
ಕೊಪ್ಪಳ : ತಾಲೂಕಿನ ಯಲಬುರ್ಗಾ ಬೇವೂರು ಮುಖ್ಯ ರಸ್ತೆಯ ಮಲಕಸಮುದ್ರ ಗ್ರಾಮದ ಬಳಿ ಇರುವ ಗಂಗೂರೇಶ್ವರ ದೇವಸ್ಥಾನದ ಹತ್ತಿರ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ವಾಮಾಚಾರದ ಸಾಮಗ್ರಿಗಳು ಕಂಡುಬಂದಿದ್ದು ಗ್ರಾಮಸ್ಥರು ಕೆಲ ಸಮಯ ಭಯಭೀತರಾದ ಪ್ರಸಂಗ ಜರುಗಿತು.

ವಾಮಾಚಾರ ಮಾಡಿಸಿದ್ದಾರೆ ಎನ್ನಲಾದ ಸ್ಥಳದಲ್ಲಿ ತೆಂಗಿನಕಾಯಿ ನಿಂಬೆಹಣ್ಣು ಅರಿಶಿನ ಕುಂಕುಮ ತಾಮ್ರದ ಹಾಳೆಗಳು ಕಂಡುಬಂದಿದ್ದು ತಾಮ್ರದ ಹಾಳೆಯ ಮೇಲೆ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಹಾಲಪ್ಪ ಆಚಾರ್ ಅವರು ಪರಾಭವಗೊಳ್ಳಬೇಕು ಹಾಗೂ ಗೌರವ ಬಸವರಾಜ್ ರವರ ಹೆಸರು ಸಹ ಅದರಲ್ಲಿ ಉಲ್ಲೇಖಿಸಿದ್ದು ಗೌರ ಬಸವರಾಜ ಅವರ ಹೆಸರಿನ ಮುಂದಿರುವ ಸಂದೇಶ ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಈ ಕೃತ್ಯವು ಹಾಲಪ್ಪ ಆಚಾರ್ಯರ ಏಳಿಗೆ ಸಹಿಸದ ಕಾಂಗ್ರೆಸ್ನವರು ಮಾಡಿರುವುದಾಗಿ ಕೆಲ ಗ್ರಾಮಸ್ಥರು ಹೇಳಿಕೊಂಡರೆ ಇನ್ನೂ ಕೆಲವು ಗ್ರಾಮಸ್ಥರು ಇದೆಲ್ಲ ಬಿಜೆಪಿಗೆರೆ ಹೀಗೆ ಮಾಡಿರುವುದಾಗಿ ಅವರ ಮೇಲೆ ಜನರಿಗೆ ಸಿಂಪತಿ ಹುಟ್ಟಿಸಲು ಬಿಜೆಪಿಗರೆ ಮಾಡಿರುವ ಕುತಂತ್ರ ಬುದ್ಧಿ ಎಂದು ಕೆಲ ಗ್ರಾಮಸ್ಥರು ಹೇಳುತ್ತಿರುವುದು ನಿಜಕ್ಕೂ ಕ್ಷೇತ್ರದ ರಾಜಕಾರಣದಲ್ಲಿ ಹೊಸ ತಿರುವು ಪಡೆದುಕೊಂಡಿದ್ದು ಹೊಟ್ಟೆನಲ್ಲಿ ಹೇಳುವುದಾದರೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾವು ಜೋರಾಗಿರುವುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