
ಕೋಪ್ಪಳ,ಮಾರ್ಚ್15: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ರಾಜ್ಯ ಬಿಜೆಪಿ ನಾಯಕರು ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದಾರೆ. ಇತ್ತ ಮಿಷನ್ 150 ಟಾರ್ಗೆಟ್ ಒಂದು ಕಡೆಯಾದ್ರೆ ಯಾರಿಗೆ ಟಿಕೆಟ್ ಸಿಗುತ್ತೆ.? ಯಾರಿಗೆ ಇಲ್ಲ ಎನ್ನುವ ಚರ್ಚೆ ಕಮಲ ಪಾಳಯದಲ್ಲಿ ಜೋರಾಗಿದೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದು, ಶಿಕಾರಿಪುರದಿಂದ ಬಿ.ವೈ ವಿಜಯೇಂದ್ರ ಹೈಕಮಾಂಡ್ ಒಪ್ಪಿದ್ರೆ ಸ್ಪರ್ದಿಸುತ್ತಾರೆ ಎಂದು ಹೇಳಿದ್ದು, ಈ ಕುರಿತು ವಿಜಯೇಂದ್ರ ಟಿಕೆಟ್ ಕುರಿತು ಕಮಲ ಪಾಳಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಬಿ.ವೈ ವಿಜಯೇಂದ್ರ ಟಿಕೆಟ್ ನಿರ್ಧಾರ ಆಗುವುದು ಬಿ.ಎಸ್ ಯಡಿಯೂರಪ್ಪ ಕಿಚನ್ ನಲ್ಲೂ ಅಲ್ಲ, ಮತ್ತೊಬ್ಬರ ಕಿಚನ್ ನಲ್ಲೂ ಆಗೋಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾಅರ್ಯದರ್ಶಿ ಸಿ.ಟಿ ರವಿ ಹೇಳಿದ್ದು, ಈ ಕುರಿತು ಸಿ.ಟಿ ರವಿ ಅವರಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ರಾಜಕಾರಣದಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾದಾಗ ಮಾತ್ರ ಎತ್ತರಕ್ಕೆ ಬೆಳೆಯೊಕೆ ಸಾಧ್ಯ ಎಂದು ಹೇಳಿರುವ ವಿಜಯೇಂದ್ರ, ಸಿ.ಟಿ.ರವಿಯವರು ಹಿರಿಯರಿದ್ದಾರೆ. ಬಿ.ಎಸ್ ಯಡಿಯೂರಪ್ಪನವರು ಎಷ್ಟು ಹಿರಿಯರಿದ್ದಾರೆ. ಬಿಜೆಪಿ ಕಟ್ಟಿದ್ದು ಬಿಎಸ್ ವೈ ಅಂತ ಅವರಿಗೂ ಗೊತ್ತಿದೆ, ಈ ರೀತಿ ಹೇಳಿಕೆಗಳಿಗೆ ನಾನು ಉತ್ತರ ಕೊಡುವದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಎಲ್ಲವನ್ನ ನಿರ್ಧರಿಸುತ್ತೆದೆ. ಪಕ್ಷ ನನಗೆ ಜವಾಬ್ದಾರಿ ನೀಡಿದೆ ಆ ಕೆಲಸ ಮಾಡುತ್ತಾ ಇದ್ದೇನೆ ಎಂದು ಹೇಳಿದರು.
ಪಕ್ಷ ಎಲ್ಲಿ ಸ್ಪರ್ಧೆ ಮಾಡು ಎನ್ನುತ್ತೆ ಅಲ್ಲಿ ಮಾಡುತ್ತೆನೆ, ಬೇಡ ಅಂದ್ರೆ ಸ್ಪರ್ಧೆ ಮಾಡೋದಿಲ್ಲ. ಎರಡು ತಿಂಗಳಲ್ಲಿ ಚುನಾವಣೆ ಬರುತ್ತದೆ, 224 ಕ್ಷೇತ್ರಗಳಲ್ಲಿ ಮೋರ್ಚಾಗಳ ಸಮಾವೇಶ ನಡೆಯುತ್ತಿವೆ
ಇಡೀ ಜಗತ್ತಿಗೊಂದು ಮಾರ್ಗದರ್ಶನ ಕೊಡುವ ಶಕ್ತಿ ನರೇಂದ್ರ ಮೋದಿ ಅವರಿಗೆ ಇದೆ.ಜಗತ್ತಿನಲ್ಲಿ ದೊಡ್ಡ ಪಕ್ಷ ಬಿಜೆಪಿ, ಸ್ವಾತಂತ್ರ್ಯ ಬಂದ ನಂತರ 65 ವರ್ಷ ಕಾಂಗ್ರೆಸ್ ಆಳ್ವಿಕೆ ನಡೆಸಿತು. 2014 ರಲ್ಲಿ ನರೇಂದ್ರ ಮೋದಿ ನಾಯಕತ್ವದಲ್ಲಿ ವಿಶ್ವಾಸ ಇಟ್ಟು ದೇಶದಲ್ಲಿ ಮೊದಲ ಬಾರಿಗೆ ಆಡಳಿತಕ್ಕೆ ಬಂದಿತು.ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟವರು ನರೇಂದ್ರ ಮೋದಿ ಎಂದು ಮೋದಿಯವನ್ನ ವಿಜಯೇಂದ್ರ ಹಾಡಿಹೊಗಳಿದರು.
ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಕಾರ್ಯವನ್ನು ಮೋದಿ ಮಾಡಿದ್ದಾರೆ. ಅಯೋಧ್ಯೆ ರಾಮಮಂದಿರ ನಿರ್ಮಾಣ ಆಗಲು ಹೋರಾಟ ನಡೆದಿದೆ,ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ ಮೋದಿ,ಬಿಜೆಪಿ ಯಿಂದ ರಾಮಮಂದಿರ ನಿರ್ಮಾಣವಾಗುತ್ತಿದೆ, ಕಾಂಗ್ರೆಸ್ ನವರು ಕುಂತಲ್ಲಿ,ನಿಂತಲ್ಲಿ ಬಿಜೆಪಿ ಯನ್ನು ಟೀಕೆ ಮಾಡುತ್ತಾರೆ. ಕೇಂದ್ರ, ರಾಜ್ಯ ದ ಯೋಜನೆಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ. ಮೋದಿ ಅವರ ಕನಸು ಪಿಎಂ ಅವಾಸ್ ಯೋಜನೆ, 2.75 ಲಕ್ಷ ಮನೆಗಳನ್ನು ರಾಜ್ಯದಲ್ಲಿ ನಿರ್ಮಾಣ ಮಾಡಲಾಗಿದೆ.
ಕರ್ನಾಟಕದಲ್ಲಿ 2014 ರಿಂದ ಇಲ್ಲಿಯವರೆಗೂ 7 ಸಾವಿರಕ್ಕೂ ಅಧಿಕ ಕೋಟಿ ಅನುದಾನ ರೈಲ್ವೆ ಗಾಗಿ ನೀಡಲಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ವಾಲ್ಮೀಕಿ ಜಯಂತಿಗೆ ರಜೆ ಘೋಷಣೆ ಮಾಡಿದ್ದು, ಎಸ್ಟಿ,ಎಸ್ಸಿ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಸರಕಾರ. ವಿರೋಧ ಪಕ್ಷದವರು ಚುನಾವಣೆ ಬಂದರೆ ಎಸ್ಸಿ,ಎಸ್ಟಿ ಹೆಸರು ಹೇಳಿಕೊಂಡು ಚುನಾವಣೆ ಗೆಲ್ಲುತ್ತಿದ್ದರು. ರಾಜ್ಯದ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಸರಕಾರದಲ್ಲಿ ಆಗುತ್ತಿವೆ ಎಂದು ತಿಳಿಸಿದರು.
ಕಾಂಗ್ರೆಸ್ ನವರು ಗರೀಬಿ ಹಠಾವೋ ಎಂದು ಹೇಳುತ್ತಾ ಚುನಾವಣೆ ಮಾಡಿದರು, ಆದರೆ ಬಡತನ ಹೋಗಲಾಡಿಸಲಿಲ್ಲ. ಈಗ ಪುಕ್ಕಟೆ ಅಕ್ಕಿ,ಹಣ ಕೊಡ್ತೀವಿ ಎಂದು ಪುಕ್ಕಟೆ ಭಾಷಣ ಮಾಡುತ್ತಿದ್ದಾರೆ, ಕಾಂಗ್ರೆಸ್ ಬುಡಸಮೇತ ಕಿತ್ತು ಹಾಕಲು ಪ್ರಜ್ಞಾವಂತ ಮತದಾರರು ನಿರ್ಧಾರ ಮಾಡಿದ್ದಾರೆ. ಯಡಿಯೂರಪ್ಪ ರಾಜೀನಾಮೆ ಕೊಟ್ಟಾಗ ರಾಜ್ಯ ಪ್ರವಾಸ ಮಾಡಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಸವಾಲು ಹಾಕಿದ್ದಾರೆ. ಎಲ್ಲರೂ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ.
ಕಾಂಗ್ರೆಸ್ ನವರು ನೀರಾವರಿಗಾಗಿ ಪಾದಯಾತ್ರೆ ಮಾಡಿದರು. 10 ಸಾವಿರ ಕೋಟಿ ಕೊಡುತ್ತೇವೆ ಎಂದು ಪುಕ್ಕಟೆ ಭಾಷಣ ಮಾಡಿದರು, ಕಾಂಗ್ರೆಸ್ ನವರ ತರಹ ಬಿಜೆಪಿ ಅವರು ಪಾದಯಾತ್ರೆ ಮಾಡಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ಸಾವಿರ ಕೋಟಿ ಅನುದಾನ ನೀಡಿತು, ನುಡಿದಂತೆ ನಡೆಸುವ ತಾಕತ್ತು ಶಕ್ತಿ ಕೇವಲ ಬಿಜೆಪಿ, ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಮಾತ್ರ ಇದೆ.
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಕೊಂಡಿರಲಿಲ್ಲ. ಅಂತಹ ಸಂದರ್ಭದಲ್ಲಿ ಎಲ್ಲರೂ ಪಕ್ಷ ಸಂಘಟಿಸಿದರು, ಮುಂದಿನ ಚುನಾವಣೆ ಒಂದು ಸವಾಲಾಗಿ ಸ್ವೀಕರಿಸಿ, ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲಿಸಬೇಕಿದೆ, ಕೊಪ್ಪಳ ಜಿಲ್ಲೆಯ ಎಲ್ಲ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಬೇಕಿದೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಪ್ರಚಾರ ಮಾಡಿದರೆ ರಾಜ್ಯದಲ್ಲಿ ಶಾಶ್ವತವಾಗಿ ಬಿಜೆಪಿ ಅಧಿಕಾರಕ್ಕೆ ತರಬಹುದು ಎಂದು ಹೇಳಿದರು.