
ಗಂಗಾವತಿ: ನಗರದ ಎಸ್‌ಬಿಎಚ್ ಬ್ಯಾಂಕ್ ಹತ್ತಿರ ದುರ್ಗಮ್ಮನ ಹಳ್ಳಕ್ಕೆ ಅಮೃತ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ವಾಹನ ನಿಲುಗಡೆ ಜಾಗಕ್ಕೆ ಹೋಗಲು ಅಡ್ಡಿಯಾಗಿದ್ದ ಅಕ್ರಮ ನಾಲ್ಕು ಮಳಿಗೆಗಳನ್ನು ನಗರಸಭಾ ಸಿಬ್ಬಂದಿಯವರು ಶನಿವಾರ ಬೆಳಗ್ಗೆ ತೆರವು ಕಾರ್ಯಾಚರಣೆ ಮೂಲಕ ನೆಲಸಮಗೊಳಿಸಿದ್ದಾರೆ.

ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸಲಾಗಿದೆ ಈ ಕಟ್ಟಡಕ್ಕೆ ಹೊಂದಿಕೊಂಡಂತೆ ಖಾಸಗಿಯವರು ನಗರಸಭೆ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸಿಕೊಂಡು ಹಲವು ವರ್ಷಗಳು ಕಳೆದಿದ್ದವು. ಹಲವು ಭಾರಿ ತೆರವುಗೊಳಿಸುವಂತೆ ನಗರಸಭೆಯಿಂದ ಸೂಚನೆ ನೀಡಿದ್ದರೂ ಮಳಿಗೆಗಳ ಮಾಲೀಕರು ಶನಿವಾರ ಬೆಳಗ್ಗೆ ನಗರಸಭೆ ಕಾನೂನು ಕ್ರಮ ಕೈಗೊಂಡು ಅಮೃತ ಸಿಟಿ ಯೋಜನೆ ನಿರ್ಮಿಸಿರುವ ಪಾರ್ಕಿಂಗ್ ಜಾಗಕ್ಕೆ ಹೋಗಲು ಜೆಸಿಬಿ ಮೂಲಕ ಅಕ್ರಮ ಮಳಿಗೆಗಳನ್ನು ನೆಲಸಮ ಮಾಡಲಾಯಿತು.
ಈ ಸಂದರ್ಭದಲ್ಲಿ ಮಳಿಗೆಗಳ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದರೂ ನಗರಸಭೆಯ ಅಧಿಕಾರಿಗಳು ಕ್ಯಾರೆ ಎನ್ನದೆ ಮಳಿಗೆಗಳನ್ನು ನೆಲಸಮ ಮಾಡಲಾಯಿತು.
ಈ ಸಂದರ್ಭದಲ್ಲಿ ಪೌರಾಯುಕ್ತ ವಿರುಪಾಕ್ಷ ಮೂರ್ತಿ,ಅಭಿಯಂತರದ ಶಂಕರಗೌಡ ನಾಗರಾಜ ಚೇತನ್ ಕುಮಾರ್ ಸೇರಿದಂತೆ ನಗರಸಭೆಯ ಹಲವು ಅಧಿಕಾರಿಗಳು ಇದ್ದರು.