
ಕೋಪ್ಪಳ: ತಾಲ್ಲೂಕಿನ ಜಬಲಗುಡ್ಡ ಹತ್ತಿರ ಗಂಗಾವತಿ -ಗಿಣಿಗೇರಾ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಬೆಳಗಿನ ಜಾವ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ತಾಯಿ ಹಾಗೂ ಮಗ ಮೃತಪಟ್ಟಿದ್ದಾರೆ.
ಮೃತರು ಕೊಪ್ಪಳದ ಹಮಾಲರ ಕಾಲೊನಿಯ ಅಭಿಜಿತ್ ಸಿಂಗ್ (34) ಹಾಗೂ ಅವರ ತಾಯಿ ಜ್ಯೋತಿ ಸಿಂಗ್ (60)ಎಂದು ಗುರುತಿಸಲಾಗಿದೆ.
ಅಭಿಜಿತ್ ಕುಟುಂಬ ಸದಸ್ಯರಾದ ಶ್ವೇತಾ ಮತ್ತು ಅವರ ಇಬ್ಬರು ಮಕ್ಕಳು ಗಾಯಗೊಂಡಿದ್ದು ಕೊಪ್ಪಳದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅಭಿಜಿತ್ ಸಿಂಗ್ ವಿವೊ ಒಪ್ಪೊ ಮೊಬೈಲ್ ಫೋನ್ ಕಂಪನಿಯ ಉತ್ತರ ಕರ್ನಾಟಕದ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಖರೀದಿಸಿದ್ದ ಕಾರ್‌ನಲ್ಲಿ ಹೋಗುವಾಗ ಈ ಘಟನೆ ನಡೆದಿದೆ.