ಹುಬ್ಬಳ್ಳಿ : 8 ವರ್ಷದ ಬಾಲಕ ನದೀಮ್ ಕೊಲೆಯ ರಹಸ್ಯವನ್ನು ಭೇದಿಸುವಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಲಕನ ಕೊಲೆ ಮಾಡಿದ್ದ ಕಿರಾತಕನನ್ನು ಖಾಕಿ ಪಡೆ ಬಂಧಿಸಿದೆ.

ಬಾಲಕ ನದೀಮ್‌ಗೆ ಶುಕ್ರವಾರ ಸಂಜೆ 5 ರೂಪಾಯಿ ಕೊಡುವ ವಿಚಾರಕ್ಕೆ ಸೆಟ್ಲಿಮೆಂಟ್‌ನ ನಿವಾಸಿ ರವಿ ಬಳ್ಳಾರಿ ಎಂಬಾತ ಮಿಲ್ಲತ್ತ ನಗರದ ಆಟದ ಮೈದಾನದ ಬಳಿ ಸಿಟ್ಟಿನಿಂದ ಕಪಾಳಕ್ಕೆ ಹೊಡೆದಿದಕ್ಕೆ ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ.

ರವಿ ಬಳ್ಳಾರಿ ಭಯದಲ್ಲಿ ನದೀಮ್ ದೇಹವನ್ನು ಹೊತ್ತುಕೊಂಡು ಮುಳ್ಳಿನ ಪೊದೆಯಲ್ಲಿ ಎಸೆದು ಬಾಲಕನ ಮುಖದ ಮೇಲೆ ಕಲ್ಲು ಹಾಕಿ ಪೈಶಾಚಿಕ ಕೃತ್ಯ ಎಸಗಿ ಪರಾರಿಯಾಗಿದ್ದ.

ಘಟನೆಯ ಕುರಿತು ಬೆಂಡಿಗೇರಿ ಠಾಣೆಯ ಪಿಎಸ್‌ಐ ಶರಣ್ ದೇಸಾಯಿ ಹಾಗೂ ಕ್ರೈಂ ಸಿಬ್ಬಂದಿ ಸುರವೇ ಪ್ರಮುಖ ಮಾಹಿತಿ ಕಲೆ ಹಾಕಿದಾಗ ರವಿ ಬಳ್ಳಾರಿ ಈ ಕೃತ್ಯ ಮಾಡಿದ್ದು ತನಿಖೆ ವೇಳೆಯಲ್ಲಿ ಗೊತ್ತಾಗಿದೆ. ಸದ್ಯ ಆರೋಪಿಯನ್ನು ಬಂಧನ ಮಾಡಿ ಬೆಂಡಿಗೇರಿ ಪೊಲೀಸರು ಆರೋಪಿ ಮೆಡಿಕಲ್ ಪರೀಕ್ಷೆಗೊಳಪಡಿಸಿ ಆತನನ್ನು ನ್ಯಾಯಾಂಗ್ ಬಂಧನಕ್ಕೆ ಒಪ್ಪಿಸಿದ್ದಾರೆ.

error: Content is protected !!