ಕೊಪ್ಪಳ :ಇಂದು ಗಂಗಾವತಿ‌ ನಗರದ ಆನೆಗುಂದಿ ರಸ್ತೆಯ ಶ್ರೀ ಕೃಷ್ಣದೇವರಾಯ ಕಾಲೋನಿಯಲ್ಲಿನ ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ

ಜಂಗಮ ಸಮುದಾಯದವರಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸೋವ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು

ಕುಂಭ ಕಳಶಗೊಂದಿಗೆ ಮೇರವಣಿಗೆ ಮೂಲಕ ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು ಭಾಗವಹಿಸಿ, ವೇದಿಕೆ ಕಾರ್ಯಕ್ರಮ ಅಲಂಕರಿಸಿದರು

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಹೆಬ್ಬಾಳ ಮಠದ 108 ಶ್ರೀ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.

ಈ ಸಮಯದಲ್ಲಿ  ಶ್ರೀ ರೇಣುಕಾಚಾರ್ಯರ ಮಹಿಮೆ ಹಾಗೂ ಜಂಗಮ ಸಮುದಾಯ ಕುರಿತು ಶಾಸಕರು ಮಾತನಾಡಿದರು.

ನಂತರ ಶಾಸಕರ ಸುಪುತ್ರರಾದ ಶ್ರೀ ಸಾಗರ್ ಮುನವಳ್ಳಿ ಅವರು ಅನ್ನಪ್ರಸಾದ ಸೇವೆಯಲ್ಲಿ ಭಾಗವಹಿಸಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಿದರು

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಕೆ ಚನ್ನಬಸವಸ್ವಾಮಿ, ಮಾಜಿ ವಿಧಾನ ಪರಿಷತ್ ಸದಸ್ಯ ಯರಾದ ಎಚ್.ಆರ್ ಶ್ರೀನಾಥ,  ಮಾಜಿ ಕಾಢಾ ಅಧ್ಯಕ್ಷರಾದ ಶ್ರೀ ತಿಪ್ಪೆರುದ್ರ ಸ್ವಾಮಿಗಳು, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಶೆಟ್ಟಿ, ಶ್ರೀ ಶಾಂತಮಲ್ಲಯ್ಯ ಸ್ವಾಮಿಗಳು, ಶರಣಯ್ಯಸ್ವಾಮಿ ವಕೀಲರು, ಶ್ರೀ ಸಂಗಯ್ಯಸ್ವಾಮಿ ಸಂಶಿಮಠ, ಶ್ರವಣಕುಮಾರ್ ರಾಯ್ಕರ್, ವೆಂಕಟೇಶ್ ಜಾದವ್, ಸಂಗಮೇಶ್ ಸುಗ್ರೀವ, ನಗರಸಭೆ ಸದಸ್ಯರಾದ ಮನೋಹರ ಸ್ವಾಮಿ, ಶ್ರೀನಿವಾಸ ಧೂಳ ಹಾಗೂ ಜಂಗಮ ಸಮಾಜದ ಗುರು ಹಿರಿಯರು, ಮುಖಂಡರು, ಬಂಧುಗಳು ಉಪಸ್ಥಿತರಿದ್ದರು

error: Content is protected !!