
ಕೊಪ್ಪಳ :ಕರ್ನಾಟಕ ರಾಜ್ಯದಲ್ಲಿ ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಒಳಗುತ್ತಿಗೆ ಆಧಾರದ ಮೇಲೆ ನೇಮಕವಾದ ಸುಮಾರು 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಸದ್ರಿಯವರನ್ನು ಖಾಯಂಗೊಳಿಸಬೇಕೆಂದು ಕಳೆದ 13/2/ 2023 ರಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನವನದ ಬಳಿ ನಡೆಯುತ್ತಿರುವ ನಿರಂತರ ಧರಣಿ ಮತ್ತು ಪ್ರತಿಭಟನೆ ಗಳಿಗೆ ಆಮ್ ಆದ್ಮಿ ಪಕ್ಷದ ಗಂಗಾವತಿ ಎಂಎಲ್ಎ ಸೇವಾಕಾಂಕ್ಷಿ ಬೆಂಬಲ ಸೂಚಿಸಿದ್ದಾರೆ.
ಸದರಿ ಒಳಗುತ್ತಿಗೆ ಆಧಾರದ ಮೇಲಿನ ನೌಕರರು ಆರೋಗ್ಯ ಸೇವೆಯನ್ನು ನಿರ್ವಹಿಸುತ್ತಾ ಬಂದಿದ್ದು ಕೋವಿಡ್ ಸಂದರ್ಭದಲ್ಲಿ ಅವರ ಸೇವೆ ಅನನ್ಯ. ಅಲ್ಲದೆ ಇಂತಹ ಒಳಗುತ್ತಿಗೆ ನೌಕರರನ್ನು ಈಗಾಗಲೇ ಪಂಜಾಬ್, ಮಣಿಪುರ, ಹಿಮಾಚಲ ಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಖಾಯಂಗೊಳಿಸಿದ್ದು ಅಲ್ಲದೆ ಕರ್ನಾಟಕದ ಬೊಮ್ಮಾಯಿ ಸರ್ಕಾರ ಈ ಕೂಡಲೇ ಸದ್ರಿಯವರನ್ನು ಖಾಯಂಗೊಳಿಸಿ ಆದೇಶ ಹೊರಡಿಸಬೇಕು. ಇಲ್ಲದೆ ಹೋದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಸದರಿ ಒಳಗುತ್ತಿಗೆ ನೌಕರರ ಹಕ್ಕುಗಳಿಗಾಗಿ ಹೋರಾಟ ಮತ್ತು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ.
ಅದಕ್ಕೂ ಬಗ್ಗದೆ ಹೋದಲ್ಲಿ ಉಗ್ರರೂಪದ ಹೋರಾಟಗಳನ್ನು ರೂಪಿಸಿ ಸದರಿ ಒಳಗುತ್ತಿಗೆ ನೌಕರರ ಹಕ್ಕುಗಳನ್ನು ಪಡೆದು ತೀರಬೇಕಾಗುತ್ತದೆ-ಎಂದು ಆಮ್ ಆದ್ಮಿ ಪಾರ್ಟಿಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಎಂಎಲ್ಎ ಸೇವಾಕಾಂಕ್ಷಿ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುತ್ತಾರೆ.