
ರಾಯಚೂರ :ತಲಮಾರಿ ಗ್ರಾಮದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಬಸನಗೌಡ ದದ್ದಲ್ ರವರು ಹಾಗೂ ಗಿಲ್ಲೇಸೂಗುರ ಬ್ಲಾಕ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಗೌಡ ರವರ ನೇತೃತ್ವದಲ್ಲಿ ಮಾಜಿ ಜಿ.ಪಂ ಉಪಾಧ್ಯಕ್ಷರಾದ ಸನ್ಮಾನ್ಯ ಶ್ರೀ ಜಾಫರ್ ಅಲಿ ಪಟೇಲ್ ರವರು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು
ಪಕ್ಷದ ಸಿದ್ದಾಂತಕ್ಕೆ ಮತ್ತು ಶಾಸಕರ ಅಭಿವೃದ್ಧಿಯ ಕೆಲಸ ಕಾರ್ಯಗಳನ್ನು ಅವರ ಸರಳ ನಡೆ ನುಡಿಗಳ ವಿಚಾರಕ್ಕೆ ಮನಸೋತು ಬದ್ಧರಾಗಿ ಇಂದು *ತಲಮಾರಿ ಗ್ರಾಮದಲ್ಲಿ ಕಾಂಗ್ರೆಸ್* ಪಕ್ಷಕ್ಕೆ ಸೇರ್ಪಡೆಯಾದ ಕ್ಷೇತ್ರದ ಸರ್ವ ಮುಖಂಡರುಗಳಿಗೆ ಹಾಗೂ ಕಾರ್ಯಕರ್ತರಿಗೆ ಹೃದಯ ಪೂರ್ವಕ *ಸ್ವಾಗತವನ್ನ* ಕೋರುತ್ತೇವೆ…

ಈ ಸಂದರ್ಭದಲ್ಲಿ ಬಾಹುಷವಲ್ಲಿ,ಪಾಗುಂಟಪ್ಪ, ಸೋಮಶೇಖರ್ ಪಾಟೀಲ್, ನಾರಾಯಣ,ಫಾರೂಕ್ ಯರಗೇರ,ಕಿಶನ್ ರಾವ್, ಗೋವಿಂದಪ್ಪ, ರಾಮನಗೌಡ , ಬಸವರಾಜ ವಕೀಲ,ಸತ್ಯಪ್ಪ, ಷಣ್ಮುಖಪ್ಪ, ವೆಂಕಟೇಶ್ ಮನ್ಸಲಾಪೂರ, ಕರಿಯಪ್ಪ ನಾಯಕ,ಬಷೀರ್,ನಲ್ಲಾರೆಡ್ಡಿ, ಅಬ್ರಾಹಂ, ದೇವರೆಡ್ಡಿ,ಹಾಗೂ ಹಿರಿಯ ಮುಖಂಡರುಗಳು ಗ್ರಾ.ಪಂ ಸದಸ್ಯರು ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು