
*ಚಿಣ್ಣರೊಂದಿಗೆ ಬೆರೆತು ಕೇರಂ ಆಡಿದ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆ*
*ಗಂಗಾವತಿ* ತಾಲೂಕಿನ ಶ್ರೀರಾಮನಗರದ ಡಿಜಿಟಲ್ ಗ್ರಂಥಾಲಯದಲ್ಲಿ ಕೊಪ್ಪಳ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆ ಅವರು ಮಕ್ಕಳೊಂದಿಗೆ ಮಕ್ಕಳಂತೆ ಬೆರೆತು ಕೇರಂ ಆಡಿ ಎಲ್ಲರ ಗಮನ ಸೆಳೆದರು !
ಹೌದು, ಶ್ರೀರಾಮನಗರ ಗ್ರಾಪಂ ಡಿಜಿಟಲ್ ಗ್ರಂಥಾಲಯಕ್ಕೆ ಜಿಪಂ ಸಿಇಓ ಅವರು ಭೇಟಿ ನೀಡಿದಾಗ ಭಾನುವಾರ ಶಾಲಾ ರಜಾ ದಿನವಾದ್ದರಿಂದ ಮಕ್ಕಳು ಕೇರಂ ಆಡುತ್ತಿದ್ದನ್ನು ಗಮನಿಸಿ, ಕೆಲ ಸಮಯ ತಾವು ಅವರೊಂದಿಗೆ ಕೇರಂ ಆಡಿ ಮಕ್ಕಳಿಗೆ’ ಪ್ರೋತ್ಸಾಹಿಸಿದರು.

‘ನಂತರ ಗ್ರಂಥಾಲಯದಲ್ಲಿ ಮಕ್ಕಳ ಕಂಪ್ಯೂಟರ್ ಶಿಕ್ಷಣ, ಹಾಜರಾತಿ, ಮಕ್ಕಳ ಕಲಿಕೆ ಪರಿಶೀಲಿಸಿ ಜಿಪಂ ಸಿಇಓ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆ ಅವರು ಮಾತನಾಡಿ, ಗ್ರಂಥಾಲಯದ ಎಲ್ಲ ಓದುಗರಿಗೆ ಗುರುತಿನಿ ಚೀಟಿ ವಿತರಿಸಬೇಕು. ಮಕ್ಕಳನ್ನು ಗ್ರಂಥಾಲಯದತ್ತ ಸೆಳೆಯಲು ವಿಭಿನ್ನ ಕಾರ್ಯಕ್ರಮ ರೂಪಿಸಬೇಕು. ಮಕ್ಕಳಿಗೆ ಉತ್ತಮ ಹವ್ಯಾಸ ರೂಢಿಸಬೇಕು ಎಂದು ಗ್ರಂಥಪಾಲಕರಿಗೆ ಸಲಹೆ ನೀಡಿದರು.
ಶಾಲಾ ರಜೆ ದಿನಗಳಲ್ಲಿ ಚಿಣ್ಣರು ಗ್ರಂಥಾಲಯಕ್ಕೆ ಬರಬೇಕು. ಪ್ರಚಲಿತ ವಿದ್ಯಾಮಾನ ತಿಳಿಯಲು ನಿತ್ಯವು ದಿನಪತ್ರಿಕೆಗಳನ್ನು ಓದಬೇಕು. ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ ನಡೆಸುತ್ತಿರುವವರು ಗ್ರಂಥಾಲಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಗ್ರಂಥಾಲಯ ಮೇಲ್ವಿಚಾರಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿಯ (ದಿಶಾ) ಸದಸ್ಯರಾದ ಸತ್ಯನಾರಾಯಣ ದೇಶಪಾಂಡೆ, ಜಿ.ಪಂ. ಉಪ ಕಾರ್ಯದರ್ಶಿಗಳಾದ ಸಮೀರ್ ಮುಲ್ಲಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್, ಗ್ರಾಪಂ ಪಿಡಿಓ ವತ್ಸಲಾ, ನರೇಗಾ ತಾಂತ್ರಿಕ ಸಂಯೋಜಕರಾದ ಬಸವರಾಜ ಜಟಗಿ, ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ತಾಪಂ ಸಿಬ್ಬಂದಿ ಭೀಮಣ್ಣ, ಶ್ರೀರಾಮನಗರ ಗ್ರಾಪಂ ಅಧ್ಯಕ್ಷರಾದ ಕೆ.ಶ್ರೀಲಕ್ಷ್ಮೀ, ಉಪಾಧ್ಯಕ್ಷರಾದ ರೆಡ್ಡಿ ವೀರರಾಜು, ಗ್ರಂಥಾಲಯ ಮೇಲ್ವಿಚಾರಕರಾದ ರಾಕೇಶ, ಗ್ರಾಪಂ ಸಿಬ್ಬಂದಿಗಳು, ಗ್ರಾಪಂ ಸದಸ್ಯರು ಇದ್ದರು.