಳೋದಕ್ಕೆ ಸೂಚಿಸಿ, ಮಾಡಿಸಿದ್ದರೂ ನಿಗದಿ ಪಡಿಸಿದ್ದಂತ ಹಣವನ್ನು ನೀಡದೇ ಇಂಡಿಯನ್​ಮನಿ ಫ್ರೀಡಂ ಆಯಪ್ ಸಿಇಓ ಸುಧೀರ್ ವಂಚಿಸಿದ್ದರು. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.

ಮೊದಲ ಪ್ರಕರಣದಲ್ಲಿ ಸುಧೀರ್ ಜಾಮೀನು ಪಡೆದಿದ್ದರು. ಆದ್ರೇ ಬೆಂಗಳೂರು ದಕ್ಷಿಣ ವಿಭಾಗದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದಂ 4 ಪ್ರಕರಣ ಸಂಬಂಧ ಬನಶಂಕರಿ ಠಾಣೆಯ ಪೊಲೀಸರು ಇಂಡಿಯನ್​ಮನಿ ಫ್ರೀಡಂ ಆಯಪ್ ಸಿಇಒ ಸುಧೀರ್ ಹಾಗೂ ರಘು ಎಂಬುವರನ್ನು ಬಂಧಿಸಿದ್ದರು.

ಬಂಧಿತ ಆರೋಪಿಗಳನ್ನು ಬನಶಂಕರಿ ಠಾಣೆಯ ಪೊಲೀಸರು ನ್ಯಾಯಾಲಾಯದ ಮುಂದೆ ಹಾಜರು ಪಡಿಸಿದ್ದರು. ಅವರಿಗೆ ಇದೀಗ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ಮೂಲಕ ಇಂಡಿಯನ್​ಮನಿ ಫ್ರೀಡಂ ಆಯಪ್ ಸಿಇಓ ಸುಧೀರ್ ಹಾಗೂ ರಘು ಜೈಲು ಸೇರುವಂತೆ ಆಗಿದೆ.

error: Content is protected !!