ಕೊಪ್ಪಳ: ಗಂಗಾವತಿ ಅಮೃತ್ ಸಿಟಿ ಯೋಜನೆಯಡಿ ಗುತ್ತಿಗೆ ಪಡೆದಿರುವ ಕಾಮಗಾರಿ ವೀಕ್ಷಣೆಗೆ, ರಾಜ್ಯ ಸರ್ಕಾರ ಖಾಸಗಿ ಸಂಸ್ಥೆಗೆ ಗುಣಮಟ್ಟ ಪರಿಶೀಲನೆಗೆ ಅನುಮತಿ ನೀಡಿದ್ದು,ಗುತ್ತಿಗೆ ಪಡೆದ ಸಂಸ್ತೆಯೂ ಮೇಲುಸ್ತುವಾರಿ ನಿರ್ಲಕ್ಷ್ಯವಹಿಸಿ ಕೋಟಿ,ಕೋಟಿ ಬೋಗಸ್ ಬಿಲ್ ಅಕ್ರಮದಲ್ಲಿ ಅಧಿಕಾರಿಗಳು, ಹಾಗೂ ಖಾಸಗಿ ಸಂಸ್ಥೆ ಪಾಲು ಪಡೆದುಕೊಂಡಿದೆ ಎನ್ನುವ ಆರೋಪ ಕೇಳಿಬಂದಿತ್ತು ಆದರೆ ಅದಕ್ಕೆ ಪೂರಕ ಎಂಬಂತೆ ಈಗ ಅಡಿಯೋವೊಂದು ಹೊರಬಿದ್ದಿದೆ.

ಕೊಪ್ಪಳ ಗಂಗಾವತಿ ನಗರದಲ್ಲಿ ಜಾರಿಯಲ್ಲಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಮೃತ್ ಸಿಟಿ ಯೋಜನೆಯಲ್ಲಿ ಕೊಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.  ಇಲಾಖೆಯ ಅಮೃತ ಸಿಟಿ ಯೋಜನೆ ಯಲ್ಲಿ ಕೋಟಿ ಕೋಟಿ ಭ್ರಷ್ಟಚಾರ ಮುಚ್ಚಿಹಾಕುವ ವಿಚಾರವನ್ನು ಫೋನ್ ಸಂಭಾಷಣೆಯಲ್ಲಿ ಗಂಗಾಧರ (ಕಾರ್ಯಪಾಲಕ ಅಭಿಯಂತರರು )ಶಂಕರಗೌಡ (ಪ್ರಭಾರಿ AEE) ಮಾತನಾಡಿದ ಆಡಿಯೋ ವೈರಲ್ ಆಗಿ ಖಾಸಗಿ ವಹಿನಿಯಲ್ಲೂ ಸುದ್ದಿ ಆಗಿದೆ ಅಧಿಕಾರಿಗಳು ಕೋಟಿ, ಕೋಟಿ ರೂ. ಡೀಲ್ ಮಾಡಿದರಾ ಎಂಬ ಪ್ರಶ್ನೆ ಗೆ ಉತ್ತರ ಎಂಬಂತೆ ಸಂಭಾಷಣೆ ವಿಚಾರ ಮಾತುಕತೆ ನಡೆದ ಆಡಿಯೋ ಸಂಚಲನ ಮೂಡಿಸಿದೆ ಹಾಗೂ ಭಾರೀ  ಭ್ರಷ್ಟಾಚಾರ ನಡೆದಿದೆ ಎಂಬುದರ ಸಾಕ್ಷಿ ಈ ಆಡಿಯೋ ಎನ್ನಲಾಗುತ್ತಿದೆ.
ಏನೇ ಆಗಲಿ ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆದಾಗ ಮಾತ್ರ ಸತ್ಯಾ ಸತ್ಯತೆ ತಿಳಿಯಲಿದೆ.

error: Content is protected !!