ರಾಯಚೂರ :ಯಾಪಲದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯ *ಗಾಜರಾಳ* ಗ್ರಾಮದಲ್ಲಿ ಕೃಷ್ಣಾ ನದಿಯಿಂದ ಗಾಜರಾಳು ಕೆರೆ ತುಂಬುವ ಯೋಜನೆಗೆ ಶಾಸಕ ಬಸನಗೌಡ ದದ್ದಲ್ ರವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು.

ರಾಯಚೂರು ಗ್ರಾಮೀಣ ಕ್ಷೇತ್ರವನ್ನು ಸಂಪೂರ್ಣವಾಗಿ ನೀರಾವರಿ ಮಾಡುವ ಉದ್ದೇಶದಿಂದ ನಾನು ಶಾಸಕನಾಗಿ ಆಯ್ಕೆಯಾದ ದಿನದಿಂದಲೂ ಶ್ರಮಿಸುತ್ತಿದ್ದೇನೆ,

*ಗಾಜರಾಳ ಗ್ರಾಮದಲ್ಲಿ ಎಸ್ ಸಿಪಿ ಯೋಜನೆ ಅಡಿ ಎರಡು ಕೋಟಿ ರೂ ಕಾಮಗಾರಿಗೆ(ಸಣ್ಣ ನೀರಾವರಿ ಇಲಾಖೆ) ಚಾಲನೆ ನೀಡಿ ಮಾತನಾಡಿದ ಶಾಸಕರು*

ನನ್ನ ಕ್ಷೇತ್ರವನ್ನು ನೀರಾವರಿ ಯೋಜನೆಗೆ ಜಾರಿಗೆ ತರಲು ಸತವಾಗಿ ನನ್ನನ್ನು ಆಯ್ಕೆ ಮಾಡಿದ ದಿನದಿಂದಲೂ ಕ್ಷಮಿಸುತ್ತಿದ್ದೇನೆ ನಿಮ್ಮ ಋಣ ನಮ್ಮ ಮೇಲಿದೆ ಋಣ ತೀರಿಸಲು ಆಗುವುದಿಲ್ಲ, ನಿಮಗಾಗಿ ಕ್ಷೇತ್ರದ ಜನರಿಗಾಗಿ ದುಡಿಯುತ್ತೇನೆ,

ರೈತರ ಆದಾಯ ದ್ವಿಗುಣಗೊಳ್ಳಬೇಕಾದರೆ ನೀರಾವರಿ ಸೌಲಭ್ಯ ಬಹಳ ಮಹತ್ವವಾಗಿದೆ ಅವಶ್ಯಕವಾಗಿರುತ್ತದೆ.

ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದು ಇಂದು ಕೆರೆ ತುಂಬುವ ಯೋಜನೆಗೆ ಅಡಿಗಲ್ಲು ಮಾಡಲಾಗಿದೆ ಪೈಪುಗಳು ಸಹ ಬಂದಿವೆ.

ಇಂದಿನಿಂದ ಕಾಮಗಾರಿ ಪ್ರಾರಂಭವಾಗುತ್ತದೆ ಈ ಭಾಗದಲ್ಲಿ ಹೆಚ್ಚಾಗಿ ತೋಟಗಾರಿಕೆ ಬೆಳೆಗಳು ಇರುವುದರಿಂದ ತುಂಬಾ ಅನುಕೂಲವಾಗುತ್ತದೆ ಅಂತರ್ಜಾಲದ ಮಟ್ಟ ಕಡಿಮೆ ಇದೆ ಈ ಕೆರೆ ತುಂಬುವ ಯೋಜನೆಯಿಂದ ಬಹಳಷ್ಟು ಅನುಕೂಲವಾಗುತ್ತದೆ ಜೊತೆಗೆ ಅಂತರ್ಜಲದ ಮಟ್ಟವು ಕೂಡ ಹೆಚ್ಚಿಸುತ್ತದೆ.

ಕಾಮಗಾರಿ ಪ್ರಾರಂಭವಾದಾಗ ರೈತರ ಹೊಲದಲ್ಲಿ ಪೈಪ್ ಹಾಕುವಾಗ ಪರಸ್ಪರ ಸಹಕಾರ ಮಾಡಬೇಕು ಜೊತೆಗೆ ನನ್ನ ರೈತರಿಗೆ ನೀರು ಲಭ್ಯವಾಗುತ್ತದೆ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕು,

ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ ಇದು ಒಬ್ಬರಿಗೆ ಸೀಮಿತವಾದ ಯೋಜನೆ ಅಲ್ಲ ನನ್ನ ರೈತರಿಗೆ ತುಂಬಾ ಅನುಕೂಲವಾಗುತ್ತದೆ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ,

ನಿರಂತರವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಮೂಲಕ ರಾಯಚೂರು ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಸತತವಾಗಿ ದುಡಿಯುತ್ತೇನೆ ಎಂದರು.

error: Content is protected !!