ಕೊಪ್ಪಳ : ಗಂಗಾವತಿಯ ಕೇಂದ್ರೀಯ ಬಸ್ ನಿಲ್ದಾಣದಿಂದ ಆನೆಗುಂದಿ ಗ್ರಾಮದವರಿಗೆ, ಇತ್ತೀಚಿಗಷ್ಟೇ ಡಾಂಬರೀಕರಣವನ್ನು ಗೊಳಿಸಲಾಗಿತ್ತು ಲೋಕೋಪಯೋಗಿ ಇಲಾಖೆ, ವಾಹನ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಹಾಕಲಾಗಿದ್ದ ರೋಡ್ ಬ್ರೇಕರ್‌ಗಳನ್ನು ತೆರವುಗೊಳಿಸಲು ಮುಂದಾಗಿರುವುದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಲಾಗಿರುವ, ರಸ್ತೆಗಳನ್ನು  ತೆರುವುಗೊಳಿಸಲು ಮುಂದಾಗಿರುವ ಇಲಾಖೆಯ ಅಧಿಕಾರಿಗಳ ಕಾರ್ಯವೈಕರಿಗೆ ಜನತೆ ಇಡೀ ಶಾಪ ಹಾಕುತ್ತಿದ್ದಾರೆ.

ಯಾವ ಕಾರಣಕ್ಕಾಗಿ,  ಬ್ರೇಕರ್ ಗಳನ್ನು  ತೆರವು ಗೊಳಿಸುತ್ತಿದ್ದಾರೆ ಎಂಬುದರ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟ ಮಾಹಿತಿ, ಅಧಿಕಾರಿಗಳಿಂದ ದೊರೆಯುತ್ತಿಲ್ಲ.

ಸರ್ಕಾರದ ಹಣ ಹಾಗೂ ಯೋಜನೆಗಳು, ಯಾವ ರೀತಿ ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ಇದೊಂದು ಜೀವಂತ ಸಾಕ್ಷಿ ಮಾನ್ಯ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಇದೇ ದಿನಾಂಕ 14 ರಂದು ಅಂಜನಾದ್ರಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ, ಚಾಲನೆ ನೀಡುವ ಉದ್ದೇಶದಿಂದ, ಆಗಮಿಸುತ್ತಿದ್ದು, ಅವರ ಕೆಂಗಣ್ಣಿಗೆ   ಗುರಿಯಾಗಬಾರದೆಂಭ ಉದ್ದೇಶವೇ ಎಂಬ ಪ್ರಶ್ನೆ ಗಂಗಾವತಿ ಕ್ಷೇತ್ರದ ಜನತೆಯ ಅಭಿಪ್ರಾಯವಾಗಿದೆ, ಇಂತಹ ಹಲವು ಯೋಜನೆಗಳು ಕಾಮಗಾರಿ ನಡೆಸಿದ್ದು ಅದರಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ದ ಪಾಲುದಾರಿಕೆಯಲ್ಲಿ ಅಮೃತ ನಗರ ಯೋಜನೆ ನೂರಾರು ಕೋಟಿ ಹಣ ಅಧಿಕಾರಿಗಳ ಹಾಗೂ, ಪಟ್ಟ ಭದ್ರ ಹಿತಾಸಕ್ತಿಗಳ ಜೇಬು ಸೇರಿದೆ, ರಸ್ತೆ ಕಾಮಗಾರಿ ಒಳಚರಂಡಿ ವ್ಯವಸ್ಥೆ, ಶುದ್ಧವಾದ ಕುಡಿಯುವ ನೀರಿನ ಯೋಜನೆ, ಜೆಜೆ ಎಂ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಜರುಗಿದೆ, ಇವುಗಳ ಬಗ್ಗೆ ಈಗಾಗಲೇ ಲೋಕಾಯುಕ್ತರು ಸಾರ್ವಜನಿಕರ ದೂರಿನ ಅನ್ವಯ ತನಿಖೆ ನಡೆಸಿದ್ದರು ಸಹ, ಇದುವರೆಗೆ ಯಾವುದೇ ಅಧಿಕಾರಿಗಳ ವಿರುದ್ಧ, ಕ್ರಮ ತೆಗೆದುಕೊಳ್ಳದೆ ಇರುವುದು ಶೋಚನೆಯ  ಸಂಗತಿಯಾಗಿದೆ

ನಮ್ಮ ಮುಖ್ಯಮಂತ್ರಿಗಳ ಹಾಗೂ ಸಚಿವರುಗಳ  ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ, 14ರಂದು ಬರುವ ರಾಜ್ಯದ ಮುಖ್ಯಮಂತ್ರಿಗಳೇ ದಯವಿಟ್ಟು, ಸರ್ಕಾರದ ಯೋಜನೆಗಳು, ಅವುಗಳ ಕಾಮಗಾರಿಗಳ ಗುಣಮಟ್ಟ, ಸೇರಿದಂತೆ  ಅಧಿಕಾರಿಗಳ ಸಭೆಯನ್ನು ನಡೆಸಿ ಸೂಕ್ತ ಕ್ರಮ ತೆಗೆದುಕೊಂಡಲ್ಲಿ ಮಾತ್ರ, ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳು ಹಾಗೂ ಜನರ ತೆರಿಗೆ ಹಣ ಸಾರ್ಥಕವಾಗುತ್ತದೆ, ಇಲ್ಲವಾದಲ್ಲಿ,, ಅಧಿಕಾರಿಗಳ ಹಾಗೂ ಗುತ್ತೇದಾರರ, ಪಟ್ಟ ಭದ್ರ ಹಿತಾಸಕ್ತಿಗಳಿಗೆ ಜೇಬು ಸೇರುವುದರ  ಮೂಲಕ ಮುಂಬರುವ 2023ರ, ವಿಧಾನಸಭಾ ಚುನಾವಣೆಗೆ ವ್ಯತಿರಿಕ್ತ, ಪರಿಣಾಮ ಬೀರಲಿದೆ ಎನ್ನುವುದೇ ಜನರ ಅಭಿಪ್ರಾಯ ವಾಗಿದೆ…..

error: Content is protected !!