
ಕೊಪ್ಪಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿಯಲ್ಲಿ ಗಂಗಾವತಿ ವಾತ್ಸಲ್ಯ ಮನೆ ಹಸ್ತಾಂತರ 31ನೇ ವಾರ್ಡ್ ವಿರುಪಾಪುರ ತಾಂಡದಲ್ಲಿ ಕಡು ಬಡತನದಲ್ಲಿ ಜನಿಸಿದ ಹಿರಿಯ ಮಹಿಳೆ ಗಂಗಮ್ಮ ಅವರಿಗೆ ವಾತ್ಸಲ್ಯ ಮನೆಯನ್ನು ಹಸ್ತಾಂತರ ಮಾಡಿದರು.
ನಂತರ ಮಾತನಾಡಿದ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಶ್ರೇಷ್ಠಿ ಅವರು ಈಗಿನ ಕಾಲದಲ್ಲಿ ಸರ್ಕಾರ ಮಾಡಲಾರದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆ ಮಾಡತ್ತಾ ಇದೆ ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ ಕಡು ಬಡತನದಲ್ಲಿ ಜನಿಸಿ ಮಹಿಳಾ ವೃದ್ಧರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಅವರು ಗುರುತಿಸಿ ಸುಮಾರು ರಾಜ್ಯದಲ್ಲಿ 5000 ಸಾವಿರ ಫಲಾನುಭವಿಗಳಿಗೆ ವಾತ್ಸಲ್ಯ ಎಂಬ ಹೆಸರಿನ ಮೇಲೆ ಮನೆಯನ್ನು ನಿರ್ಮಾಣ ಮಾಡಿ ಕೊಟ್ಟಿದ್ದಾರೆ

ಅದರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಈಗಾಗಲೇ ಮೂರು ಜನರಿಗೆ ಕಡು ಬಡತನದಲ್ಲಿ ಇದ್ದವರಿಗೆ ಈಗಾಗಲೇ ಮಂಜೂರಿ ಮಾಡಿದ್ದಾರೆ ಅದರಲ್ಲಿ ಗಂಗಾವತಿ 31 ನೇ ವಾರ್ಡ್ ವಿರುಪಾಪುರ ತಾಂಡದ ನಿವಾಸಿ ಗಂಗಮ್ಮ ಹಿರಿಯ ಜೀವಿಗೆ ಈಗಾಗಲೇ ಮನೆಯನ್ನು ಹಸ್ತಾಂತರ ಈ ಸಂಸ್ಥೆ ಅವರು ಮಾಡಿದ್ದಾರೆ ,ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇಂತಹವರನ್ನು ಗುರುತಿಸಿ ಅವರಿಗೆ ಮೂಲತಃ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕ ಗಣೇಶ್ ಬಿ , ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯ ನೀಲಕಂಠಪ್ಪ,ಕೆ.ಆರ್.ಪಿ.ಪಿ.ಮುಖಂಡರಾದ ರಾಮನಾಯ್ಕ, ಬಿಜೆಪಿ ಮುಖಂಡರಾದ ದೇವಣ್ಣ, ಗಂಗಾವತಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳ ಬಾಲಕೃಷ್ಣ ಹಿರಿಂಜಾ, ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ, ವಲಯದ ಮೇಲ್ವಿಚಾರಕರ ಜಯಲಕ್ಷ್ಮಿ, ಜ್ಞಾನವಿಕಾಸ ಸಮನ್ವಯಾಧಿಕಾರ, ಶಾರದ ಒಕ್ಕೂಟದ ಆಶಾ ಕಾರ್ಯಕರ್ತೆ ಸರೋಜಾಬಾಯಿ,ಸೇರಿದಂತೆ ಇತರರು ಇದ್ದರು