
ಮೋದಿ ಅವರ ಕನಸಿನ ಯೋಜನೆ ಅಮೃತ್ ಸಿಟಿ ಯೋಜನೆ ಕಾಮಗಾರಿ ನೀಡಿದ ಅನುದಾನ ಸರ್ಕಾರದ ಕೋಟಿ ಕೋಟಿ ಅನುದಾನ ಹಣ ನಿರುಪಾಲು ಮಾಡಿದ ಅಧಿಕಾರಿಗಳ ಬೇಜವಾಬ್ದಾರಿತನದಿಂದ. ಕಳಪೆ ಕಾಮಗಾರಿ ಗಳು ಪ್ರದರ್ಶನ ವಾಗುತ್ತಿದೆ.
ಗಂಗಾವತಿ: ಸರಕಾರದ ಸಾವಿರಾರು ಕೋಟಿ ಕೋಟಿ ಹಣ 24×7 ಕುಡಿಯುವ ನೀರಿನ ಯೋಜನೆ ವಿಪಲ ಸಾವಿರಾರು ಕೋಟಿ ರೂಪಾಯಿ ಯೋಜನೆ ಕಾಮಗಾರಿ ಪೂರ್ಣಗೊಳ್ಳದಕ್ಕೂ ಮುಂಚೆ ನಗರಸಭೆಯ ಸರ್ವ ಸದಸ್ಯರು ನಗರದ ಸಾರ್ವಜನಿಕರ ವಿರೋಧದ ಮಧ್ಯೆ ಕಾಮಗಾರಿ ಹಸ್ತಾಂತರಿಸಿಕೊಂಡ ನಗರಸಭೇಯ ಅಧಿಕಾರಿಗಳು ಸಾರ್ವಜನಿಕರ ಜೀವನದ ಜೊತೆ ಚಲ್ಲಾಟವಾಡುತಿದ್ದಾರೆ.

24×7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಎಲ್ಲೆಂದರಲ್ಲಿ ನೀರು ಸೊರಿಕೆಯಾಗುತಿದ್ದು ಸಾರ್ವಜನಿಕರಿಗೆ ತಲುಪದೆ ನೀರು ಪೊಲಾಗುತ್ತಿದೆ . ಸೋರಿಕೆಯಿಂದಾಗಿ ಮೇಲುಗಡೆ ಇರುವ ವಿದ್ಯುತ್ ತಂತಿಗೆ ತಾಗುವುದರ ಮೂಲಕ ಯಾವುದೇ ಸಂದರ್ಭದಲ್ಲಿ ಮೃತ್ಯುವಿಗೆ ಆಹ್ವಾನ ನೀಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ನಗರಸಭೆಗೆ ಒಂದುವರೆ ತಿಂಗಳಷ್ಟೇ ಕಳೆದಿದೆ ಕಾಮಗಾರಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವುದು ಅಷ್ಟರಲ್ಲೇ ಕಾಮಗಾರಿಯ ಗುಣಮಟ್ಟ ಹೇಗಿದೆ ಎಂದು ಕಾಣಬಹುದು ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ದುರಾಸೆಗಳಿಂದ ಜನರ ಜೀವನ ಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಗಂಗಾವತಿ ನಗರದ ಬಸ್ ನಿಲ್ದಾಣದ ಮುಂದುಗಡೆ ಇರುವಂತಹ ಉದ್ಯಾನವನದಲ್ಲಿ ಪೈಪ್ ಹೊಡೆದಿರುವ ಬೆನ್ನಲ್ಲೇ ಇಂದು ನಗರದ ಆನೆಗುಂದಿ ರಸ್ತೆಯ ಕೆ.ಇ.ಬಿ.ಮುಂಭಾಗದಲ್ಲಿ ಪೈಪ್ ಹೊಡೆದ ಘಟನೆ ಜರುಗಿದ್ದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುವ ನೀರನ್ನು, ನಿಲುಗಡೆಗೆ ಮುಂದಾಗಬೇಕು, ಹಾಗೆಯೇ ದೊಡ್ಡ ಪ್ರಮಾಣದ ಅಪಾಯವನ್ನು ತಪ್ಪಿಸಿದ ಕೆ.ಇ.ಬಿ.ಇಲಾಖೆ ಅಧಿಕಾರಿಗಳು ಅಲ್ಲಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ಜನತೆಗೆ ಆಗುವ ಅನಾಹುತವನ್ನು ತಪ್ಪಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಗಳು ಕೂಡಲೆ ಕಾರ್ಯ ಪ್ರವೃತ್ತರಾಗಿ ಅಮೃತ್ ಸಿಟಿ ಯೋಜನೆಯಲ್ಲಿ ನಡೆದ ಎಲ್ಲಾ ಕಾಮಗಾರಿಗಳನ್ನು ಕೂಲಂಕುಶವಾಗಿ ತನಿಖೆ ನಡೆಸಬೇಕು. ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾಧ್ಯಕ್ಷರಾದ ಎಚ್ ವಸಂತ್ ಕುಮಾರ್ ಕಟ್ಟಿಮನಿ ಹಾಗೂ ಗಂಗಾವತಿ ತಾಲೂಕು ಅಧ್ಯಕ್ಷರಾದ ಮಲ್ಲೇಶ್ ಇವರು ಆರೋಪ ಮಾಡಿದ್ದಾರೆ.
ಇಂತಹ, ಹಲವಾರು ಪ್ರಕರಣಗಳು ನಗರಸಭೆ ವ್ಯಾಪ್ತಿಯ, ವಿವಿಧ ವಾರ್ಡುಗಳಲ್ಲಿ ಕಾಣಬಹುದಾಗಿದೆ ಆದರೆ ಅಧಿಕಾರಿಗಳು ಕಂಡು ಕಾಣದಂತೆ ಕುರುಡರಂತೆ ವರ್ತನೆ ಮಾಡುತ್ತಿರುವುದು ವಿಪರ್ಯಾಸ.