
ಹಾಸನ: ಗ್ರಾಮೀಣ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ತಂದಿರುವ ನರೇಗ ಯೋಜನೆ ಈಗ ಉಳ್ಳವರ ಪಾಲಾಗುತ್ತಿದ್ದು ಗ್ರಾಮೀಣ ಜನರಿಗೆ ಅಧಿಕಾರಿಗಳು ಹಾಗೂ ಕೆಲವು ಗುತ್ತಿಗೆದಾರರು ಮಂಕುಬೂದಿ ಎರಚಿ ಜೇಬು ಗಟ್ಟಿಮಾಡಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಯಂತ್ರಗಳನ್ನು ಬಳಸದೆ ಕಾಮಗಾರಿಗಳನ್ನು ನಡೆಸಬೇಕು ಎಂದು ನಿಯಮಗಳು ಇದ್ದರೂ ಒಟ್ಟು ವ್ಯವಸ್ಥೆ ಶಾಮೀಲಾಗಿ ಯಂತ್ರೋಪಕರಣಗಳಲ್ಲೇ ಕಾಮಗಾರಿಗಳನ್ನು ನಡೆಸಿರುವ ನಡೆಸುತ್ತಿರುವ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿದ್ದು ಅದರಲ್ಲಿ ಕೆ.ಹೊಸಕೋಟೆ ಹೋಬಳಿಯಲ್ಲಿಯೇ ಹೆಚ್ಚು ಎಂಬ ವ್ಯಾಪಕ ದೂರುಗಳು ಪತ್ರಿಕೆಗೆ ದಾಖಲೆ ಸಮೇತ ಸಿಕ್ಕಿವೆ.
ಅಧಿಕಾರಿಗಳನ್ನು ಕೆಲವರು ಪ್ರಶ್ನಿಸಿದರೆ ಕಾಮಗಾರಿ ಬಗ್ಗೆ ಸಬೂಬು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನಗಳು ಹಾಗೂ ಕೆಲವು ಪ್ರಭಾವಿಗಳಿಂದ ಹೆದರಿಸುವ ಹಾಗೂ ಬೆದರಿಸುವ ಬೆಳವಣಿಗೆಗಳು ನಡೆಯುತ್ತಿವೆ.
ಗ್ರಾಮ ಪಂಚಾಯಿತಿ ಸದಸ್ಯರೇ ಯಂತ್ರೋಪಕರಣ ಬಳಸಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಅಧಿಕಾರಿಗಳಿಗೆ ದೂರು ತಿಳಿಸಿದ ನಂತರ ಕಾಮಗಾರಿ ಸ್ಥಗಿತ ಮಾಡುತ್ತಾರೆ. ಅಲ್ಲಿಯವರೆಗೆ ನಮಗೂ ಅದುಕ್ಕೂ ಸಂಬಂಧವಿಲ್ಲದಂತೆ ನಾಟಕವಾಡುತ್ತಾ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿ ಯೋಜನೆ ಕೂಲಿ ಕಾರ್ಮಿಕರಿಗೆ ಬಡವರಿಗೆ ಅನುಕೂಲ ಆಗಲಿ ಎಂದು ಸರ್ಕಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ನೀಡಿ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಕೆಲಸ ಸಿಗಲಿ ಹಾಗೂ ಬಡವರ ಜೀವನ ನಡೆಸಲು ಅನುಕೂಲ ಆಗಲಿ ಎಂದು ಸರ್ಕಾರ ನರೇಗಾ ಕಾಮಗಾರಿ ಶುರುಮಾಡಿದ್ದಾರೆ ಆದರೆ ಆಲೂರು ತಾಲೂಕು ಕೆ ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕೆಲವು ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಾಗಿ ಭ್ರಷ್ಟಾಚಾರ ಕಣ್ಣೆದುರೇ ನಡೆಯುತ್ತಿದ್ದರು ಅಧಿಕಾರಿಗಳು ಮೌನ ವಹಿಸುತ್ತಿರುವುದು ಏಕೆ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವ ರೀತಿ ನಡೆದುಕೊಳ್ಳುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು.
ನರೇಗಾ ಕಾಮಗಾರಿ ಮಾಡಬೇಕದಲ್ಲಿ ಪಿಡಿಓ ಕೆಲಸ ಶುರು ಮಾಡಲು ವರ್ಕ್ ಆರ್ಡರ್ ಕೊಟ್ಟು ಇಂಥ ಜಾಗದಲ್ಲಿ ಈ ರೀತಿ ಕಾಮಗಾರಿ ಮಾಡಿ ಎಂದು ತಿಳಿಸಬೇಕು ನಂತರ ಜಾಬ್‌ಕಾರ್ಡ್ ಇದ್ದವರು ಕೆಲಸ ಶುರು ಮಾಡಿದಾಗ ಜಿಪಿಎಸ್ ಫೋಟೋ ತೆಗೆಯಬೇಕು ಆದರೆ ಇತ್ತೀಚಿಗೆ ನಡೆಯುತ್ತಿರುವುದೇ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿಗಳೇ ಬೇರೆ. ಹಣ ಹಾಕುವುದು ಬೇರೆಯವರ ಖಾತೆಗೆ. ಕೆಲಸ ನಿರ್ವಹಿಸುವುದು ಮಾತ್ರ ಜೆಸಿಬಿ ಯಂತ್ರೋಪಕರಣಗಳು ಎಂಬಂತಾಗಿದೆ. ಕೆ.ಹೊಸಕೋಟೆ ಹೋಬಳಿ ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮ ವ್ಯಾಪಕ ನಡೆದಿದ್ದು, ವಿಡಿಯೋ ಮತ್ತು ಕೆಲ ದಾಖಲೆಗಳ ಸಮೇತ ಸಾಮಾಜಿಕ ಹೋರಾಟಗಾರರು ಲೋಕಾಯುಕ್ತ ಕಚೇರಿಗೆ ದೂರು ನೀಡಲು ಮುಂದಾಗಿದ್ದಾರೆ