ಕುಕನೂರ: ದೃಷ್ಟಿ ದೋಷದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಿ ದೃಷ್ಟಿ ಸರಿಪಡಿಸುವುದು ಅವರನ್ನು ಕತ್ತಲೆಯಿಂದ ಬೆಳಕಿನೆಡೆಗೆ ತಂದಂತೆ ಎಂದು
ಆರ್‌ ಡಿ ಸಿ ಸಿ ಬ್ಯಾಂಕ್ ನ ನಿರ್ದೇಶಕ ಬಸವರಾಜ ರಾಜೂರು(ಗೌರ) ತಿಳಿಸಿದರು.

    ತಾಲೂಕಿನ ಸೋಂಪುರ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್,ಡಿಜಿಎಂ ಆಯುರ್ವೇದ ಮೆಡಿಕಲ್ ಕಾಲೇಜ್ ಹಾಗೂ ಶ್ರೀಮಾತಾ ವಜ್ರೇಶ್ವರಿ ಫೌಂಡೇಶನ್ ಇವರ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ.

ಬಸವರಾಜ್ ರಾಜೂರ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಅನೇಕ ಜನರಿಗೆ ದೃಷ್ಟಿ ದೋಷದ ಸಮಸ್ಯೆ ಎದುರಿಸುತ್ತಿದ್ದು ಪರದಾಡುವ ಪರಿಸ್ಥಿತಿ ಎದುರಾಗಿರುತ್ತದೆ ಅಂತಹವರಿಗಾಗಿ ಇಂತಹ ತಪಾಸಣಾ ಶಿಬಿರಗಳು ಸಹಾಯಕಾರಿಯಾಗಿದ್ದು ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 192 ಜನ ತಪಾಸಣೆಗಳ ಪಟ್ಟರೆ 150 ಜನರಿಗೆ ಸ್ಥಳದಲ್ಲಿ ಉಚಿತ ಕನ್ನಡಕಗಳನ್ನು ವಿತರಣೆ ಮಾಡಲಾಯಿತು ಹಾಗೂ 10 ಜನರ ಶಸ್ತ್ರ ಚಿಕಿತ್ಸೆ ಮಾಡಿಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಳಕಪ್ಪ ಕಂಬಳಿ, ಈಶಪ್ಪ ಆರೆರ್, ಚಂದ್ರಕಾಂತ್ ಆರೆರ, ಷಣ್ಮುಖಗೌಡ ಪಾಟೀಲ, ಹನುಮಪ್ಪ ನಿಟ್ಟಾಲಿ, ಕರಿಯಪ್ಪ ಹಳ್ಳಿಕೇರಿ, ಚನ್ನಬಸಪ್ಪ ಹಲಗೇರಿ,ಜಮೀರ್ ಮಂಗಳೂರು ಹಾಗೂ ಇನ್ನಿತರ ಪ್ರಮುಖರು ಪಾಲ್ಗೊಂಡಿದ್ದರು.

error: Content is protected !!