ಕಾರಟಗಿ: ತಾಲ್ಲೂಕಿನ ಗುಂಡೂರ ತಿರುವಿನ ಬಳಿ ಮಂಗಳವಾರ ಬೆಳಗಿನ ಜಾವ ರಸ್ತೆಯಲ್ಲಿ ಕುರಿ ಹಿಂಡಿನ ಮೇಲೆ ಲಾರಿ ಹರಿದು 42 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. 26 ಕುರಿಗಳು ಗಾಯಗೊಂಡಿವೆ.
ಕುರಿಗಳು ಚಿಕ್ಕ ಬೆಣಕಲ್ ಗ್ರಾಮದ ಅಯ್ಯಪ್ಪ ಹಾಗೂ ಕನಕಗಿರಿಯ ಕನಕಪ್ಪ ಎಂಬುವರಿಗೆ ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಕುರಿಗಳನ್ನು ಹಟ್ಟಿಯಿಂದ ಮೇಯಿಸಲು ಹೊಡೆದುಕೊಂಡು ಹೋಗುತ್ತಿದ್ದ ವೇಳೆ ಲಾರಿ ಕುರಿಗಳ ಮೇಲೆ ಹರಿದಿದೆ. ಚಾಲಕ ವೇಗವಾಗಿ ಲಾರಿ ಚಲಾಯಿಸುತ್ತಿದ್ದ. ಇದಕ್ಕೆ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯವೇ ಕಾರಣ’ ಎಂದು ಕುರಿಗಾಯಿ ಅಯ್ಯಪ್ಪ ದೂರಿನಲ್ಲಿ ತಿಳಿಸಿದ್ದಾರೆ.ಲಾರಿ ಚಾಲಕ ಶ್ರೀರಾಮನಗರದ ಶಿವರಾಜ ತಿಮ್ಮಪ್ಪ.ಬಿ. ವಿರುದ್ಧ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.