
ದಿನನಿತ್ಯ ಕಲುಷಿತ ಚರಂಡಿಯ ನೀರನ್ನು ಕುಡಿಯುತ್ತಿರುವ 29 ವಾರ್ಡಿನ ಸಾರ್ವಜನಿಕರು ಈಗಾಗಲೇ ಐದು ಜನ ಮೃತಪಟ್ಟರು ಎಚ್ಚೆತ್ತುಕೊಳ್ಳದ ನಗರಸಭೆಯ ತಿಮಿಂಗಲಗಳು
ರಾಯಚೂರು :ರಾಯಚೂರು ನಗರದಲ್ಲಿ ಕಲುಷಿತ ಚರಂಡಿಯ ನೀರನ್ನು ದಿನನಿತ್ಯ ಕುಡಿದು ಆಸ್ಪತ್ರೆಗಳಿಗೆ ಪರದಾಡುವ ಸ್ಥಿತಿ ವಾರ್ಡ್ ನಂಬರ್ 29 ಬಡ ಜನರಿಗೆ ಬಂದು ಒದಗಿದೆ ಈಗಾಗಲೇ ರಾಯಚೂರು ನಗರದಲ್ಲಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಫಲಕಾರಿ ಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಈ ಸಾವಿನ ಸುದ್ದಿ ರಾಯಚೂರು ನಗರ ತುಂಬೆಲ್ಲ ಹರಡಿದ್ದು ಈ ಸುದ್ದಿಯು ಮಾಸಿಸುವ ಮೊದಲೇ ಮತ್ತೆ ಬಡಜನರ ಸಾವನ್ನು ಬಯಸಲು ಸಿದ್ಧವಾಗಿದೆ.

ಸಂಬಂಧಪಟ್ಟ ಎಲ್‌ಬಿಎಸ್ ನಗರ್ ವಾರ್ಡ್ ನಂಬರ್ 29 ರ ಸದಸ್ಯ ನಾದ ಸುನಿಲ್ ಕುಮಾರ್ ಈ ಕಲುಷಿತ ನೀರಿನ ವಿಷಯ ತಿಳಿಸಲು ಹೋದರೆ ಜನರಿಗೆ ಉಡಾಫೆ ಉತ್ತರಕೊಟ್ಟು ಜಾರಿಕೊಳ್ಳುತ್ತಿದ್ದಾನೆ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಸ್ವಚ್ಛವಾದ ನೀರನ್ನು ಬಿಡುತ್ತಾರೋ ಇಲ್ಲವೋ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿರುವ ಅಭಿಪ್ರಾಯವಾಗಿದೆ.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮವಹಿಸದೆ ನಿರ್ಲಕ್ಷ ವಹಿಸಿದರೆ ಸಾವು ಖಚಿತ ಎಂದು ಮಾತನಾಡಿಕೊಳ್ಳುತ್ತಿದ್ದಾರೆ