ಯಲಬುರ್ಗಾ: ಜಿಲ್ಲಾ ಪೋಲಿಸ್ ಇಲಾಖೆ, ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸರಕಾರಿ ಪ್ರೌಢಶಾಲೆ ತಾಳಕೇರಿ ಶಾಲೆಯಲ್ಲಿ ಬೇವೂರು ಪೋಲೀಸ್ ಠಾಣೆ ವತಿಯಿಂದ “ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ” ಹಮ್ಮಿಕೊಳ್ಳಲಾಯಿತು.

PSI ಶೀಲಾ ಮೂಗನಗೌಡರ್ ಮಾತನಾಡಿ 18 ವರ್ಷದ ಒಳಗಿನ ಮಕ್ಕಳು ಸುರಕ್ಷಿತ ಮತ್ತು ಸುರಕ್ಷಿತ ಸ್ಪರ್ಶ, ಪೋಸ್ಕೊ ಕಾಯಿದೆ, ಮಕ್ಕಳ ಸಹಾಯವಾಣಿ 1098, 112 ಹಾಗೂ ಬಾಲ್ಯ ವಿವಾಹ, ಬಾಲಾಪರಾದ, ಬಾಲಕಾರ್ಮಿಕತೆ ಮತ್ತು ವರದಕ್ಷಿಣೆ ಪಿಡುಗುಗಳ ಕುರಿತು ಪ್ರತಿರೋಧ, ಮತ್ತು ಗಂಡು ಮಕ್ಕಳು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ, ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು, ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸುವುದು, ಮಕ್ಕಳ ಸುರಕ್ಷತಾ ಸಮಿತಿ, ಮತ್ತು ಮಕ್ಕಳ ದೂರು ಪೆಟ್ಟಿಗೆ ಹಾಗೂ ತೆರೆದ ಮನೆ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಬಾಬುಸಾಬ ಲೈನದಾರ್ ಹಾಗೂ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದರು.