ಕಾರಟಗಿ :ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳು ಕಳೆದರೂ ಕೂಡ ಇನ್ನು ನಮ್ಮನ್ನು ದೇಶದಲ್ಲಿ ಅಸ್ಪೃಶ್ಯತೆ, ತಾರತಮ್ಯ, ಭೇದ ಭಾವ, ಮೇಲು-ಕೀಳು, ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ಬಹಿಷ್ಕಾರ ಪ್ರಸ್ತುತವಾಗಿದೆ.

ದಲಿತರನ್ನು ಅಂದಿನಿಂದಲೂ ಅದೇ ರೀತಿಯಲ್ಲಿ ಪ್ರಾಣಿಗಿಂತ ಕೀಳಾಗಿ ನೋಡುತ್ತಿರುವ ನನ್ನ ದಲಿತ ಸಮುದಾಯವನ್ನು ಅಸ್ಪೃಶ್ಯತೆ ಎಂಬ ಕೀಳು ಮಟ್ಟದ ಆಚರಣೆಯನ್ನು ಭಾರತದ ಉದ್ದಕ್ಕೂ ಪ್ರತಿಯೊಂದು ಊರುಗಳಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಇನ್ನೂ ಅಸ್ಪೃಶ್ಯತೆಯ ಮೇಲು ಕೀಳು ಎನ್ನುವುದು  ತಾಂಡವಾಡುತ್ತಿದೆ.

ಇಂತಹ ಕೆಲಸವನ್ನು ಕೆಲವು ವರ್ಗಗಳು ಯಥಾಸ್ಥಿತಿ ವಾದವನ್ನ ಮಾಡುತ್ತಾ ಬಂದಿರುತ್ತವೆ ದುರಾದೃಷ್ಟಕರ ಸಂಗತಿ ಎಂದರೆ ಕೆಲ ವರ್ಗಗಳು ಈ ಮೇಲಿನ ಅಂಶಗಳನ್ನು ಪ್ರಸ್ತುತದಲ್ಲಿ ಹಾಗೆ ಮುಂದುವರಿಸಿಕೊಂಡು ಬಂದಿದ್ದಾರೆ ಇದು ಪ್ರಜಾಪ್ರಭುತ್ವಕ್ಕೆ ಹಾಗೂ ಅಭಿವೃದ್ಧಿಗೆ ಮಾರಕವಾಗುತ್ತದೆ.

ಹಾಗಾಗಿ ಪ್ರಸ್ತುತ ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿಯಾದ ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ 15 ರಿಂದ 17ಕ್ಕೆ ಮತ್ತು ಎಸ್ ಟಿಗೆ 3 ರಿಂದ 7.5 ಅಷ್ಟು ಮೀಸಲಾತಿಯನ್ನು ಹೆಚ್ಚಳ
ಮಾಡಿರುವುದು ತಿಳಿದಿರುವ ಸತ್ಯ.

ಆದರೆ ಇಂದು ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ದಶಕಗಳ ಬೇಡಿಕೆ ಅದು ಸಾಮಾಜಿಕ ನ್ಯಾಯ ಬಿಜೆಪಿ ಬದ್ಧತೆಯನ್ನು ನೋಡಿದರೆ ಒಳ ಮೀಸಲಾತಿ ಜಾರಿ ಮಾಡಿದೆ. ಎಡಗೈ ಸಮುದಾಯಕ್ಕೆ 6.0% ಹಾಗೂ ಬಲಗೈ ಸಮುದಾಯಗಳಿಗೆ 5.5% ಮತ್ತು ಭೋವಿ ಬಂಜಾರ ಸಮುದಾಯಗಳಿಗೆ 4.5% ಹಾಗೂ ಅಲೆಮಾರಿ ಸಣ್ಣ ಸಮುದಾಯಗಳಿಗೆ 1% ಬೊಮ್ಮಾಯಿ ಸರ್ಕಾರವು ಅನುಮೋದನೆ ನೀಡಿದೆ.

ಇನ್ನೊಂದು ಮುಖ್ಯವಾದ ಅಂಶವೆಂದರೆ ಒಕ್ಕಲಿಗ ಸಮುದಾಯದ ಮೀಸಲಾತಿ 2C – 4 ರಿಂದ 6 ಕ್ಕೆ ಏರಿಕೆ ಮತ್ತು ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ 5 ರಿಂದ 7ಕ್ಕೆ ಏರಿಕೆ ಮಾಡಿ 2D ಅನ್ವಯ ಈ ರೀತಿ ಇಂದು ಸಂಪುಟದಲ್ಲಿ ಸಿಎಂ ಬೊಮ್ಮಾಯಿ ಸರ್ಕಾರವು ಬಿಜೆಪಿ ಸರ್ಕಾರವು ಅನುಮೋದನೆ ನೀಡಿದೆ ಇದು ಕೂಡ ಎಷ್ಟರ ಮಟ್ಟಿಗೆ ಕಾರ್ಯಗತ ಮಾಡುತ್ತಾರೆ.

