ದೆಹಲಿ: ದೆಹಲಿ ಸರ್ಕಾರ ಇಂದು 78,800 ಕೋಟಿ ರೂ. ಬಜೆಟ್‌ ಮಂಡನೆ ಮಾಡಿತು. ಹಣಕಾಸು ಸಚಿವ ಕೈಲಾಶ್ ಗೆಹ್ಲೋತ್‌ ಅವರು ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ.

ಮಂಗಳವಾರವೇ ಬಜೆಟ್‌ ಮಂಡಣೆಯಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟದಿಂದಾಗಿ ಬಜೆಟ್‌ ಮಂಡನೆ ಒಂದು ದಿನ ವಿಳಂಬವಾಯಿತು.

ಈ ಸಲದ ಬಜೆಟ್‌ನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಗೆಹ್ಲೋತ್‌ ಹೇಳಿದರು.

ಮೂಲಸೌಕರ್ಯಕ್ಕೆ 22,000, ಶಿಕ್ಷಣಕ್ಕೆ 16 ಸಾವಿರ ಕೋಟಿ, ಆರೋಗ್ಯಕ್ಕೆ 9 ಸಾವಿರ ಕೋಟಿ, ಜಾಹೀರಾತುಗಳಿಗೆ 550 ಕೋಟಿ ಮೀಸಲಿಡಲಾಗಿದೆ ಎಂದು ಕೈಲಾಶ್ ಗೆಹ್ಲೋತ್‌ ಹೇಳಿದರು.

error: Content is protected !!