
ಕೊಪ್ಪಳ :,ಮಾರ್ಚ್ 8: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ರಾಜಕೀಯ ವಿರೋಧಿಗಳಿಗೆ ಸಡ್ಡು ಹೊಡೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಹಂತ ಹಂತವಾಗಿ ಅಳೆದು ತೂಗಿ ಅಭ್ಯರ್ಥಿಗಳನ್ನ ಘೋಷಿಸುತ್ತಿದ್ದಾರೆ.
ಬುಧವಾರ ಕೊಪ್ಫಳ ಜಿಲ್ಲೆಯ ಕನಕಗಿರಿಯಲ್ಲಿ ಕೆಆರ್ ಪಿಪಿಯಿಂದ ಮಹಿಳಾ ದಿನಾಚರಣೆ ಹಾಗೂ ಪಕ್ಷದ ಸಮಾವೇಶ ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಯನ್ನ ಜನಾರ್ದನ ರೆಡ್ಡಿ ಘೋಷಣೆ ಮಾಡಿದ್ದು, ರಾಜಕೀಯ ವಿರೋಧಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕನಕಗಿರಿ ಕ್ಷೇತ್ರದಲ್ಲಿ ಚಾರುಲ್ ವೆಂಕಟರಮಣ ದಾಸರಿಯನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದ್ದು, ಉಳಿದ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನೂ ಇನ್ನೂ ಕೆಲವು ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದರು.
ಇನ್ನೂ ಕನಕಗಿರಿ ಕ್ಷೇತ್ರ ಅಭ್ಯರ್ಥಿ ಘೋಷಣೆಯ ಬಳಿಕ ಜನಾರ್ದನ ರೆಡ್ಡಿ ಮಾತನಾಡಿ, ನಾನು ಎಂಎಲ್‌ಎ ಆಗಬೇಕು ಅಂತಾ ಈ ಪಕ್ಷ ಕಟ್ಟಿಲ್ಲ. ನಾನು ಎಲ್ಲೆ ನಿಂತ್ರೂ ಎಂಎಲ್‌ಎ ಆಗಬಹುದಿತ್ತು. ಆದರೆ ಇಲ್ಲಿನ ಜನರ ಅಭಿಮಾನ, ಪ್ರೀತಿ ಬೆಂಗಳೂರಲ್ಲಿ ಸಿಗಲ್ಲ. ಅದಕ್ಕಾಗಿ ಜನರ ಶ್ರೇಯೋಭಿವೃದ್ದಿಗೆ ನಾನು ಪಕ್ಷ ಕಟ್ಟಿದ್ದೇನೆ. ಕೆಲವರು ನಾವು ಬರ್ತೀನಿ ಕನಕಗಿರಿಯಲ್ಲಿ ಟಿಕೆಟ್ ಘೋಷಣೆ ಮಾಡಬೇಡಿ ಅಂತಾ ಕೆಲವರು ಹೇಳಿದ್ರು. ಆದರೆ, ಅವರ ಸಲುವಾಗಿ ಕಾಯ್ದು ಕುಳಿತುಕೊಳ್ಳುವ ಜಾಯಾಮಾನ ನನ್ನದಲ್ಲ. ಅದಕ್ಕಾಗಿ ಕನಕಗಿರಿ ಕ್ಷೇತ್ರಕ್ಕೆ ಚಾರುಲ್ ವೆಂಕಟರಮಣ ದಾಸರಿಯನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇನೆ. ಈ ಸಮಾವೇಶ ನೋಡಿದ ಮೇಲೆ 20 ಮಾತ್ರೆ ತೆಗೆದುಕೊಳ್ಳುವವರು ಈಗ 40 ಮಾತ್ರೆ ತೆಗೆದುಕೊಳ್ತಾರೆ ಎಂದು ಪರೋಕ್ಷವಾಗಿ ರಾಜಕೀಯ ವಿರೋಧಿಗಳ ವಿರುದ್ದ ಕಿಡಿಕಾರಿದರು.
ಇನ್ನೂ ರಾಜಕೀಯ ವಿರುದ್ದಿಗಳ ವಿರೋಧ ಹೊಸ ಪಕ್ಷ ಸ್ಥಾಪನೆ ಮಾಡಿರುವ ಜನಾರ್ದನ ರೆಡ್ಡಿ ಹಂತ ಹಂತವಾಗಿ ಅಭ್ಯರ್ಥಿಗಳನ್ನ ಘೋಷಣೆ ಮಾಡುತ್ತಾ ರಾಜ್ಯಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಅವರು ಕೊಪ್ಫಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯಲು ಸಾಕಷ್ಟು ಸಿದ್ದತೆ ನಡೆಸಿದ್ದಾರೆ.