
ಗಂಗಾವತಿ : 21ರಂದು ಶ್ರೀಆದಿ ಶಕ್ತಿ ದುರ್ಗಾದೇವಿ ದೇವಸ್ಥಾನದಲ್ಲಿ ತ್ಯಾಗರತ್ನ ಎಂಬ ಕಿರುಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಗಮಿಸಿದ ರಾಜವಂಶಸ್ಥರು ಶ್ರೀಮಾನ್ ಕೃಷ್ಣದೇವರಾಯ ಮತ್ತು ಅವರ ಧರ್ಮಪತ್ನಿಯಾದ ರತ್ನಪ್ರಭ ಮತ್ತು ಗಂಗಾವತಿ ಕ್ಷೇತ್ರದ ಸಮಾಜ ಸೇವಕರದ ಮಂಜುನಾಥ್ ಕಲಾಲ್ ಹಾಗೂ ಕವಿಗಳಾದ ಹುಸೇನ್ ಸಾಬ್ ಪಾಟೀಲ್ ಮತ್ತು ಊರಿನ ಗ್ರಾಮಸ್ಥರಾದ ಅಯ್ಯನಗೌಡ ಪಾಟೀಲ್. ಗಿರಿರಾಜ ಮದ್ಲಿ. ಹೊನ್ನಪ್ಪ ವಿ ಸ್ ಸ್ ನ್ ಸದ್ಯಸರು ದುರ್ಗಾದೇವಿ ದೇವಸ್ಥಾನದ ಅರ್ಚಕರು ಸಮ್ಮುಖದಲ್ಲಿ ಬಿಡುಗಡೆ ಜರುಗಿತು.

ಚಿತ್ರದ ಬಗ್ಗೆ ಮಾತಾಡಿದ ನಿರ್ದೇಶಕ ರವಿರಾಜ್ ಗಂಗಾವತಿ ರವರು ಹಳ್ಳಿ ಸೊಗಡಿನ ಕಥೆ ಇದಾಗಿದ್ದು ಹಳ್ಳಿ ಜನರ ಬದುಕು ಆಧಾರಿತ ಸಂದೇಶ ನೀಡುವುದು ತ್ಯಾಗರತ್ನ ಆಗಿದ್ದು ತಂದೆ ಮಗನ ಬಾಂದವ್ಯ ಜೊತೆ ಪ್ರೀತಿಯ ಪಯಣದೊಂದಿಗೆ ಮನರಂಜಿಸೋ ಚಿತ್ರ ತ್ಯಾಗರತ್ನ . ಗ್ರಾಮೀಣ ಭಾಗದಲ್ಲಿ ಚಿತ್ರೀಕರಣಗೊಂಡಿದ್ದು ಇನ್ನು ಕೆಲವೇ ದಿನಗಳಲ್ಲಿ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹದೊಂದಿಗೆ ಶ್ರೀ ಫಲಚಾರಿ ಸಿನಿ ಪ್ರೊಡಕ್ಷನ್ ಚಾನೆಲ್ ನಲ್ಲಿ ಬರಲಿದೆ ಎಲ್ಲರು ನೋಡುವದರ ಮುಖಾಂತರ ಗ್ರಾಮೀಣ ಭಾಗದ ಕಲಾವಿದರನ್ನು ಗುರುತಿಸುವದಾಗಿ ಮಾತಾಡಿದರು