
ರಾಯಚೂರು :ರಾಯಚೂರು ಜಿಲ್ಲೆಯ ಗ್ರಾಮೀಣ ಕ್ಷೇತ್ರವಾದ ಅಡವಿ ಖಾನಾಪುರ್ ಎಂಬ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದ್ದು ಶಾಲೆಯ ಆವರಣದೊಳಗೆ ಅನಾದಿಕೃತವಾಗಿ ಷಡ್ ನಿರ್ಮಿಸಿ ಬಣಿವೆ ದೊಡ್ಡಿ ಹಾಕಿ ರಾಜ ರೋಷವಾಗಿ ಮೆರೆಯುತ್ತಿರುವ ದಾಂಡಿಗರು ಶಿಕ್ಷಣ ಇಲಾಖೆಗೆ ಸವಾಲಾಗಿರುವ ರಾಜೇಂದ್ರ ತಂದೆ ಗಿಡ್ಡು ಭೀಮಯ್ಯ ಮತ್ತು ಹುಲಿಗೆಪ್ಪ ತಂದೆ ರಾಜೇಂದ್ರ ಇವರಿಬ್ಬರಿಂದ ಮಾನ್ವಿ ತಾಲೂಕ್ ಶಿಕ್ಷಣ ಇಲಾಖೆ ತುಂಬಾ ತಲೆ ನೋವಾಗಿದೆ.
ಈಗಾಗಲೇ ಊರಿನ 24 ಜನಕ್ಕೆ ಸರಕಾರದಿಂದ ಹಕ್ಕು ಪತ್ರ ಕೊಟ್ಟು ಇವರಿಗೆ ವಾಸಿಸಲು ಸೂಕ್ತ ವ್ಯವಸ್ಥೆ ಮಾಡಿ ಕೊಟ್ಟಿರುತ್ತಾರೆ.
ಆದರೆ ಈ ಬುದ್ಧಿವಂತ ಜನರು ನಮ್ಮ ಊರಿಗೆ ಒಂದು ಶಾಲೆ ಬೇಕು ಎಂದು ಇವರಿಗೆ ಕೊಟ್ಟಂತಹ ಸ್ಥಳವನ್ನು ಸರ್ಕಾರಕ್ಕೆ ಒಪ್ಪಿಸಿರುತ್ತಾರೆ. ನಮ್ಮ ಮಕ್ಕಳು ವಿದ್ಯಾವಂತರಾಗಿ ಬುದ್ಧಿವಂತರಾಗಿ ಬೆಳೆಯಲಿ ಎಂದು ಸರ್ಕಾರ ಕೊಟ್ಟಂತಹ ಸ್ಥಳವನ್ನು ಶಿಕ್ಷಣ ಇಲಾಖೆಗೆ ಒಪ್ಪಿಸಿ ಆ ಸ್ಥಳದಲ್ಲಿ ಸರ್ಕಾರಿ ಶಾಲೆಯನ್ನು ನಿರ್ಮಿಸಿರುತ್ತಾರೆ.

ಆದರೆ ಇಲ್ಲಿ ನಡೆದಿದ್ದೇ ಬೇರೆ, ರಾಜೇಂದ್ರ ತಂದೆ ಗಿಡ್ಡು ಭೀಮಯ್ಯ ಮತ್ತು ಹುಲಿಗೆಪ್ಪ ತಂದೆ ರಾಜೇಂದ್ರ ಎಂಬ ಇಬ್ಬರು ದಾಂಡಿಗರು ಸೇರಿಕೊಂಡು ಸರ್ಕಾರಿ ಶಾಲೆಯ ಕಂಪೌಂಡಲ್ಲಿ ಅನಧಿಕೃತವಾಗಿ ಶೆಡ್ಡು ನಿರ್ಮಿಸಿ ಮತ್ತು ಬಣವಿ ದೊಡ್ಡಿ ಹಾಕಿದ್ದಲ್ಲದೆ ನಕಲಿ ಹಕ್ಕು ಪತ್ರವನ್ನು ಸೃಷ್ಟಿ ಮಾಡಿರುತ್ತಾರೆ.
ಇವರ ಮೇಲೆ ಈಗಾಗಲೇ ಮಾನ್ವಿ ಕ್ಷೇತ್ರದ ಶಿಕ್ಷಣಾಧಿಕಾರಿಗಳಿಗೆ ದೂರನ್ನು ಸಹಿತ ಅಡವಿ ಖಾನಾಪುರ ಗ್ರಾಮದ ಬಸವರಾಜ ಎಂಬವರು ದೂರನ್ನು ನೀಡಿರುತ್ತಾರೆ ಆದರೂ ಈವರೆಗೂ ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳು ಇವರ ಮೇಲೆ ಯಾವುದೇ ಸೂಕ್ತ ಕ್ರಮ. ತೆಗೆದುಕೊಂಡಿರುವುದಿಲ್ಲ ಏಕೆ ಈಗಲಾದರೂ ಸಂಬಂಧಪಟ್ಟ ಶಿಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಂಡು ಇವರ ಮೇಲೆ ಸೂಕ್ತ ಕ್ರಮ ಜರುಗಿಸಿ. ಸರ್ಕಾರಿ ಶಾಲೆಯ ಕಂಪೌಂಡಲ್ಲಿ ಅನಾದಿಕೃತವಾಗಿ ನಿರ್ಮಿಸಿರುವ ಶೆಡ್ಡು ಮತ್ತು ಬಣಿವಿ ದೊಡ್ಡಿ ಈ ಕೂಡಲೇ ತೆರವುಗೊಳಿಸಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.