ಕುಷ್ಟಗಿ: 2ನೇ ಜಿಲ್ಲಾ ಮಟ್ಟದ ಕ್ರಿಡಾಕೂಟವು ಜಿಲ್ಲಾ ಕ್ರಿಡಾಂಗಣ ಕೊಪ್ಪಳದಲ್ಲಿ 3 ದಿನಗಳ ಕಾಲ ಜರುಗುತ್ತಿದ್ದು ವೈಯಕ್ತಿಕ ಹಾಗು ಗುಂಪು ಆಟಗಳು ಜರುಗುತ್ತಿವೆ.40 ವರ್ಷ ಮೆಲ್ಪಟ್ಟ 400 ಮೀಟರ್ ಓಟದಲ್ಲಿ ಇವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಹನಮನಾಳ ಗ್ರಾಮ ಪಂಚಾಯತಿಯ ಎಂ.ಕುರುಮನಾಳ ಗ್ರಾಮದಲ್ಲಿ ಕಳೆದ 23 ವರ್ಷಗಳಿಂದ ನೀರಗಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಪ್ರತಿ ದಿನ ಇವರುಗ್ರಾಮದ ದೂರದ ಹಳ್ಳ ಹಾಗು ಸೀಮೆಯಲ್ಲಿರುವ ಕುಡಿಯುವ ನೀರಿನ ಕೊಳವೆ ಬಾವಿಗಳನ್ನು ಚಾಲನೆ ಮತ್ತು ಸ್ಥಗಿತಗೊಳಿಸಲು ಹಗಲು-ರಾತ್ರಿ ಎನ್ನದೇ ಕಾಲ್ನಗಡಿಗೆಯ ಮೂಲಕ ತೆರಳಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಾನು ಗ್ರಾ.ಪಂಗೆ ನಿರಗಂಟಿಯಾಗಿ ಸೇರಿಕೊಂಡಾಗಿನಿಂದ ಕಾಲ್ನಡಿಗೆಯ ಮೂಲಕ ಎಲ್ಲಾ ಕೊಳವೆ ಬಾವಿಗಳನ್ನು ನಿರ್ವಹಿಸುತ್ತಿದ್ದೇನೆ.ಇದರಿಂದ ನನಗೆ ಪ್ರತಿದಿನ ವ್ಯಾಯಾಮ ಆಗುತ್ತಿದೆ. ನನಗೆ ಓಟದ ಸ್ಪರ್ಧೆಯಲ್ಲಿ ಓಡಲು ಯಾವುದೇ ಕಷ್ಟವಾಗಲಿಲ್ಲ. ಇದರಿಂದ ನಾನು 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆಯಲು ಸಾಧ್ಯವಾಯಿತು ಎಂದು ಸಂತಸ ಹಂಚಿಕೊಂಡರು ಹನಮಕ್ಕ. ಆರ್ ಡಿಪಿಆರ್ ನೌಕರರಿಗೆ ಕ್ರಿಡೋತ್ಸವ ಏರ್ಪಡಿಸಿರುವುದು ನಿಜಕ್ಕೂ ಸಂತಸವಾಗಿದೆ. ಗ್ರಾಮೀಣ ಭಾಗದಲ್ಲಿರುವ ಒಳ್ಳೆಯ ಪ್ರತಿಭೆಗಳನ್ನು ಗುರುತಿಸಲು ಇಂತಹ ಕ್ರಿಡಾಕೂಟ ಸಹಕಾರಿಯಾಗಿದೆ. ಜನರು ಅಭಿಪ್ರಾಯ ವ್ಯಕ್ತಪಡಿಸಿದರು.