ಮೂರನೆಯ ದಿನದ ಸನ್ನಿವೇಶ,

ಕೊಪ್ಪಳ :ಗಂಗಾವತಿ ನಗರದಲ್ಲಿ ಹಿರಣ್ಯಕಶಿಪುವಿನ ಸಂಹಾರ ಮಾಡುವ ಸನ್ನಿವೇಶ,ಹೋಳಿ ಹುಣ್ಣಿಮೆಯ ಪ್ರಯುಕ್ತ ಗಂಗಾವತಿಯ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಾಕಿರುವ ಶ್ರೀಕಾಮನ ವೇದಿಕೆಯಲ್ಲಿ ಮೂರನೆಯ ದಿನವಾದ ಇಂದಿನ ಸನ್ನಿವೇಶದಲ್ಲಿ ಉಗ್ರ ನರಸಿಂಹ, ಪ್ರಲ್ಹಾದ, ನಾರದ ಮುನಿ, ದೇವೇಂದ್ರ,

ಪ್ರಹ್ಲಾದ ಒಬ್ಬ ಶ್ರೇಷ್ಠ ವೈಷ್ಣವ ಭಕ್ತ; ತಂದೆ ಹಿರಣ್ಯಕಶಿಪು, ತಾಯಿ ಕಯಾದು. ಸಂಹ್ಲಾದ, ಅನುಹ್ಲಾದ, ಶಿಬಿ ಮತ್ತು ಬಾಷ್ಕಲ ಎಂಬುವರು ಸೋದರರು. ಪ್ರಹ್ಲಾದ ಬಾಲ್ಯದಿಂದಲೂ ವಿಷ್ಣುಭಕ್ತ. ತಂದೆ ಶಿವನ ಭಕ್ತ, ಆತ ಮಗನನ್ನು ವಿಷ್ಣುಭಕ್ತಿಪಥದಿಂದ ಬಿಡಿಸಬೇಕೆಂದು ಅನೇಕ ಪ್ರಯತ್ನಗಳನ್ನು ಮಾಡುತ್ತಾನೆ. ಗುರು ಶಂಡಾಮರ್ಕರಿಗೆ ಬಾಲಕ ವಿಷ್ಣುಭಕ್ತಿಯನ್ನು ಬಿಡುವ ಹಾಗೆ ಮಾಡಿರೆಂದು ಆಜ್ಞೆಮಾಡಿದ.

ಅವರು ಪ್ರಹ್ಲಾದನಿಂದ ಹರಿಭಕ್ತಿಯನ್ನು ತೊಲಗಿಸಲು ಬಹು ಪ್ರಯತ್ನಪಟ್ಟರು. ಆದರೆ ಅವರ ಪ್ರಯತ್ನಗಳೆಲ್ಲ ವ್ಯರ್ಥವಾದುವು. ಸಿಟ್ಟಿನಿಂದ ಹಿರಣ್ಯಕಶಿಪು ಪ್ರಹ್ಲಾದನಿಗೆ ವಿಷಕುಡಿಸುವ, ಸಮುದ್ರಕ್ಕೆ ನೂಕಿಸುವ, ಬೆಟ್ಟದ ಮೇಲಿಂದ ಉರುಳಿಸಿಬಿಡುವ ಶಿಕ್ಷೆಗಳನ್ನು ಕೊಡಿಸುತ್ತಾನೆ. ಆದರೂ ಪ್ರಹ್ಲಾದ ವಿಷ್ಣುಭಕ್ತಿಯನ್ನು ಬಿಡುವುದಿಲ್ಲ, ಆಸ್ಥಾನದಲ್ಲಿ ಕುಳಿತು ನಿನ್ನ ಹರಿ ಎಲ್ಲಿದ್ದಾನೆ ಎಂದು ಪ್ರಹ್ಲಾದನನ್ನು ಪ್ರಶ್ನಿಸಿದ, ಪ್ರಹ್ಲಾದ ಅದಕ್ಕೆ ಆತ ಸರ್ವವ್ಯಾಪಿ ಎಂದು ಉತ್ತರವಿತ್ತ. ಹಿರಣ್ಯಕಶಿಪು ಆತ್ಯಂತ ಕೋಪದಿಂದ ಆಸ್ಥಾನದಲ್ಲಿನ ವಜ್ರಸ್ತಂಭವೊಂದನ್ನು ತೋರಿಸಿ ನಿನ್ನ ಹರಿ ಇಲ್ಲಿರುವನೇ ಎಂದು ಗರ್ಜಿಸಿದ. ಪ್ರಹ್ಲಾದ ಹೌದು ಎಂದು ಉತ್ತರವಿತ್ತ. ಆಗ ಹಿರಣ್ಯಕಶಿಪು ಕೋಪದಿಂದ ಆ ಕಂಬಕ್ಕೆ ಒಡೆದ. ಭಕ್ತರ ಪ್ರಾಣವೇ ತನ್ನ ಪ್ರಾಣವೆಂಬ ಭಗವಂತ ಭಯಂಕರ ಗರ್ಜನೆಯನ್ನು ಮಾಡುತ್ತ ಆ ಕಂಭವನ್ನೇ ಸೀಳಿಕೊಂಡು ನರಸಿಂಹಾಕಾರದಿಂದ ಹೊರಬಂದ. ಆಗ ಸಂಧ್ಯಾಕಾಲದ ಸಮಯ; ನರಸಿಂಹ ಹಿರಣ್ಯಕಶಿಪುವನ್ನು ಹಿಡಿದೆತ್ತಿಕೊಂಡು ಅರಮನೆಯ ಒಳಗೂ ಹೊರಗೂ ಅಲ್ಲದ ನಡುವಣ ಸ್ಥಾನವಾದ ಹೊಸ್ತಿಲದ ಮೇಲೆ ಕುಳಿತು ತನ್ನ ತೊಡೆಯ ಮೇಲೆ ಅವನನ್ನು ಹಾಕಿಕೊಂಡು ನಖಗಳಿಂದ ಸೀಳಿ ಹಿರಣ್ಯಕಶಿಪು ನನ್ನು ಸಂಹಾರ ಮಾಡುವ ಸನ್ನಿವೇಶ ತುಂಬಾ ಸೊಗಸಾಗಿ ಮೂಡಿಬಂದಿದೆ…

ಆತ್ಮೀಯ ಸಮಾಜ ಬಾಂಧವರೆ ದಿನಾಂಕ 2/3/2023 ಗುರುವಾರ ರಾತ್ರಿ 10 ಗಂಟೆಯಿಂದ ದಿನಾಂಕ 7/3/2023 ಮಂಗಳವಾರ ರಾತ್ರಿ 12 ಗಂಟೆಯ ನಂತರ ಜರಗುವ ಕಾಮದಹನದವರೆಗೂ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದು ಸೇವೆಯಲ್ಲಿ ನಿರತರಾಗುವ ಮೂಲಕ ಹೋಳಿ ಹುಣ್ಣಿಮೆಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿ.

error: Content is protected !!