
ಕೊಪ್ಪಳ : ಗಂಗಾವತಿ ನಗರದಲ್ಲಿ ಇಂದು ರಮೇಶ್ ಕಾಳಿ ಮಾತನಾಡಿದಶಕಗಳಿಂದ ನನೆಗುದಿಗೆ ಬಿದ್ದಿದ್ದ ಒಳ ಮೀಸಲಾತಿಯನ್ನು ಜಾರಿ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಕ್ರಮಕ್ಕೆ ಸಾಮಾಜಿಕ ಹೋರಾಟಗಾರ ಮತ್ತು ದಲಿತ ಮುಖಂಡರು ಆದ ರಮೇಶ್ ಕಾಳಿ ಸ್ವಾಗತಿಸಿದ್ದಾರೆ.
‘ಹಿಂದಿನ ಯಾವ ಸರ್ಕಾರಗಳು ಕೂಡ ದಲಿತ ಸಮುದಾಯಗಳಿಗೆ ಯಾರು ಮಾಡದೇ ಇರುವಂತಹ ಐತಿಹಾಸಿಕ ನಿರ್ಧಾರವನ್ನು ಬಿಜೆಪಿ ಸರ್ಕಾರ ಮಾಡಿರುವುದು ಸಾಮಾಜಿಕವಾಗಿ ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸಿದಂತಾಗಿದೆ’ ಎಂದಿದ್ದಾರೆ.