ರಾಯಚೂರ :ಬೇಸಿಗೆ ಯ ಬಿಸಿಲು ತಾಪ ದಿಂದ ಬಳತ್ತಿರುವ ಜನರಿಗೆ ಮಳೆ ರಾಯ ತಂಪು ಎರಚುವವ ಮೂಲಕ ಬಿಸಿಲಿನ ತಾಪ ವನ್ನು ಕಡಿಮೆ ಮಾಡಿದ್ದಾನೆ.
ದಿನಾಂಕ 6-4-2023 ರಂದು ಮಧ್ಯಾಹ್ನ ಒಂದು ಗಂಟೆಯಿಂದ ಗುಡುಗು ಸಿಡಿಲು ಮತ್ತು ಗಾಳಿಯಿಂದ ಮಳೆರಾಯನ ಆರ್ಭಟ ಶುರುವಾಗಿ ರಾಯಚೂರು ಜನತೆಗೆ ತಂಪು ಎಸೆಗಾಲಾಯಿತು ರಾಯಚೂರು ಜಿಲ್ಲೆಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಆಣೆಕಲ್ಲು ಮಳೆಯಾಗಿದ್ದು ಗ್ರಾಮೀಣ ಪ್ರದೇಶದ ರೈತಾಪಿ ಜನರ ಮುಖದಲ್ಲಿ ನಗು ಕಳೆ ಬಂದಿರುತ್ತದೆ ಏಕೆಂದರೆ ತಮ್ಮ ತಮ್ಮ ಜಮೀನು ಸ್ವಚ್ಛಗೊಳಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ ಆಗಿದೆ ಎಂದು ಹರ್ಷೋದ್ಗಾರವಾಗಿ ಮಾತನಾಡಿಕೊಳ್ಳುತ್ತಿದ್ದಾರೆ