ಕೊಪ್ಪಳ : ಗಂಗಾವತಿ ನಗರದಲ್ಲಿ ಇಂದು   ಬಿ. ಹುಸೇನಪ್ಪ ಸ್ವಾಮಿ ಮಾತನಾಡಿದಶಕಗಳಿಂದ ನನೆಗುದಿಗೆ ಬಿದ್ದಿದ್ದ ಒಳ ಮೀಸಲಾತಿಯನ್ನು ಜಾರಿ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಕ್ರಮಕ್ಕೆ  ಕರ್ನಾಟಕ ಮಾದಿಗ ದಂಡೋರ ಸಮಿತಿಯ ರಾಜ್ಯ ಕಾರ್ಯಧ್ಯಕ್ಷ ರಾದ ಬಿ.ಹುಸೇನಪ್ಪ ಸ್ವಾಮಿ ಸ್ವಾಗತಿಸಿದ್ದಾರೆ.

ಸದಾಶಿವ ಆಯೋಗ ಜಾರಿಗಾಗಿ ಹಲವಾರು ವರ್ಷಗಳಿಂದ ಪ್ರತಿಭಟನೆ ಮಾಡುತ್ತಾ ಬಂದಿದ್ದೇವೆ ಇಷ್ಟು ವರ್ಷಗಳ ನಂತರ ಇದಕ್ಕೆ ಪ್ರತಿಫಲ ಸಿಕ್ಕಂತಾಯಿತು ಎಂದು ತಿಳಿಸಿದ್ದಾರೆ. ದಲಿತರ ಸಮುದಾಯಗಳು ಬಿಜೆಪಿ ಸರ್ಕಾರಕ್ಕೆ ಕೃತಜ್ಞತೆ ತಿಳಿಸು ತ್ತಾರೆ ಎಂದು ಹರ್ಷ ವ್ಯಕ್ತಪಡಿಸಿದರು.

‘ಹಿಂದಿನ ಯಾವ ಸರ್ಕಾರಗಳು ಕೂಡ ದಲಿತ ಸಮುದಾಯಗಳಿಗೆ ಯಾರು ಮಾಡದೇ ಇರುವಂತಹ ಐತಿಹಾಸಿಕ ನಿರ್ಧಾರವನ್ನು ಬಿಜೆಪಿ ಸರ್ಕಾರ ಮಾಡಿರುವುದು ಸಾಮಾಜಿಕವಾಗಿ ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸಿದಂತಾಗಿದೆ’ ಎಂದಿದ್ದಾರೆ.


error: Content is protected !!