ದಿನಾಂಕ: 13-09-2022 ರಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಪಂಚಾಯತ ಮಾನವಿ ಇವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ವಹಣೆಯಲ್ಲಿರುವ ವಸತಿ ನಿಲಯಗಳ ಸಮಸ್ಯೆಗಳು ಮತ್ತು ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸದ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಶ್ರೀಮತಿ ಅಂಬವ್ವ ಇವರಿಂದ ಸಮಸ್ಯೆಗಳು ಉದ್ದವಾಗಿರುತ್ತವೆ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ವಸತಿ ನಿಲಯಗಳಿಗೆ ತಕ್ಷಣ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಅಡುಗೆಯವರು,ಅಡುಗೆ ಸಹಾಯಕರನ್ನು ವಸತಿ ನಿಲಯಗಳಿಗೆ ಪ್ರಭಾರಿ ಮೇಲ್ವಿಚಾರಕರೆಂದು ನಿಯುಕ್ತಿಗೊಳಿಸಿರುವ ಆದೇಶಗಳನ್ನು ರದ್ದುಗೊಳಿಸಿ ಸರಕಾರದಿಂದ ನೇಮಕಗೊಂಡ ವಸತಿ ನಿಲಯಗಳ ಮೇಲ್ವಿಚಾರಕರಿಗೆ ಹೆಚ್ಚುವರಿಯಾಗಿ ಪ್ರಭಾರ ವಹಿಸಲು ಆದೇಶ ನೀಡುವಂತೆ ದಿನಾಂಕ: 22-09-2022 ರ ಒಳಗಾಗಿ ಆದೇಶ ನೀಡಲು ಸವಿಸ್ಥಾರಾವರ ಮನವಿಯನ್ನು ಮಾನ್ಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು.

13-09-2022 ಮತ್ತು 17-09-2022 ರಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ ಮಾನವಿ ಇವರು ಮಾನ್ಯ ವಿಸ್ತೀರ್ಣಾಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರುಗಳಿಗೆ ಅನುಕ್ರಮವಾಗಿ ನಮ್ಮ ದೂರನ್ನು ಆಧರಿಸಿ ವಸತಿ ನಿಲಯಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಪತ್ರವನ್ನು ಬರೆದು ನಿಮ್ಮ ಕಾರ್ಯವ್ಯಾಪ್ತಿಯ ವಸತಿ ನಿಲಯಗಳಿಗೆ ತಕ್ಷಣದಲ್ಲಿ ಮೂಲ ಸೌಕರ್ಯಗಳನ್ನು ದಿನಾಂಕ: 22-09-2022 ರ ಒಳಗಾಗಿ ಕಲ್ಪಿಸದಿದ್ದಲ್ಲಿ ತಮ್ಮ ವಿರುದ್ಧ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತದೆಂದು ಸಂಘಟನೆಯ ದ್ವಾರಾ ಆಗ್ರಹಿರುತ್ತೇವೆ.

ಸಂಘಟನೆಯ ದೂರಿಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ಪತ್ರಕ್ಕೆ ಸ್ಪಂದಿಸದ ಅಧಿಕಾರಿ ವರ್ಗದ ವಿರುದ್ಧ ದಿನಾಂಕ: 22-09-2022 ರಂದು ತಾಲೂಕಾ ಪಂಚಾಯತ ಆವರಣದಲ್ಲಿ ಧರಣಿ ಸತ್ಯಾಗ್ರಹದ ಮೂಲಕ ಐದು(5) ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಪ್ರಗತಿಪರ ಚಿಂತಕರು,ಹೋರಾಟಗಾರರು ಧರಣಿ ಸತ್ಯಾಗೃಹವನ್ನು ಕೂಡಾ ಮಾಡಲಾಯಿತು. ಮನವಿ ಸ್ವೀಕರಿಸಿದ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹದಿನೈದು(15) ದಿನಗಳ ಒಳಗಾಗಿ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಹೊಟ್ಟಿನಂತರ ಧರಣಿ ಸತ್ಯಾಗೃಹವನ್ನು ಹಿಂಪಡೆದುಕೊಳ್ಳಲಾಯಿತು.

