ಕೊಪ್ಪಳ :ಗಂಗಾವತಿ ತಾಲೂಕಿನ ಚಿಕ್ಕ ಜಂತಕಲ್ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ವಿಶ್ವ ರತ್ನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 2000 ಸಹಾಯಧನ ನೀಡಿ ವಿದ್ಯಾರ್ಥಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕೆ  ನಿಂಗಜ್ಜ ಹಿರಿಯ ಪತ್ರಕರ್ತರು ಸನ್ಮಾನ ಗೊಂಡು ಮಾತನಾಡಿ  ಪ್ರತಿ ವರ್ಷ ಯಾವ ವಿದ್ಯಾರ್ಥಿಯು ಅತಿ ಹೆಚ್ಚು ಅಂಕ ಪಡೆಯುತ್ತಾರೋ ಅಂತ ವಿದ್ಯಾರ್ಥಿಗಳಿಗೆ ವಿಶ್ವ ರತ್ನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ  ಎರಡು ಸಾವಿರ ರೂಪಾಯಿ ಪ್ರೋತ್ಸಾಹ ಧನ ಕೊಡಲಾಗುವುದು ಎಂದು ಹೇಳಿದ್ದು.ಅದರಂತೆ ಈ ಸಲ ಎರಡು ಸಾವಿರ ರೂಪಾಯಿ ಕೊಟ್ಟು  ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಮನವರಿಕೆ ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಗೊಳ್ಳಬೇಕಾದರೆ ಇಂತಹ ಕಾರ್ಯಕ್ರಮ ಅನಿವಾರ್ಯ ಎಂದು ಹೇಳಿದರು. ಈಗಿನ ಕಾಲದಲ್ಲಿ ಸರ್ಕಾರ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಿದ್ದು.

ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ  ಮಾಡಿಕೊಂಡು ಓದಿದರೆ ನಿಮ್ಮ ಉಜ್ವಲ ಭವಿಷ್ಯವಿದೆ ಮತ್ತು ಗ್ರಾಮೀಣ ಪ್ರದೇಶಗಳಿಂದ ಬಂದಂತವರಿಗೆ ಗ್ರಾಮೀಣ ಭಾಗದ ಪರಿಸ್ಥಿತಿ ಗೊತ್ತಿರುವುದು. ಅದರಿಂದ ನಾವು ಬಡ ಮತ್ತು ಕೂಲಿ ಕಾರ್ಮಿಕ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ನಂತರ ಸರ್ವಂಗಿನ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಮತ್ತು ನಿವೃತ ಹಿರಿಯ ಶಿಕ್ಷಕ ಬಸವರಾಜ್ ಮ್ಯಾಗಳಮನಿ, ಮಾತನಾಡಿ, ಸಮಾಜ ಸೇವೆ ಮಾಡವವರು ಯಾವಾಗಲೂ ವಿಶಾಲ ಹೃದಯವಂತರು.ಹತ್ತನೇ ತರಗತಿಯಲ್ಲಿ ಫಲಿತಾಂಶ ಹೆಚ್ಚು ಕಡಿಮೆ ಬರಬಹುದು ಅದರೆ ಕುಗ್ಗಬೇಡ, ಜೀವನ ಸುಂದರವಾಗಿ ಕಾಣಬೇಕಾದರೆ ಫಲಿತಾಂಶ ಮುಖ್ಯವಲ್ಲ ಎಂದು ತಿಳಿಸಿದರು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪ್ರತಿಭೆ ಇರುತ್ತದೆ. ಸಂಗೀತದಲ್ಲಿ, ನೃತ್ಯ ನಾಟಕ, ರಾಜಕೀಯ, ರಾಷ್ಟ್ರಪತಿ, ಹೀಗೆ ಹಲವಾರು ಪ್ರತಿಭೆ ಶಕ್ತಿ ನಮ್ಮಲ್ಲಿ ಅಡಗಿ ಕುಳಿತ್ತಿರುವು.ಅದನ್ನು ಹೊರಗೆ ತರಬೇಕಾದರೆ ಇಂತಹ ಕಾರ್ಯಗಳು ಅನಿವಾರ್ಯ ಎಂದುರು.

ಸಂದರ್ಭದಲ್ಲಿ ವಿಶ್ವ ರತ್ನ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ರಗಡಪ್ಪ  ಹೊಸಳ್ಳಿ  ಮಾತನಾಡಿ ಈ ಶಾಲೆಯಲ್ಲಿ ಓದುವ ಎಲ್ಲಾ ವಿದ್ಯಾರ್ಥಿಗಳ ತಂದೆ ತಾಯಿಯಂದಿರು ತಾವು    ಕಷ್ಟಪಟ್ಟು  ಒಂದು ಹೊತ್ತು ಊಟ ಇಲ್ಲದೆ ನಿಮ್ಮನ್ನು  ಬುದ್ಧಿವಂತರಾಗಬೇಕೆಂದು ಶಾಲೆಗೆ ಕಳಿಸುತ್ತಾರೆ ನಾವು ಕಷ್ಟಪಟ್ಟುದ್ದನ್ನು ಆ ಕಷ್ಟವನ್ನು  ನಮ್ಮ ಮಕ್ಕಳು ಪಡಬಾರದೆಂಬ ದೊಡ್ಡ ಭಾವನೆಯಿಂದ ಅವರು ನಿಮ್ಮನ್ನು  ಶಾಲೆಗೆ ಕಳಿಸುತ್ತಾರೆ.

ಆದರೆ  ನೀವುಗಳಲ್ಲ ಉತ್ತಮ ರೀತಿಯಲ್ಲಿ  ಓದಬೇಕು ನಿಮ್ಮ ತಂದೆ ತಾಯಿಯ ಹೆಸರಿಗೆ ಕೀರ್ತಿ ತರುವಂತ ಕೆಲಸ ಮಾಡಬೇಕೆ ಹೊರತು ಆ ಹೆಸರಿಗೆ ಯಾವತ್ತೂ ಕಳಂಕ ತರುವಂತ ಕೆಲಸ ಮಾಡಬಾರದು ವಿದ್ಯಾರ್ಥಿಗಳಿಗೆ ತಿಳುವಳಿಕೆ ಹೇಳಿದರು

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಆರ್ ಟಿ ನಾಯಕ , ಶರಣಪ್ಪ ,ಶಂಭುನಾಥ್ ದೊಡ್ಮನಿ , ಹುಸೇನಪ್ಪ ಹೆಚ್ ಸಿ , ಚನ್ನಬಸವ  ಮಾನ್ವಿ ,ಜಂಬಣ್ಣ ,ದುರುಗಪ್ಪ ,ಮುತ್ತಣ,   ಮತ್ತು  ಶಾಲೆಯ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

error: Content is protected !!