
ಕೊಪ್ಪಳ :ಗಂಗಾವತಿ ನಗರವು ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ಅಮೃತ್ ಸಿಟಿ ಯೋಜನೆಯಡಿ ಅಭಿವೃದ್ಧಿಗೆ ಆಯ್ಕೆಯಾಗಿದ್ದು, ಸದರಿ ಯೋಜನೆಯಡಿ ಗಂಗಾವತಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗಿರುತ್ತದೆ.
ಆದರೆ ಸದರಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ. ಅದೇರೀತಿ ಕಳಪೆ ಕಾಮಗಾರಿಗಳ ಬಗ್ಗೆ ಮಾದ್ಯಮಗಳಲ್ಲಿಯೂ ಸುದ್ದಿಗಳು ಪ್ರಸಾರವಾಗಿರುತ್ತವೆ. ಅಲ್ಲದೇ ಎಷ್ಟೋ ಕಾಮಗಾರಿಗಳು ಅಪೂರ್ಣಗೊಂಡಿರುವುದಲ್ಲದೇ, ಇನ್ನು ಕೆಲವು ವಾರ್ಡುಗಳಲ್ಲಿನ ಸಾರ್ವಜನಿಕರಿಗೆ ರಸ್ತೆ, ಚರಂಡಿ, ಕುಡಿಯುವ ನೀರು ಸರಬರಾಜು ಇತ್ಯಾದಿಗಳ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುವುದಿಲ್ಲ. ಹೀಗಿರುವಾಗ ಗಂಗಾವತಿ ನಗರವು ಅಮೃತ್ ಸಿಟಿ ಆಗಲು ಹೇಗೆ ಸಾಧ್ಯ?

ಆದ್ದರಿಂದ ಅಮೃತ್ ಸಿಟಿ ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಯವರೆಗೂ ನಡೆದ ಎಲ್ಲಾ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಬೇಕು, ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲ ಹೋರಾಟಗಳನ್ನು ರೂಪಿಸಲಾಗುವುದು ಮತ್ತು ಸರ್ಕಾರದ ಗಮನಕ್ಕೆ ತಂದು ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತುಗೊಳಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು.
ಕಾರಣ ಕೂಡಲೇ ಸದರಿ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಲು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಬಸವರಾಜ ಮ್ಯಾಗಳಮನಿ……