
ಕೊಪ್ಪಳ :ಗಂಗಾವತಿಯಿಂದ ಹುಲಿಗಿ ಕ್ಷೇತ್ರ, ಆನೆಗುಂದಿ, ನವವೃಂದಾವನ, ಅಂಜನಾದ್ರಿ ಬೆಟ್ಟ,,ಪಂಪಾ ಸರೋವರ, ಇತ್ಯಾದಿ ಐತಿಹಾಸಿಕ ಪೌರಾಣಿಕ ಪ್ರವಾಸಿ ಸ್ಥಳಗಳಿಗೆ ಹೋಗುವ ರಸ್ತೆಯು ತಗ್ಗು ದಿಣ್ಣೆಗಳಿಂದ ಕೂಡಿದ್ದು ಕಳೆದ ನಾಲ್ಕುವರೆ ವರ್ಷಗಳಿಂದ ರಸ್ತೆ ರಿಪೇರಿಗಾಗಿ ಒತ್ತಾಯಿಸಿ, ಹೋರಾಟ ಮತ್ತು ಪ್ರತಿಭಟನೆಗಳನ್ನು ಮಾಡಿದರೂ ಕಿವಿಕೊಡದ ಗಂಗಾವತಿಯ ಶಾಸಕರು ಮತ್ತು ಕರ್ನಾಟಕ ಸರ್ಕಾರ, ಈಗ ಸದ್ರಿ ರಸ್ತೆಯ ತಗ್ಗುಗಳಿಗೆ ಪ್ಯಾಚ್ ವರ್ಕ್ ಮಾಡುವ ಮೂಲಕ ರಸ್ತೆರಿಪೇರಿ ಕೆಲಸವನ್ನು ಆರಂಭಿಸಿದೆ.
ಈ ರಿಪೇರಿ ಕೆಲಸದ ಹಿಂದೆ ಜನಸಾಮಾನ್ಯರಿಗೆ ರಸ್ತೆ ಸಮಸ್ಯೆಯಿಂದ ಮುಕ್ತಿ ಕೊಡುವ ಉದ್ದೇಶವನ್ನು ಈ ಕ್ಷೇತ್ರದ ಶಾಸಕರು ಹೊಂದಿಲ್ಲ ,ಬದಲಿಗೆ ತಮ್ಮ ರಾಜ್ಯ ನಾಯಕರು ಮತ್ತು ಮಾನ್ಯ ಮುಖ್ಯಮಂತ್ರಿಗಳು ಅಂಜನಾದ್ರಿಗೆ ಭೇಟಿ ನೀಡುತ್ತಿರುವುದರಿಂದ ಅದಕ್ಕೆ ಅನುಕೂಲವಾಗಲಿ ಎಂಬ ಒಂದು ಉದ್ದೇಶ ಮಾತ್ರ ಇದೆ. ಈ ಕಾರಣಕ್ಕೆ ತರಾತುರಿಯಲ್ಲಿ ರಸ್ತೆ ರಿಪೇರಿ ಕಾರ್ಯ ನಡೆಯುತ್ತಿದೆ.
ಜನಸಾಮಾನ್ಯರ ಕೂಗಿಗೆ ಕಿವಿ ಕೊಡದ ಜನಸಾಮಾನ್ಯರ ಹೋರಾಟ ಪ್ರತಿಭಟನೆಗಳಿಗೂ ಜಗ್ಗದ ಕ್ಷೇತ್ರದ ಶಾಸಕರು ಮತ್ತು ರಾಜ್ಯ ಬಿಜೆಪಿ ಸರ್ಕಾರ ಈಗ ತಮ್ಮ ಪಕ್ಷದ ನಾಯಕ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬರುತ್ತಿರುವುದರ ಹಿನ್ನೆಲೆಯಲ್ಲಿ ಸದರಿ ರಸ್ತೆಯನ್ನು ಪ್ಯಾಚ್ ವರ್ಕ್ ಮಾಡುವ ಮೂಲಕ ರಿಪೇರಿ ಮಾಡುತ್ತಿದ್ದಾರೆ. ಜಲಸಾಮಾನ್ಯರಿಗಾಗಿ ರಸ್ತೆ ಸರಿಪಡಿಸದ ಕ್ಷೇತ್ರದ ಶಾಸಕರು ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಏಕಾಏಕಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಸದರಿ ರಸ್ತೆಯನ್ನು ತರಾತುರಿಯಾಗಿ ರಿಪೇರಿ ಮಾಡಿಸುತ್ತಿದ್ದಾರೆ ಈ ಮೂಲಕ ಮತ್ತೊಮ್ಮೆ ಜನ ವಿರೋಧಿ ಸರ್ಕಾರ ಎಂಬುದನ್ನು ಈ ಕ್ಷೇತ್ರದ ಶಾಸಕರು ಮತ್ತು ಕರ್ನಾಟಕದ ರಾಜ್ಯ ಬಿಜೆಪಿ ಸರ್ಕಾರ ಸಾಬೀತುಪಡಿಸಿದೆ. ಜನರಿಗಾಗಿ ಕಿಂಚಿತ್ತೂ ಸ್ಪಂದಿಸದ ಮತ್ತು ತಮ್ಮ ನಾಯಕರಿಗಾಗಿ ಏನನ್ನಾದರೂ ಮಾಡಲು ಸಿದ್ಧವಿರುವ ಇಂತಹ ಜನಸಾಮಾನ್ಯ ವಿರೋಧಿ ಸರ್ಕಾರಗಳನ್ನು ಬರುವ ಚುನಾವಣೆಯಲ್ಲಿ ಜನಸಾಮಾನ್ಯರು ಒಗ್ಗಟ್ಟಾಗಿ ಬೇರು ಸಮೇತ ಕಿತ್ತೊಗೆಯಲ್ಲಿದ್ದಾರೆ-ಎಂದು ಆಮ್ ಆದ್ಮಿ ಪಕ್ಷದ ಎಮ್ಎಲ್ಎ ಸೇವಾಕಾಂಕ್ಷಿ ಶರಣಪ್ಪ ಸಜ್ಜಿಹೊಲ ಪತ್ರಿಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.