
ರಾಯಚೂರು: ಮಾ.15- ಮಹಿಳೆಯರು ಒಂದೇ ಕ್ಷೇತ್ರಕ್ಕೆ ಸೀಮಿತಗೊಳ್ಳದೇ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಬಸನಗೌಡ ದದ್ದಲ್ ಅವರು ಹೇಳಿದರು.
ನಗರದ ತಾಲೂಕ ಆಡಳಿತ ಮತ್ತು ಸ್ತ್ರೀ ಶಕ್ತಿ ಒಕ್ಕೂಟ ಆಶ್ರಯದಲ್ಲಿ ಆಯೋಜಿಸಿದ *ಅಂತರಾಷ್ಟ್ರಿಯ ಮಹಿಳೆದಿನಾಚರಣೆ ಉದ್ಘಾಟನೆ* ನೆರೆವೇರಿಸಿ ಮಾತನಾಡಿದ ಶಾಸಕರು.
ಮಹಿಳೆಯರ ದಿನಾಚರಣೆಯ ಆಚರಣೆ ಸೀಮಿತವಾಗದೇ ಪ್ರತಿ ವರ್ಷ ಮಹಿಳೆರಲ್ಲಿ ಜಾಗೃತಿ ಮೂಡಿಸಿ ಮಹಿಳೆಯರಿಗೆ ಗೌರವಸಲ್ಲಿಸಲಾಗುತ್ತದೆ.ಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿ ಮಹಿಳೆಯರಿಗೆ ಗೌರವ ಸಲ್ಲಿಸಲಾಗುತ್ತಿದೇ ಎಂದರು.
ಮಹಿಳಾ ಸಬಲೀಕರಣದಿಂದ ಮಾತ್ರ ಅಭಿವೃದ್ದಿ, ಸಮಾಜದ ಏಳಿಗೆ ಸಾಧ್ಯವಾಗಲಿದೆ. ಹೀಗಾಗಿ ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚು ಚರ್ಚೆಯಾಗಬೇಕಿದೆ.
ಕುಟುಂಬದಲ್ಲಿ ಹಲವಾರು ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗೆ ತಾರತಮ್ಯ ಮಾಡಬಾರದು. *ಎಲ್ಲ ರಂಗದಲ್ಲಿಯೂ ಮಹಿಳೆಯರು ದಿಟ್ಟತನದಿಂದ ತೊಡಗಿಕೊಂಡಿರುವುದನ್ನು* ಇಂದು ಕಾಣಬಹುದಾಗಿದೆ. ಮಹಿಳೆಯರಿಗೆ ಹೆಚ್ಚು ಅವಕಾಶಗಳು ನೀಡಬೇಕು.
ಮಹಿಳೆಯರು ಸಬಲರಾದರೆ ಸಮಾಜದ ಪ್ರಗತಿಯು ಆಗಲಿದೆ. ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ’ ಎಂದರು. ಎಲ್ಲಾ ಕ್ಷೇತ್ರದ ಮಹಿಳೆಯರಿಗೆ ಸ್ಫೂರ್ತಿದಾಯಕ ದಿನವಾಗಿದೆ. ಪುರುಷರಂತೆ ಮಹಿಳೆಯರು ಎಲ್ಲಾ ಹಕ್ಕುಗಳನ್ನು ಪಡೆದುಕೊಂಡ, ಸಮಾನ ಕೆಲಸಕ್ಕೆ ಸಮಾನ ವೇತನ, ಮತದಾನದ ಹಕ್ಕು, ಹೆರಿಗೆ ರಜೆ, ಆರೋಗ್ಯ, ಕಾನೂನಾತ್ಮಕ, ಶೈಕ್ಷಣಿಕ ಸಾಂಸ್ಕೃತಿಕ, ಹಕ್ಕುಗಳನ್ನು ಪಡೆದುಕೊಂಡು ಯಶಸ್ವಿಯಾದ ಸ್ಮರಣೀಯ ದಿನವಿದು ಎಂದರು.
ಆಧುನಿಕ ಯುಗದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಬೇಕು.ಸ್ವಾಭಿಮಾನಿ ಬದುಕು ಸಾಗಿಸಬೇಕು ಎಂದರು.ಪ್ರಸ್ತುತ ಸಮಾಜದಲ್ಲಿ ಸಮಾನತೆ ತರುವುದು ಅಗತ್ಯವಿದೆ ಮಕ್ಕಳು ಉನ್ನತ ಸ್ಥಾನ ಅಲಂಕರಿಸಲು ತಾಯಿಯ ಪಾತ್ರ ಮಹತ್ವವಾದದು,
ಸ್ಥಳೀಯ ಆಡಳಿತ ಮತ್ತು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡಲಾಗುತ್ತಿದೆ ಎಂದರು.ಪ್ರಸ್ತುತ ಸಮಾಜದಲ್ಲಿ ಶಿಕ್ಷಣ ಮಹತ್ವದಾದು ಹೆಣ್ಣುಮಕ್ಕಳು ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂದರು.ಕುಟುಂಬ ಪೋಷಣೆ ಜೊತೆಗೆ ಸಮಾಜ ಸೇವೆಯಲ್ಲಿ ಮಹಿಳೆಯರ ಪಾತ್ರ ಶ್ರೇಷ್ಠವಾದದ್ದು,ಮಹಿಳೆಯರ ಶಕ್ತಿ ದೇಶ ಶಕ್ತಿ ಎಂದರು.ಕುಟುಂಬವನ್ನು ಜವಾಬ್ದಾರಿಯುತ್ತವಾಗಿ ನಿರ್ವಹಿಸುವ ಶಕ್ತಿ ಮಹಿಳೆಯರಿಗೆ ಇದೇ ಹೆಣ್ಣು ತಾಯಿ ಸ್ವರೂಪ, ದೇಶವನ್ನು ಮಾತೃದೇವ ಭಾವ ಎಂದು ಕರೆಯುತ್ತೇವೆ. ಮಹಿಳೆಯರಿಗೆ ವಿಶೇಷ ಗೌರವ ನೀಡಲಾಗಿತ್ತಿದೆ ಎಂದರು.
ಇಂತಹ ಕಾರ್ಯಕ್ರಮಗಳ ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಗಳನ್ನು ಮಹಿಳೆಯರಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು.ಮಹಿಳೆಯ ಅಭಿವೃದ್ಧಿ ಪೂರಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರುಗಳು ,ಅಧಿಕಾರಿಗಳು, ಸ್ತ್ರೀ ಶಕ್ತಿ ಒಕ್ಕೂಟದವರು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತರು ಉಪಸ್ಥಿತರಿದ್ದರು.