ಗಂಗಾವತಿ: ಕೋಮುಗಲಭೆಗೆ ಆದ್ಯತೆ ನೀಡುವ ಟಿಪ್ಪು ಭಕ್ತರು ಬೇಕೋ, ಶ್ರೀ ಅಂಜನೇಯ್ಯನ ಭಕ್ತರು ಬೇಕೋ ನೀವೆ ತೀರ್ಮಾನಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನವೀನ್ ಕುಮಾರ್ ಕಟೀಲ್ ಹೇಳಿದರು.

ಅವರು ಪೇಜ್ ಪ್ರಮುಖರ ವಿಜಯ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಬರುವ ಚುನಾವಣೆಯಲ್ಲಿ ಕಮಲ ಅರಳುತ್ತೆ, ಹುಲಿ ಕಾಡಿಗೆ ತೆರಳುತ್ತೆ, ಬಂಡೆ ಛಿದ್ರವಾಗುತ್ತೆ, ಭಿನ್ನಾಭಿಯದ ಕೂಟ ಕಾಂಗ್ರೆಸ್ ಗೆಲ್ಲಲ್ಲ, ಸಿದ್ದುಗೆ ಕ್ಷೇತ್ರಗಳಿಲ್ಲ, ಭಯೋತ್ಪಾದಕರಿಗೆ ಪ್ರೋತ್ಸಾಹಿಸುವವರಿಗೆ ಮತ ಹಾಕಬೇಡಿ, ಅಭಿವೃದ್ಧಿ ಪರ ಬಿಜೆಪಿಗೆ ಆಶೀರ್ವದಿಸಿ ಎಂದು ಕೋರಿದರು.

ಬಾಲಕೋಟ್, ಸರ್ಜಿಕಲ್ ಸ್ಟ್ರೈಕ್, ಕಾಶ್ಮೀರದ ನೆಲದಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರಧ್ವಜ ಹಾರಿದ ಕೀರ್ತಿ ಬಿಜೆಪಿಗೆ ಹುಬ್ಬಳ್ಳಿಯೀದ್ಗಾ ಸ್ಥಿತಿಯನ್ನು ಎದುರಿಸಿದ್ದೇವೆ, ಉಕ್ರೇನ್ ರಷ್ಯದಲ್ಲಿ ಸಿಲುಕಿದ ವಿದ್ಯಾರ್ಥಿಗಳನ್ನು ಗೌರವದಿಂದ ಭಾರತಕ್ಕೆ ಕಳುಹಿಸಿದರು, ಕೋವಿಡ್ ಕಾಲ ಘಟ್ಟದಲ್ಲೇ ವಿಶ್ವದ ಮೊದಲು ಔಷಧಿ ಕಂಡುಹಿಡಿದು ದೇಶದ ಎಲ್ಲರಿಗೆ     ಲಸಿಕೆ ಹಾಕಲಾಯಿತು ಆದರ್ಶ ಪುರುಷ ಮೋದಿಜಿ ಕೈ ಬಲ ತುಂಬಲು ಬಿಜೆಪಿಗೆ ನೀವು ಮತ ಹಾಕಿ ಗೆಲ್ಲಿಸಿ, ವಿಶ್ವಕ್ಕೆ ಯೋಗ ಪರಿಚಯಿಸಿದ್ರು, ನಮಾಮಿ ಗಂಗೆ ಮೂಲಕ ಗಂಗಾರಾತಿ,ರಾಮಮಂದಿರ ಕಟ್ಟಿದ ಕೀರ್ತಿ ಮೋದಿಗೆ ಸಲ್ಲುತ್ತೆ ಎಂದು ಗುಣಗಾನ ಮಾಡಿದರು.

ಕಾಂಗ್ರೆಸ್ ನಾಯಕರು ಹತಾಶೆ:
ವಾಮನ ರೂಪದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕರನ್ನು   ಪಾತಾಳಕ್ಕೆ ತುಳಿದ ಅನುಭವ ಈ ಜನಸ್ತೋಮದಿಂದ ನನಗಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ,  ಪ್ರಧಾನಿ ಮೋದಿಯವರು ರಾಜಕಾರಣಿಯಾಗಿ, ಬಂಧುವಾಗಿ ವಿಶ್ವದ ಗಮನ ಸೆಳೆದಿದ್ದಾರೆ. ತಾಯಿ ಹೀರಾಬೇನ್ ಅವರು ತೀರಿದ ಸಂದರ್ಭದಲ್ಲಿ ಅವರು ನಡೆದುಕೊಂಡ ರೀತಿಯೆ ಇದಕ್ಕೆ ಸಾಕ್ಷಿ, ನೀರಾವರಿ, ಶಿಕ್ಷಣ, ಮೂಲಸೌಕರ್ಯಕ್ಕೆ ಸಿಎಂ ಬೊಮ್ಮಾಯಿ ಕೊಡುಗೆ ಅಪಾರ, ಗಂಗಾವತಿ ಬಿಜೆಪಿ ಕಾರ್ಯಕರ್ತರ ಅಪಾರ ಶ್ರಮದ ಫಲವಾಗಿ ಎರಡು ಬಾರಿ ಆಯ್ಕೆಯಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಸೂರಿಬಾಬು, ವೀರಭದ್ರಪ್ಪ ನಾಯಕ, ವಿವೇಕಾನಂದ ವಕೀಲರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು.

ಸಚಿವ ಆನಂದ್ ಸಿಂಗ್, ಸಚಿವ ಹಾಲಪ್ಪ ಆಚಾರ್, ಸಂಸದ ಕರಡಿ ಸಂಗಣ್ಣ, ಶಾಸಕರಾದ ಬಸವರಾಜ್ ದಡೆಸುಗೂರು, ಹೇಮಲತಾ ನಾಯಕ, ಮಾಜಿ ಸಚಿವ ಸಾಲೋಣಿ ನಾಗಪ್ಪ, ಮಾಜಿ ಶಾಸಕರಾದ ಜಿ.ವೀರಪ್ಪ ಕಾಡಾ ಮಾಜಿ ಅಧ್ಯಕ್ಷರಾದ ಗಿರೇಗೌಡ, ತಿಪ್ಪೆರುದ್ರಸ್ವಾಮಿ, ಕೊಪ್ಪಳ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ್, ಬಿಜೆಪಿ ಹಿಂದುಳಿದ ವರ್ಗದ ಕೊಪ್ಪಳ ಜಿಲ್ಲಾಧ್ಯಕ್ಷ ಅಮರಜ್ಯೋತಿ ವೆಂಕಟೇಶ,  ನಗರ ಘಟಕದ ಅಧ್ಯಕ್ಷ ಕಾಶಿನಾಥ ಚಿತ್ರಗಾರ್,   ನಗರಸಭಾ ಸದಸ್ಯರು ವಿವಿಧ ಘಟಕದ ಪ್ರಮುಖರು ಇದ್ದರು.

error: Content is protected !!