
ಕುಕನೂರು: ಪ್ರತಿಯೊಬ್ಬ ಪವಾಡ ಪುರುಷರು, ಸಂತರು ನಮಗೆ ಆದರ್ಶ ವ್ಯಕ್ತಿಗಳಾಗಿದ್ದು ಅಂತವರ ಮಾರ್ಗದರ್ಶನದಲ್ಲಿ ನಡೆಯಬೇಕಾದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಗಣಿ ಮತ್ತು ಬಹು ವಿಜ್ಞಾನ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ಕುಕನೂರು ಪಟ್ಟಣದ ಮೇಕರ್ ಕಾಲೋನಿಯಲ್ಲಿ ಕುಕನೂರು ತಾಲೂಕ ಆಡಳಿತದ ವತಿಯಿಂದ ಆಯೋಜಿಸಿದ್ದ ಆದ್ಯವಚನಕಾರ ನೇಕಾರರ ಸಂತ ದೇವರ ದಾಸಿಮಯ್ಯನವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಸಸಿಗೆ ನೀರಿರುವುದರ ಮೂಲಕ ಉದ್ಘಾಟಿಸಿದ ಸಚಿವ ಹಾಲಪ್ಪ ಆಚಾರ್ ಮಾತನಾಡುತ್ತಾ 12ನೇ ಶತಮಾನದ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ದೊಡ್ಡ ಚಳುವಳಿಯನ್ನೇ ಆರಂಭಿಸಿದರು.

ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಆರ್ಥಿಕ ಮೊದಲಾದ ಬದಲಾವಣೆಗಳನ್ನು ಅಂದಿನ ಕಾಲದಲ್ಲಿಯೇ ಕಾಣುತ್ತೇವೆ ಇದಕ್ಕೆಲ್ಲ ಮೂಲ ಭದ್ರಭೂನಾದಿ ಹಾಕಿದವರು ಶ್ರೀ ದೇವರ ದಾಸಿಮಯ್ಯನವರು ಹತ್ತನೇ ಶತಮಾನದ ಉತ್ತರಾರ್ಧದಲ್ಲಿ ದೇವರ ದಾಸಿಮಯ್ಯನವರಿಂದ ವಚನ ಸಾಹಿತ್ಯವು ಪ್ರಾರಂಭಗೊಂಡು 19ನೇ ಶತಮಾನದ ಯಡಿಯೂರು ಸಿದ್ದಲಿಂಗೇಶ್ವರ ವರೆಗೆ ಬೆಳೆದು ಬಂದಿರುವುದನ್ನು ಇತಿಹಾಸಕಾರರು ಬಣ್ಣಿಸಿದ್ದಾರೆ ಅಂತವರ ಜಯಂತಿಯಲ್ಲಿ ಪಾಲ್ಗೊಳ್ಳುವಿಕೆಗೆ ಅವಕಾಶ ದೊರಕಿದ್ದು ನಮ್ಮ ಪುಣ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕುಕನೂರು ತಾಲೂಕ ತಹಸಿಲ್ದಾರ್ ಮುರಳಿಧರಾವ್ ಕುಲಕರ್ಣಿ, ಉಪನ್ಯಾಸಕರಾದ ರವಿತೇಜ ಅಬ್ಬಿಗೇರಿ, ಶರಣಪ್ಪ ಬಣ್ಣದ ಬಾವಿ, ನೀಲಕಂಠಪ್ಪ ಬಣ್ಣದ ಬಾವಿ, ವಿಷ್ಣು ತಿಪ್ಪಾಪುರ, ವಿಷ್ಣುಚಿಲಗೊಡ್ ಬಸಲಿಂಗಪ್ಪ ಬಣ್ಣದ ಬಾವಿ, ಶಿವಲಿಂಗಪ್ಪ ಕಡಬಗೇರಿ ಇನ್ನು ಅನೇಕರು ವೇದಿಕೆಯಲ್ಲಿದ್ದರು