ಕೊಪ್ಪಳ :ಗಂಗಾವತಿ ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ಪರಿಸರ ಶಿಕ್ಷಣ ಜಾಗೃತಿ ಸಿ ಇ ಕರ್ನಾಟಕ ಸರ್ಕಾರ ಮತ್ತು ಯೂನಿಸೆಫ್ ಸಹಯೋಗದೊಂದಿಗೆ ಹವಮಾನ ಮತ್ತು ಪರಿಸರ ಶಿಕ್ಷಣ ಕುರಿತು ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ,

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಮಾರಿ ಕಾವ್ಯ ಆರ್ ಯೋಜನಾಧಿಕಾರಿ ಸಿ ಇ ಇ
ಎಸ್ ಆರ್ ಸಿ ಬೆಂಗಳೂರು ಮಾತನಾಡಿ ಇಂದಿನ ಯುವಕರು ಪರಿಸರ ಜಾಗೃತಿಯನ್ನು ಮೂಡಿಸಬೇಕು ಮರಗಳನ್ನು ಬೆಳೆಸಬೇಕು ನಮ್ಮ ಸುತ್ತಮುತ್ತಲಿನ ವಾತಾವರಣ ಶುಚಿಗೊಳಿಸಬೇಕು ಎಂದು ತಿಳಿಸಿದರು ಪ್ರಾಸ್ತಾವಿಕ ಮಾತನಾಡಿದ ಕರಿಗೂಳಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳ ಹೊಲಗದ್ದೆಗಳಿಂದ ಮಣ್ಣು ಸಿರಿಧಾನ್ಯ ಸಸ್ಯಗಳು ತರಕಾರಿ ಬೀಜಗಳು ತಂದು ಸಾವಯವ ಗೊಬ್ಬರದಿಂದ ಮಿಶ್ರಣ ಮಾಡಿ ಅದರ ಉಂಡೆಗಳನ್ನು ಕಟ್ಟಿ ಅದರಲ್ಲಿ ಬೀಜಗಳನ್ನ ಇರಿಸಿ ಒಣಗಿಸಿ ಮೊಳಕೆ ಹೊಡೆದ ನಂತರ ಕಾಲೇಜು ಆವರಣದಲ್ಲಿ ಸೂಕ್ತ ಸ್ಥಳಗಳಲ್ಲಿ ಬೀಜದ ಉಂಡೆಗಳನ್ನು ಹೂಳುವಂತ ಯೋಜನೆಗೆ ಚಾಲನೆ ನೀಡಿದರು.

ಪರಿಸರ ಕಾಳಜಿ ಪ್ರತಿಯೊಬ್ಬರು ಮಾಡುವಂತೆ ಪ್ರತಿಜ್ಞಾವಿಧಿಯನ್ನ ಬೋಧಿಸಿದರು ಈ ಕಾರ್ಯಕ್ರಮದ ಮುಖ್ಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಪ್ರಭಾರ ಪ್ರಾಚಾರ್ಯ ಡಾ. ಜಾಜಿ ದೇವೇಂದ್ರಪ್ಪ ಸಸಿಗಳಿಗೆ ನೀರು ಉಣಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದು ಮನುಷ್ಯ ಪ್ರಾಣಿ ಪಕ್ಷಿಗಳಿಗೆ ಪರಿಸರದ ಅಗತ್ಯ ಬಹಳ ಇದೆ ಅದರ ಜಾಗೃತಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಶಿಕ್ಷಣ ಮೂಲಕ ನಮ್ಮ ಪರಿಸರ ಜಾಗೃತಿ ಮೂಡಿಸುವಂಥದ್ದು ನಮ್ಮೆಲ್ಲರ ಜವಾಬ್ದಾರಿ ಒಂದು ಲಕ್ಷ ಎಪ್ಪತ್ತೇಳು ಸಾವಿರ ಮರಗಳ ಮಾರಣ ಹೋಮ ನಡೆದಿದೆ ನಮ್ಮ ಸ್ವಾರ್ಥಕ್ಕಾಗಿ ನಾವು ಪರಿಸರ ಹಾಳು ಮಾಡುತ್ತಿದ್ದೇವೆ.

ಒಂದು ಮರ ಪ್ರಾಣಿ-ಪಕ್ಷಿಗಳಿಗೆ ಮನುಷ್ಯರಿಗೆ ಆಶ್ರಯ ನೀಡುತ್ತದೆ ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಗಳ ಮಾರಣ ಹೋಮ ಮಾಡುತ್ತಿದ್ದಾನೆ ನಾವು ಇದನ್ನೆಲ್ಲ ಬಿಟ್ಟು ಸಸಿಗಳನ್ನು ಮರಗಳನ್ನು ಬೆಳೆಸಬೇಕು ಚರಂಡಿ ನೀರನ್ನು ನದಿಗಳಿಗೆ ಹರಿಸಬಾರದು ಕಾರ್ಖಾನೆಗಳ ಕಲುಷಿತ ನೀರು, ಪರಿಸರಕ್ಕೆ ಸೇರಿಸಬಾರದು ಇಂದಿನ ಯುವ ಪೀಳಿಗೆ ಅರ್ಥೈಸಿಕೊಂಡು ಪರಿಸರ ಜಾಗೃತಿ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಡಾ,ಎನ್ ವೀರಭದ್ರಯ್ಯ ಸ್ವಾಮಿ  ಲಕ್ಷ್ಮಿ  ಸಂಯೋಜಕರಾದ
ಭಜರಂಗಬಲಿ,ಚಂದ್ರಶೇಖರ್ ಡಾ. ರವಿ ಕಿರಣ್ ಡಾ, ವೈಎಸ್ ವಗ್ಗಿ , ಡಾ, ಶಿಭಾರಾಣಿ  ದೊಡ್ಡಬಸಮ್ಮ ಖಾಜಾಸಾಬ್ ಪಂಚಾಕ್ಷರಿ ಶ್ರೀನಿವಾಸ್, ತಿಪ್ಪೇರುದ್ರಸ್ವಾಮಿ ಡಾ.ಸೋಮಶೇಖರ್.         ಶಿವ್ ಕುಮಾರ್ ಉಪಾಸಿ ರಾಘವೇಂದ್ರ   ಪರ್ವೀನ್ ಸುಲ್ತಾನ್  ಸುನಂದ ಇನ್ನಿತರ ಉಪನ್ಯಾಸಕರಿದ್ದರು ವಿದ್ಯಾರ್ಥಿಗಳು ಕಾರ್ಯಕ್ರಮ ಯಶಸ್ವಿಗೊಳಿಸಿದರು  ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!