
ಕುಂದಾಪುರ : ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿಮಂಜೇಶ್ವರ ಗ್ರಾಮದ 5ನೇ ವಾರ್ಡ್ ಕೊಡೇರಿ ತಾವರೆಕೆರೆ ಎಂಬಲ್ಲಿ ಸ್ಥಳೀಯರು ಚುನಾವಣೆ ಬಹಿಷ್ಕರಿಸಿ ಬ್ಯಾನರ್ ಅಳವಡಿಸಿದ್ದಾರೆ.
ಕಿರಿಮಂಜೇಶ್ವರ ಗ್ರಾಮದ ತಾವರೆಕೆರೆಯಲ್ಲಿ 12 ಮನೆಗಳಿದ್ದು 70 ಮತಗಳಿವೆ ರಸ್ತೆ ಸರಿಪಡಿಸಿ ಕೊಡದೆ ಮತಗಳನ್ನು ಕೇಳಲು ಬರಬೇಡಿ ಎಂದು ಬ್ಯಾನರ್ ಅಳವಡಿಸಿ ಚುನಾವಣಾ ಬಹಿಷ್ಕಾರ ಹಾಕಿದ್ದಾರೆ.
ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಹಿಂದುಳಿದ ಗ್ರಾಮಗಳು ಚುನಾವಣೆ ಬಹಿಷ್ಕರಿಸಿ ಬ್ಯಾನರ್ ಅಳವಡಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.