ಮಾನ್ಯ ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಇವರ ಸುತ್ತೋಲೆ 19-09-2022 ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು/ ದಿನಾಂಕ: ವಿಸ್ತೀರ್ಣಾಧಿಕಾರಿಗಳು ಹಾಗೂ ನಿಲಯ ಮೇಲ್ವಿಚಾರಕರುಗಳು ಪ್ರಭಾರ ವಹಿಸುವ ಕುರಿತು ಹೊರಡಿಸಿದ್ದು ಸದರಿ ಸುತ್ತೋಲೆಯ ಅನ್ವಯ ವಸತಿ ನಿಲಯಗಳಿಗೆ ಅಡುಗೆ ಕಾರ್ಯನಿರ್ವಹಿಸಲು ಸಿಬ್ಬಂದಿಗಳಿಗೆ ವಸತಿ ಮೇಲ್ವಿಚಾರಕೆಂದು ನಿಯುಕ್ತಿಗೊಳಿಸಲು ನಿರ್ಭಂದಿಸಿ ಆದೇಶ ಹೊರಡಿಸಿರುತ್ತಾರೆ ಆದರೆ ಮಾನವಿ

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಶ್ರೀಮತಿ ಅಂಬವ್ವ ಇವರು ಪ್ರಭಾವ ಮತ್ತು ಪ್ರಲೋಭಕ್ಕೆ ಒಳಗಾಗಿ ಸರಕಾರದ ಆದೇಶವನ್ನು ಉಲ್ಲಂಘನೆಮಾಡಿ ಸುತ್ತೋಲೆಯ ಅಂಶಗಳನ್ನು ಗಾಳಿಗೆ ತೂರಿ, ಏಕ ಪಕ್ಷೀಯ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದಾರೆ.

ದಿನಾಂಕ: 21-10-2022 ರಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ರಾಯಚೂರು ಇವರು ಮಾನವಿ ತಾಲೂಕಿನ ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗೆ ಆಡುಗೆಯವರನ್ನು ಮತ್ತು ಅಡುಗೆ ಸಹಾಯಕರಿಗೆ ಪ್ರಭಾರ ವಹಿಸಿರುವುದನ್ನು ರದ್ದುಪಡಿಸಿ ಮೇಲ್ವಿಚಾರಕರಿಗೆ ಹೆಚ್ಚುವರಿ ಪ್ರಭಾರ ವಹಿಸಿಕೊಳ್ಳುವಂತೆ ಜಿಲ್ಲಾ ಮತ್ತು ತಾಲ್ಲೂಕಾ ಅಧಿಕಾರಿಗಳಿಗೆ ಆದೇಶಿಸಿರುತ್ತಾರೆ.

ಭಾರತೀಯ ದಲಿತ ಪ್ಯಾಂಥರ ತಾಲೂಕಾ ಸಮಿತಿ ಮಾನವಿ ದೂರಿಗೆ ಸಂಬಂಧಿಸಿದಂತೆ ಮಾನ್ಯ ಮೇಲಾಧಿಕಾರಿಗಳ ಆದೇಶವನ್ನು ಪಾಲಿಸದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯ ನಿರ್ಲಕ್ಷವನ್ನು ಪ್ರಶ್ನಿಸಿದ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ ಮಾನವಿ ಇವರ ಬೇಜವಾಬ್ದಾರಿತನವನ್ನು ಖಂಡಿಸಿ ಮುಂದಿನ ದಿನಗಳಲ್ಲಿ. ತಾಲ್ಲೂಕಾ ಪಂಚಾಯತ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆಂದು ಭಾರತೀಯ ದಲಿತ ಪ್ಯಾಂಥರ್ ತಾಲೂಕಾ ಸಮಿತಿ ಮಾನವಿ ಈ ಪತ್ರಿಕಾ ಗೋಷ್ಠಿಯ ಮೂಲಕ ಆಗ್ರಹಿಸುತ್ತದೆ.

error: Content is protected !!