ಕೊಪ್ಪಳ :2023ರ  ಕರ್ನಾಟಕ ವಿಧಾನಸಭೆ ಸಾರ್ವ ತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯು ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟು ಮಾರ್ಚ್ 29 ರಿಂದ ಮಾರ್ಚ 31 ರೊಳಗಾಗಿ ಜಿಲ್ಲೆಯಲ್ಲಿ ಒಟ್ಟು 17 ಅಬಕಾರಿ

ಪ್ರಕರಣಗಳನ್ನು ದಾಖಲಿಸಿದೆ. ಅಬಕಾರಿ ಉಪ ಆಯುಕ್ತರಾದ ಸೆಲೀನಾ ಸಿ ಇವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಘೋರ-8, ಸಾಮಾನ್ಯ-4 ಹಾಗೂ ಕಲ015(ಎ) ಅಡಿಯಲ್ಲಿ 5 ಸೇರಿ ಒಟ್ಟು 17 ಪ್ರಕರಣಗಳು ದಾಖಲಾಗಿ ಸುಮಾರು 193.410 ಲೀಟರ್

ಮದ್ಯ, 5.150 ಲೀಟರ್ ಬಿಯರ್ ಹಾಗೂ 7 ದ್ವಿಚಕ್ರ ವಾಹಗಳನ್ನು ಜಪ್ತುಪಡಿಸಿಕೊಂಡು 6 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ. ಎಂದು ಕೊಪ್ಪಳ ಅಬಕಾರಿ ಉಪ ಆಯುಕ್ತರ ಕಚೇರಿಯ ಪ್ರಕಟಣೆ ತಿಳಿಸಿದೆ.

error: Content is protected !!