ಬಳ್ಳಾರಿ :ಕಂಪ್ಲಿ ತಾಲೂಕಿನ ಮತದಾರರಿಗೆ ಆಮಿಷವೊಡ್ಡಲು ಸಂಗ್ರಹಿಸಿದ್ದ 102 ಸೀರೆಗಳನ್ನು ಚುನಾವಣಾ ನೀತಿ ಸಂಹಿತೆ ತಂಡದವರು ಖಚಿತ ಮಾಹಿತಿ ಮೇರೆಗೆ ವಶಪಡಿಸಿಕೊಂಡಿರುವುದು ಮಂಗಳವಾರ ಜರುಗಿದೆ.

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮತದಾರಿಗೆ ಆಮೀಷ ಹೊಡ್ಡಲು ರಾಜಕೀಯ ಪಕ್ಷಗಳು ಹರ ಸ ಹಾಸ ಮಾಡುತ್ತಿವೆ. ಹಾಗೆ ಚುನಾವಣಾ ಆಯೋಗ ಮತ್ತು ಪೋಲಿಸ ಇಲಾಖೆ ಕಾರ್ಯಚರಣೆ ಕೂಡ ಬರದಿಂದ ಸಾಗಿದೆ.

ತಾಲ್ಲೂಕಿನ ಶ್ರೀರಾಮರಂಗಾಪುರದಲ್ಲಿ 41 ಸೀರೆ ಮತ್ತು
ನಂ.10 ಮುದ್ದಾಪುರ ಗ್ರಾಮದಲ್ಲಿ 61 ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಎಲ್ಲ ಸೀರೆಗಳು ಬಿಜೆಪಿ ಚಿಹ್ನೆ ಇರುವ ಚೀಲದಲ್ಲಿದ್ದ ಸಂಗ್ರಹಿಸಲಾಗಿತ್ತು.

ಈ ಸಂದರ್ಭದಲ್ಲಿ ಸೆಕ್ಟರ್ ಅಧಿಕಾರಿ ಧರ್ಮಣ್ಣ
ಜಾಗೃತದಳ ಅಧಿಕಾರಿ ಶ್ರೀನಿವಾಸ್ ಅರವಿ, ಎಫ್.ಎಸ್.ಟಿ ರವಿಕುಮಾರ್,ಪಿಎಸ್‌ಐ ಶಾರದಮ್ಮ ಡಿ, ದೊಡ್ಡಾಣಿ,ಹೆಡ್ ಕಾನ್‌ಸ್ಟೇಬಲ್ ದತ್ತಾತ್ರೇಯ, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್ ದಾಳಿಯಲ್ಲಿ ಭಾಗವಹಿಸಿದ್ದರು.

ನಂ.10 ಮುದ್ದಾಪುರ ಪ್ರಕರಣ ಕಂಪ್ಲಿ ಠಾಣೆಯಲ್ಲಿ ಮತ್ತು ಶ್ರೀರಾಮರಂಗಾಪುರ ಪ್ರಕರಣ ಕುಡುತಿನಿ ಠಾಣೆಯಲ್ಲಿ ದಾಖಲಾಗಿದೆ

error: Content is protected !!