ಆದಷ್ಟು ಬೇಗನೆ ಕೇಂದ್ರ ಸರ್ಕಾರಕ್ಕೆ ಕಡತವನ್ನು ಕಳಿಸಿ ಪ್ರಭಾವವನ್ನು ಬೆಳೆಸಿ ಅಲ್ಲಿಂದ ಜಾರಿ ಮಾಡ್ತಾರೋ ಇಲ್ಲ ಚುನಾವಣೆ ಗಿಮಿಕ್ ಆಗುತ್ತೋ ಚುನಾವಣೆ ಹೆಸರಿಗಷ್ಟೇ ಚುನಾವಣೆ ಹತ್ತಿರ ಬಂತು! ಚುನಾವಣೆ ಗಿಮಿಕ್ ಆಗುತ್ತೋ ಎಂಬುದನ್ನು ಕಾದುನೋಡಬೇಕಿದೆ! ಬೇಗನೆ ಕಾರ್ಯಗತ ಮಾಡ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ. ಇದರಿಂದ ಯಾರಿಗೆ ಎಷ್ಟು ಸಹಾಯ ಆಗುತ್ತೆ ಅಭಿವೃದ್ಧಿ ಆಗ್ತಾರೆ ಏನು ಕಲ್ಪನೆ ಇನ್ನೂ ಕೂಡ ನಿಗೂಢವಾಗಿದೆ!

ಪ್ರಸ್ತುತವಾಗಿ ದೇಶದಲ್ಲಿರುವ ದಲಿತ ಒಂದು ಜನಾಂಗದ ಕಲ್ಯಾಣ ಗೋಸ್ಕರ ಯಾವ ಸರ್ಕಾರ ಕೂಡ ಸಮಾನವಾದ ಸಮಾನತೆಯನ್ನು ಕಾಣದೆ ಇರುವುದು ದುರಂತ ಆದರೆ ಗ್ರಾಮೀಣ ಭಾಗದಲ್ಲಿ ಭಾರತ ದೇಶ ಉದ್ದಕ್ಕೂ ಪ್ರಸ್ತುತವಾಗಿ ಅಸ್ಪೃಶ್ಯ ಆಚರಣೆ ಅವಮಾನ ಸಾಮಾಜಿಕ ಬಹಿಷ್ಕಾರ ಮೇಲು ಕೀಳು ಎನ್ನುವ ತಾರತಮ್ಮ ಇನ್ನೂ ಹಲವಾರು ವಿಷಯಗಳನ್ನು ಇಟ್ಟುಕೊಂಡು ಸಮುದಾಯದ ದಲಿತ ಸಮುದಾಯಕ್ಕೆ ದ್ರೋಹ ಬಗೀತ ಮಾಡ್ತಾ ಇದ್ದಾರೆ ಎಷ್ಟೇ ಕಾನೂನು ಜಾರಿಗೊಳಿಸಿದರು ದಲಿತರ ಮೇಲೆ ದೌರ್ಜನ್ಯ ನಿಂತಿಲ್ಲ.

ಆದಷ್ಟು ಬೇಗ ಮುಂದೊಂದಿನ ದಲಿತ ವರ್ಗಕ್ಕೆ ಅನ್ಯಾಯ ವಾಗದ ರೀತಿಯಲ್ಲಿ ನೋಡಿಕೊಳ್ಳಬೇಕು ಮತ್ತು ಅವರಿಗೆ ರಕ್ಷಣೆ ಕೊಡಬೇಕು  ಅವರು ಭಾರತದ ಪ್ರಜೆಗಳಂತೆ ಎಂಬುದನ್ನು ಒಂದು ಅರ್ಥ ಮಾಡಿಕೊಳ್ಳಬೇಕು ಇದರಿಂದ ಸಮ ಸಮಾಜ ನಿರ್ಮಾಣ ಸಾಧ್ಯ! ಎಂದು ಬಿ.ಶರಣಬಸವ ಸಾಮಾಜಿಕ ಹೋರಾಟಗಾರ ಇವರು ಸರ್ಕಾರಕ್ಕೆ ಪ್ರಶ್ನೆಯನ್ನ ಮಾಡಿದ್ದಾರೆ.

error: Content is protected !!