ಕೊಪ್ಪಳ :ಬಿಜೆಪಿ ಕರ್ನಾಟಕ ವತಿಯಿಂದ ರಾಜ್ಯದಾತ್ಯಂತ ಸಂಚರಿಸುತ್ತಿರುವ ಬಿಜೆಪಿ ಜನ ಸಂಕಲ್ಪ ಯಾತ್ರೆಯೂ
ಇಂದು ಮಧ್ಯಾಹ್ನ  2 ಗಂಟೆಗೆ ಗಂಗಾವತಿ ನಗರಕ್ಕೆ ಆಗಮಿಸಿತು

ಯಾತ್ರೆಯೂ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ  ಹಿಮಂತ್ ಬಿಸ್ವಾಸ್ ಶರ್ಮಾ , ಸಾರಿಗೆ ಸಚಿವರಾದ ಬಿ.ಶ್ರೀರಾಮಲು, ಕೊಪ್ಪಳ ಉಸ್ತುವಾರಿ ಸಚಿವ ಆನಂದ್ ಸಿಂಗ್, ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ, ಅವರ ನೇತೃತ್ವದಲ್ಲಿ ಜರುಗಿತು

ಈ ಯಾತ್ರೆಯಲ್ಲಿ ಮಾಜಿ ಕಾಢಾ ಅಧ್ಯಕ್ಷರಾದ  ತಿಪ್ಪೆರುದ್ರ ಸ್ವಾಮಿಗಳು, ವಿಜಯನಗರ ಜಿಲ್ಲಾ ಪ್ರಭಾರಿಗಳಾದ  ಗಿರೇಗೌಡ ಹೊಸಕೇರಾ, ಬಳ್ಳಾರಿ ಜಿಲ್ಲಾ ಸಹ ಪ್ರಭಾರಿಗಳಾದ ವಿರುಪಾಕ್ಷಪ್ಪ ಸಿಂಗನಾಳ, ಮುಖಂಡರಾದ ಸಿ.ವಿ ಚಂದ್ರಶೇಖರ್, ಸೂರಿಬಾಬು ನೆಕ್ಕಂಟಿ, ಸಂತೋಷ್ ಕೆಲೋಜಿ, ಕಳಕನಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ ಚಿತ್ರಗಾರ್, ಗ್ರಾಮೀಣ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಮಳಿಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ  ನರಸಿಂಗ್ ರಾವ್ ಕುಲಕರ್ಣಿ, ನವೀನ್ ಗುಳಗಣ್ಣವರ್ , ರಮೇಶ್ ನಾಡಿಗೇರ್ , ಗಂಗಾವತಿ ಚುಣಾವಣೆ ಉಸ್ತುವಾರಿಗಳಾದ ಪ್ರಭು ಕಪಗಲ್,  ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಶಿವುಕುಮಾರ್ ಅರಿಕೇರಿ ಅವರು ಹಾಗೂ ಗಣ್ಯರು ಸಂಕಲ್ಪ ಯಾತ್ರೆಯ ರಥದ ಮೇಲೆ ಉಪಸ್ಥಿತರಿದ್ದರು.

ಯಾತ್ರೆಯೂ ನಗರದ ಸಿಬಿಎಸ್ ವೃತ್ತದಿಂದ ಗಾಂಧಿವೃತ್ತದವರೆಗೆ ನಗರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತ ಬಂಧುಗಳು, ಬಿಜೆಪಿ ಅಭಿಮಾನಿಗಳು

ಡೊಲು ಮಜಲು ಗಳಿಂದ, ಬೊಂಬೆ ಕುಣಿತ,  ಹಾಗೂ ಪುರಾತಣ ಕಹಳೆವಾದನ, ಸಾಂಸ್ಕೃತಿಕ ನೃತ್ಯಗಳೊಂದಿಗೆ ಅತ್ಯಂತ ವಿಜ್ರಂಭಣೆಯಿಂದ ಉತ್ಸಾಹ ಭರಿತದಿಂದ ಸ್ವಾಗತಿಸಿಕೊಂಡು
ವಿಜಯಸಂಕಲ್ಪ ಯಾತ್ರೆಯನ್ನ ಸಹಸ್ರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಜಯ ಘೋಷಗಳೊಂದಿಗೆ ಯಶಸ್ವಿಗೊಳಿಸಿದರು.

error: Content is protected !!