ಗಂಗಾವತಿ: ಕಾಂಗ್ರೆಸ್ ಪಕ್ಷಕ್ಕೆ  ಅನ್ಸಾರಿ ಗ್ಯಾರಂಟಿ ಇಲ್ಲ ಏಕೆಂದರೆ ಅವರು ಜೆಡಿಎಸ್ ಪಕ್ಷದತ್ತ ಮುಖ ಮಾಡಿದ್ದಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವುದು.ಅಂದ ಮೇಲೆ ಗ್ಯಾರಂಟಿ ಕಾರ್ಡ್ ಯಾಕೆ? ಬಿಡುಗಡೆ ಮಾಡಿದ್ದಾರೆ ಎಂಬುದು ಅರ್ಥವಾಗದ ಮಾತುಗಳು ಕೇಳಿಬರುತ್ತಾವೆ.

ಗಂಗಾವತಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ  ಮಾಜಿ ಸಚಿವ ಇಕ್ಬಾಲ್ ಅನ್ಸಾರಿ.ಅನ್ಸಾರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೋಡಲೇ ಬೇಕು.ಏಕೆಂದರೆ ಕಲ್ಯಾಣ ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಪ್ರಾಬಲ್ಯ ರಾಜಕೀಯ ಮುಖಂಡರು.ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಹಾಗೂ ಇನ್ನೂ ಉಳಿದ ಅಲ್ಪಸಂಖ್ಯಾತರು ಮತಗಳ ಅನಿವಾರ್ಯ. ಒಂದು ವೇಳೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಲಿಲ್ಲ ಅಂದರೆ ಕೊಪ್ಪಳ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಅಥವಾ ನಾಲ್ಕು ಕ್ಷೇತ್ರಗಳಲ್ಲಿ
ಕಾಂಗ್ರೆಸ್ ಪಕ್ಷ ಸೋಲಬಹುದು.ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಅನ್ಸಾರಿ ಅನಿವಾರ್ಯ.ಮಾಜಿ ಸಚಿವ ಅನ್ಸಾರಿ ನಡೆ ಯಾವ ಕಡೆ ಎಂಬುದು ಇನ್ನೂ ನಿಗೂಢ. ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಜನತೆಯ ಅಭಿಪ್ರಾಯ ಅನ್ಸಾರಿ ಜೆಡಿಎಸ್ ಪಕ್ಷಕ್ಕೆ ಮರಳುವ ಸಾದ್ಯತೆ ಇದೆ ಎಂದು ಕೇಳಿಬರುತ್ತದೆ.

ಕಾಂಗ್ರೆಸ್ ಪಕ್ಷವು  ಹೈಕಮಾಂಡ ಹಿರಿಯ ಕಲಿಗಳನ್ನು ಕಟ್ಟಿ ಹಾಕಿ ಅನ್ಸಾರಿಗೆ ಟಿಕೆಟ್ ನೀಡಿದರೆ ಸೋಲಿಸುವ ತಂತ್ರ ರೂಪಿಸುವವರು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ. ಹೇಗೆ? ಕೊಪ್ಪಳ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳು ಅಂದರೆ ಯಲಬುರ್ಗಾ ಕ್ಷೇತ್ರದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಕುಷ್ಟಗಿ ಕ್ಷೇತ್ರದ ಅಮೇರೆಗೌಡ ಬಯ್ಯಾಪುರ  ಕೊಪ್ಪಳ ಕ್ಷೇತ್ರದ ರಾಘವೇಂದ್ರ ಹಿಟ್ನಾಳ  ಮತ್ತು ಕೊಪ್ಪಳ ಜಿಲ್ಲೆಯ ಹಿರಿಯರು ಹಳೆಯ ಕಲಿಗಳು ಸಚಿವ ಸ್ಥಾನದ ಆಕಾಂಕ್ಷೆಯನ್ನು ಹೊಂದಿದ್ದವರು.

ಐದು ಜನ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷೆಗಳಲ್ಲಿ ನಾಲ್ಕು ಜನ ಸಚಿವ ಸಂಪುಟದ ಸ್ಥಾನಮಾನ ಪಡೆದವರು. ಒಬ್ಬರು ಒಬ್ಬ ವ್ಯಕ್ತಿಯ ಅಂದರೆ ಕೊಪ್ಪಳ ಕ್ಷೇತ್ರದ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ್  ಸಚಿವ ಸಂಪುಟದಲ್ಲಿ ಸ್ಥಾನಮಾನ ಪಡೆದಿಲ್ಲ. ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನ ದತ್ತು ಪುತ್ರ ಎಂದೆ ಹೆಗ್ಗಳಿಕೆ ಪಡೆದವರು.ಅದಕ್ಕಾಗಿ ಒಳ ಒಳಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸೋಲಿಸುವ ತಂತ್ರಗಾರಿಕೆ ನಡೆಯಬಹುದು.ಹೈದರಾಬಾದ್ ಕರ್ನಾಟಕ ಭಾಗದ ಅಲ್ಪಸಂಖ್ಯಾತರ ಪ್ರಭಾವಿ ರಾಜಕೀಯ ಮುಖಂಡರು. ಅದರಿಂದ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೆ ಗೆಲುವು ಸುಲಬ ಅದರಂತೆ ಸೋಲಿಸುವುದರ ಕೂಡ ಸುಲಬ .

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಚ್ ಆರ್ ಶ್ರೀನಾಥ್ ಮತ್ತು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ ಹತ್ತಿರ ಇಬ್ಬರು ನಡುವೆ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆ…. ಇವರಿಗೆ ಟಿಕೆಟ್ ನೀಡಲಿಲ್ಲ ಅಂದರೆ  ಕಳೆದ ವರ್ಷ ಮರುಕಳಿಸುವ ಸಾದ್ಯತೆ ಇದೆ.ಪರೋಕ್ಷ ಕಮಲ ಪಕ್ಷಕ್ಕೆ ಅಥವಾ ಕೆಅರ್ ಪಿ ಪಕ್ಷಕ್ಕೆ ಬೆಂಬಲ ನೀಡವವರು ಎಂಬುದು ಜನರ ಅಭಿಪ್ರಾಯ…

error: Content is protected !!