ಗಂಗಾವತಿ: ದಿನದಿನ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು.ಬಹಳಷ್ಟು ನೀರು ಸಂಗ್ರಹ ಮಾಡಿ ಸಾರ್ವಜನಿಕ ನೀಡಬೇಕಾದ ಅಧಿಕಾರಿಗಳು ಬೇಜವ್ಬಾದಾರಿಗಳು ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ಅಧಿಕಾರಿಗಳಿಗೆ ನೀರಿನ ಬೆಲೆ ಗೊತ್ತಿಲ್ಲ ಇಂತಹ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಕಿತ್ತೊಗಬೇಕು ಎಂದು ಹೇಳಿದರು. ಸುಮಾರು ವರ್ಷಗಳಿಂದ ಇಲ್ಲಿ ಟೆಂಟ್ ಹಾಕಿ ಸೊಮಾರಿಗಳಾಗಿದ್ದರೆ ಎಂದು ತಿಳಿಸಿದರು.ಗಂಗಾವತಿ ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿರುವಂತಹ ನೆಹರು ಉದ್ಯಾನದಲ್ಲಿ ನಗರಸಭೆಯಿಂದ ನಿರ್ಮಾಣಗೊಂಡಿದ್ದ ಟ್ಯಾಂಕ್ ಗೆ ಅಮೃತ ಸಿಟಿ ಯೋಜನೆ ಅಡಿಯಲ್ಲಿ ಕೆ ಡಬ್ಲ್ಯೂ ಎಸ್ ವತಿಯಿಂದ  ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಲಾಗಿತ್ತು .

ಪೈಪ್ ವಾಲ್ ಹೊಡೆದು ಉದ್ಯಾನವನದ ತುಂಬಾ ನೀರು ನಿಂತಿರುವಂತಹ ಘಟನೆ ಜರುಗಿದೆ. ಅಪಾರ ಪ್ರಮಾಣದ ನೀರು ಪೋಲು ಆಗಿರುವಂತಹ ಘಟನೆ ಜರುಗಿದೆ ಅಮೃತ ಸಿಟಿ ಯೋಜನೆಯ ಕೆ ಡಬ್ಲ್ಯೂ ಎಸ್ 24*7 ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಗಂಗಾವತಿ ನಗರಸಭೆ ತಮ್ಮ ವಶಕ್ಕೆ ಪಡೆದು ಒಂದು ತಿಂಗಳು ಕೂಡ ಕಳೆದಿಲ್ಲ ಅಷ್ಟರಲ್ಲೇ ಪೈಪ್ ಹೊಡೆದಿರುವ ಘಟನೆ ಜರುಗಿದೆ ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ ಕಳಪೆ ಕಾಮಗಾರಿಯಾಗಿದೆ.

ಎಂದು ಅನೇಕ ಬಾರಿ ನಗರಸಭೆಗೆ ಮತ್ತು ಜಿಲ್ಲಾ ಆಡಳಿತಕ್ಕೆ ದೂರು ಸಲ್ಲಿಸಿದಂತಹ ಉತ್ತರ ಕರ್ನಾಟಕ ಯುವ ವೇದಿಕೆಯ ರಾಜ್ಯ ಅಧ್ಯಕ್ಷ ಜೋಗಿನ್ ರಮೇಶ್ ನಾಯಕ ದೂರು ಸಲ್ಲಿಸಿದ್ದು ಮಾಹಿತಿ ಇದ್ದರು ಕೂಡ ನಗರಸಭೆಯ ಪೌರಾಯುಕ್ತ ವಿರುಪಾಕ್ಷಪ್ಪ ಮೂರ್ತಿಯವರು ತಮ್ಮ ವಶಕ್ಕೆ ಪಡೆದಿರುವಂತಹ 24*7 ನೀರಿನ ಸರಬರಾಜು ಕಾಮಗಾರಿ ಪಡೆದ ಕೆಲವೇ ತಿಂಗಳಲ್ಲಿ ಇಂತಹ ಪರಿಸ್ಥಿತಿ ಉಂಟಾಗಿದ್ದು ಮುಂದಿನ ದಿನಗಳಲ್ಲಿ ಗಂಗಾವತಿ ನಗರದಲ್ಲಿ ಆಗಿರುವಂತಹ ಕಾಮಗಾರಿ ಕಳಪೆ ಎನ್ನುವುದರಲ್ಲಿ ಸಂಶಯವೇ ಇಲ್ಲ ಮುಂದಿನ ದಿನಗಳಲ್ಲಿ ಗಂಗಾವತಿ ನಗರದಲ್ಲಿ ಇನ್ನೂ ಏನೇನು ನೋಡಬೇಕು ಎನ್ನುವಂತಹ ಪರಿಸ್ಥಿತಿ ಉಂಟಾಗುತ್ತದೆ ಮತ್ತು ಗಂಗಾವತಿ ನಗರದಲ್ಲಿ ನಿರ್ಮಾಣವಾಗಿರುವಂತಹ ಅಮೃತ ಸಿಟಿ ಯೋಜನೆಯ ಕಾಮಗಾರಿಗಳು ಕಳಪೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ತಾಲೂಕಧ್ಯಕ್ಷ ಮಲ್ಲೇಶ್ ತಿಳಿಸಿದ್ದಾರೆ.

error: Content is protected !!