ಕೊಪ್ಪಳ :ಕರ್ನಾಟಕ ರಾಜ್ಯ ಘಟಕವು ಕೇಂದ್ರ ಸಮಿತಿಯ ನಿರ್ದೇಶನದಂತೆ ಕರ್ನಾಟಕದಲ್ಲಿ 80 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು, ಸದರಿ ಪಟ್ಟಿಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಶರಣಪ್ಪ ಸಜ್ಜೀಹೊಲ ಇವರ ಹೆಸರು ಸಹ ಒಳಗೊಂಡಿದ್ದರಿಂದ ಗಂಗಾವತಿಯ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಜಯಘೋಶಗಳನ್ನು ಕೂಗಿ, ನಗರದ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನಂತರ ಗಾಂಧಿ ವೃತ್ತದಲ್ಲಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ದ ಮೇಲೆ ಶರಣಪ್ಪ ಸಜ್ಜಿಹೊಲರವರು ಮಾತನಾಡಿ -ಗಂಗಾವತಿಯ ಶೇಕಡ 95ರಷ್ಟಿರುವ ಸಾಮಾನ್ಯರು, ನೊಂದವರು, ತುಳಿತಕ್ಕೊಳಗಾದವರು, ತಳಮಟ್ಟದ ಸಾಮಾನ್ಯ ಜನರ ಪ್ರತಿನಿಧಿಯಾಗಿರುವ ನನಗೆ ಆಮ್ ಆದ್ಮಿ  ಪಕ್ಷವು ಗಂಗಾವತಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿದೆ. ಆಮ್ ಆದ್ಮಿ ಪಕ್ಷದ ಟಿಕೆಟ್ ಗೆಲ್ಲ ಜನಸಾಮಾನ್ಯರಿಗೆ ಸಿಕ್ಕಂತಾಗಿದೆ.

ಗಂಗಾವತಿ ಎಲ್ಲ ಸಾಮಾನ್ಯ ಜನತೆ ಆಮ್ ಆದ್ಮಿ ಪಕ್ಷಕ್ಕೆ ಅಭೂತಪೂರ್ವ ಜಯವನ್ನು ತಂದು ಕೊಡುವ ಮೂಲಕ ಗಂಗಾವತಿಯಲ್ಲಿ ಇದುವರೆಗಿನ ಭ್ರಷ್ಟ ರಾಜಕಾರಣಕ್ಕೆ ಇತಿಶ್ರೀ ಹಾಡಲಿದ್ದಾರೆ- ಎಂದರು, ಈ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಬಗನಾಳ ರವರು ಮಾತನಾಡಿ ಪರಂಪರಾಗತವಾದ ಭ್ರಷ್ಟ ರಾಜಕಾರಣಕ್ಕೆ ದೆಹಲಿ ಮತ್ತು ಪಂಜಾಬ್ಗಳಲ್ಲಿ ಕೊಡಲಿ ಪೆಟ್ಟು ನೀಡಿದ ಆಮ್ ಆದ್ಮಿ ಪಕ್ಷ ಇದೀಗ ಕರ್ನಾಟಕ ಮತ್ತು ಗಂಗಾವತಿಗೆ ಬಂದಿದ್ದು ಜನಸಾಮಾನ್ಯರು ಒಗ್ಗಟ್ಟಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವ ಮೂಲಕ ಭ್ರಷ್ಟ ರಾಜಕಾರಣವನ್ನು ಕೊನೆಗೊಳಿಸಬೇಕಾಗಿದೆ- ಎಂದರು. ಈ ಸಂದರ್ಭದಲ್ಲಿ ಕಂಪ್ಲಿ ಯ ಆಮ್ ಆದ್ಮಿ ಪಕ್ಷದ ಸೇವಾಕಾಂಕ್ಷಿ H.ಪ್ರಹ್ಲಾದ್ ನಾಯಕ್, ಗಂಗಾವತಿಯ ಮುಖಂಡರುಗಳಾದ ಶ್ರೀಮತಿ ರೇಣುಕಾ ಬಸವರಾಜ್, ಜಿಲಾನಿ ಪಾಶ ,ಪರಶುರಾಮ ಒಡೆಯರ್, ಶಿವರಾಜ್ ಪೂಜಾರಿ, ರಮೇಶ ಆನೆಗುಂದಿ, ರವಿ ಆನೆಗುಂದಿ, ರಾಘವೇಂದ್ರ ಸಿದ್ದಿಕೇರಿ, ರಾಘವೇಂದ್ರ ಕಡೆಬಾಗಿಲು, ಮಣಿಕಂಠ, ವೆಂಕಟೇಶ್, ಬಸವರಾಜ್, ನಜೀರ್ ಅಹಮದ್, ಭೋಗೇಶ್, ಮುತ್ತು ಹೊಸಳ್ಳಿ, ಚಂದ್ರಶೇಖರ್ ನಿಸರ್ಗ, ಚಂದ್ರವಗ್ಗ, ಗೋವಿಂದಪ್ಪ, ತಿರುಪತಿ, ಕಾಶಿ, ಭಾಸ್ಕರ್, ಪ್ರಭು, ಇತರರು ಭಾಗವಹಿಸಿದ್ದರು.

error: Content is protected !!